Breaking News
Home / Featured / ಯಾವ ರಾಶಿಯವರಿಗೆ ಯಾವ job ಬೆಸ್ಟ್ ಗೊತ್ತಾ..?ಇಲ್ಲಿದೆ ನೋಡಿ ನೀವು ಯಾವ ಕೆಲಸ ಆಯ್ಕೆ ಮಾಡಿಕೊಂಡ್ರೆ ಉತ್ತಮ ಅನ್ನೋದು..!

ಯಾವ ರಾಶಿಯವರಿಗೆ ಯಾವ job ಬೆಸ್ಟ್ ಗೊತ್ತಾ..?ಇಲ್ಲಿದೆ ನೋಡಿ ನೀವು ಯಾವ ಕೆಲಸ ಆಯ್ಕೆ ಮಾಡಿಕೊಂಡ್ರೆ ಉತ್ತಮ ಅನ್ನೋದು..!

ನೀವೂ ಪದವಿಧರರಾಗಿದ್ದು ಯಾವ ಕೆಲಸವೂ ಹೊಂದಾಣಿಕೆಯಾಗುತ್ತಿಲ್ಲವೇ? ಕೆಲಸವಿದ್ದರೂ ಕಿರಿಕಿರಿ ಉಂಟಾಗುತ್ತಿದೆಯೇ? ನಿಮ್ಮ ಭವಿಷ್ಯದನುಸಾರ ನಿಮಗೆ ಯಾವ ಕೆಲಸ (ಫ್ರೋಫೆಶನ್) ಸರಿಯಾದದ್ದು,ಯಾವ ಕೆಲಸ ಮಾಡಿದ್ರೆ ನಿಮ್ಮ ಭವಿಷ್ಯ ಉಜ್ವಲವಾಗಲಿದೆ ಎಂಬುದನ್ನು ತಿಳಿಯಬೇಕೆ? ಹಾಗಿದ್ರೆ ಮುಂದೆ ಓದಿ..

ಮೇಷ :
ಈ ರಾಶಿಯವರು ತುಂಬಾ ಉತ್ಸಾಹಿಗಳು, ಸೃಜನ ಶೀಲತೆ ಹೊಂದಿರುವ ಬೆಸ್ಟ್‌ ವ್ಯಕ್ತಿಗಳಾಗಿರುತ್ತಾರೆ. ನಿಮ್ಮ ರಾಶಿಗೆ ಸೂಕ್ತವಾದ ಉದ್ಯೋಗಗಳು ಎಂದರೆ ಉದ್ಯಮಿ, ಮಾರಾಟ, ಜಾಹೀರಾತು, ಸಾರ್ವಜನಿಕ ಸಂಬಂಧಗಳು, ಸೈನಿಕ, ರೆಸ್ಕ್ಯೂ ವರ್ಕರ್‌, ಸರ್ಕಾರಿ ಸಂಬಂಧಿತ ಉದ್ಯೋಗಗಳು, ರಾಜಕೀಯ, ಟೆಲಿವಿಷನ್.

ವೃಷಭ :
ನೀವು ಹಾರ್ಡ್‌ವರ್ಕರ್‌, ಪ್ರಾಮಾಣಿಕ, ಕಠಿಣ ಪರಿಶ್ರಮಿ ವ್ಯಕ್ತಿ. ನಿಮಗೆ ಸೂಕ್ತವಾದ ಉದ್ಯೋಗ ಶಿಕ್ಷಕ, ಎಂಜಿನಿಯರ್, ವಕೀಲ, ಡಿಸೈನರ್, ಲ್ಯಾಂಡ್ಸ್ಕೇಪರ್, ಶೆಫ್‌, ಕಂಪ್ಯೂಟರ್ ಪ್ರೋಗ್ರಾಮರ್, ತಂತ್ರಜ್ಞ, ವ್ಯವಸ್ಥಾಪಕ ಸಹಾಯಕ.

ಮಿಥುನ :
ಬುದ್ಧಿವಂತ, ಎಲ್ಲಾ ಸಂದರ್ಭಕ್ಕೂ ಹೊಂದಿಕೊಳ್ಳುವ ಹಾಗೂ ಸರಿಯಾಗಿ ನಿರ್ಧಾರ ತೆಗೆದುಕೊಳ್ಳುವಂತಹ ವ್ಯಕ್ತಿತ್ವ. ನೀವು ಮೀಡಿಯಾ, ಜಾಹಿರಾತು, ಮಾರ್ಕೆಟಿಂಗ್‌, ಜರ್ನಲಿಸಂ, ವ್ಯಾಪಾರಿ, ಸ್ವಿಚ್ಬೋರ್ಡ್ ಆಪರೇಟರ್‌, ತಾಂತ್ರಿಕ ಬೆಂಬಲ, ಶಿಕ್ಷಕ, ವಾಸ್ತುಶಿಲ್ಪಿ, ಮಷಿನ್‌ ಆಪರೇಟರ್‌, ರೆಸ್ಕ್ಯೂ ವರ್ಕರ್‌ ಆಗಿ ಉದ್ಯೋಗ ಮಾಡಬಹುದು.

ಕರ್ಕಾಟಕ :
ಕೇರಿಂಗ್‌, ಅರ್ಥಗರ್ಭಿತ, ಸೃಜನಶೀಲ, ಪ್ರಿಸರ್ವೇಟೀವ್‌ ಮತ್ತು ಮೂಡಿ ವ್ಯಕ್ತಿತ್ವ ಹೊಂದಿದ ವ್ಯಕ್ತಿ ನೀವು. ರಿಯಲ್‌ ಎಸ್ಟೇಟ್‌, ಇಂಟೀರಿಯರ್‌ ಡಿಸೈನ್‌, ಮನಶಾಸ್ತ್ರಜ್ಞ, ಶಿಕ್ಷಕ, ಥೆರಪಿಸ್ಟ್‌, ಗಾರ್ಡನರ್, ಸಾಮಾಜಿಕ ಕಾರ್ಯಕರ್ತ, ಮಕ್ಕಳ ರಕ್ಷಣೆ, ಮಾನವ ಸಂಪನ್ಮೂಲ, ವಕೀಲ, ಸಿಇಒ, ಸೈನಿಕ ಮೊದಲಾದ ಕ್ಷೇತ್ರಗಳಲ್ಲಿ ಕರಿಯರ್‌ ಆರಂಭಿಸಬಹುದು.

ಸಿಂಹ :
ವಿಶ್ವಾಸ, ಮಹತ್ವಾಕಾಂಕ್ಷೆಯ, ಸೃಜನಶೀಲ, ಜೆನೆರಸ್‌ ಮತ್ತು ಡಾಮಿನೇಟಿಂಗ್‌ ವ್ಯಕ್ತಿಗಳು. ನಿಮಗೆ ಉದ್ಯಮ, ಮನರಂಜನೆ, ರಾಜಕೀಯ, ಸಾರ್ವಜನಿಕ ಸಂಬಂಧಗಳು, ಸಿಇಒ, ಕಲಾವಿದ, ಟೂರ್‌ ಗೈಡ್‌, ರಿಯಲ್ ಎಸ್ಟೇಟ್ ಏಜೆಂಟ್, ಇಂಟೀರಿಯರ್‌ ಡಿಸೈನ್‌, ಫ್ಯಾಷನ್ ಡಿಸೈನರ್, ಸರ್ಕಾರಿ ಉದ್ಯೋಗ, ಮತ್ತು ಮಾರಾಟ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಇದೆ.

ಕನ್ಯಾ :
ಡಿಟೈಲ್‌ ಓರಿಯೆಂಟ್‌, ಹಾರ್ಡ್‌ವರ್ಕಿಂಗ್‌ ಹಾಗೂ ವಿಶ್ಲೇಷಣಾತ್ಮಕ ವ್ಯಕ್ತಿತ್ವ ಕನ್ಯಾ ರಾಶಿಯವರದ್ದು. ಇವರಿಗೆ ಬೆಸ್ಟ್‌ ಕರಿಯರ್‌ ಇರೋದು ಸಂಪಾದಕ, ಅಕೌಂಟೆಂಟ್, ಎಂಜಿನಿಯರಿಂಗ್, ಗ್ರಾಫಿಕ್ ವಿನ್ಯಾಸ, ಫ್ಲೋರಿಸ್ಟ್‌, ಶಿಕ್ಷಕ, ವಿಮರ್ಶಕ, ತಂತ್ರಜ್ಞ, ಟ್ರಾನ್ಸ್‌ಲೇಟರ್‌, ಇನ್‌ವೆಸ್ಟಿಗೇಟರ್‌, ಸಂಖ್ಯಾಶಾಸ್ತ್ರಜ್ಞ ಕ್ಷೇತ್ರದಲ್ಲಿ.

ತುಲಾ :
ಇವರು ಡಿಪ್ಲಮ್ಯಾಟಿಕ್‌, ಆರ್ಟಿಸ್ಟಿಕ್‌ ಮತ್ತು ಇಂಟೆಲಿಜೆಂಟ್‌ ವ್ಯಕ್ತಿಗಳು. ವಾಸ್ತುಶಿಲ್ಪಿ, ಡಿಸೈನರ್, ವಕೀಲ, ಕೌನ್ಸಿಲರ್‌, ಡಿಪ್ಲಾಮೇಟ್‌, ಡ್ಯಾನ್ಸರ್‌, ಸೇಲ್ಸ್‌ಪರ್ಸನ್‌, ಹೋಸ್ಟ್, ಸಮಾಲೋಚಕ, ಟ್ರಾವೆಲ್‌ ಏಜೆಂಟ್‌, ಮತ್ತು ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಿ.

ವೃಶ್ಚಿಕ :
ಡೈನಾಮಿಕ್‌, ಕ್ರಿಯೇಟಿವ್‌, ರಿಸೋರ್ಸ್‌ಫುಲ್‌ ಹಾಗೂ ಸ್ಟ್ರಾಂಗ್‌ ಪರ್ಸನಾಲಿಟಿ. ಇವರಿಗೆ ಸೂಕ್ತವಾದ ಕರಿಯರ್‌ ಆಯ್ಕೆ ಎಂದರೆ ಮನಶ್ಶಾಸ್ತ್ರಜ್ಞ, ಡಿಸೈನರ್, ಕಾನೂನು, ಚಾರಿಟೇಬಲ್‌ ಕಾರ್ಯ, ಪತ್ತೇದಾರಿ, ವಕೀಲ, ಶಿಕ್ಷಕ, ವಿಜ್ಞಾನಿ, ಸರ್ಜನ್‌, ಭೌತಶಾಸ್ತ್ರಜ್ಞ.

ಧನು :
ತಾತ್ವಿಕ ಆಶಾವಾದಿ ಮತ್ತು ನೇರ ಸ್ವಭಾವದ ವ್ಯಕ್ತಿಗಳು ಇವರು. ಉದ್ಯಮಿ, ಏರ್‌ಲೈನ್ ಪೈಲಟ್, ಕ್ರೀಡೆ ಉದ್ಯಮ, ಪೊಲೀಸ್ ಅಧಿಕಾರಿ, ಫ್ಲೈಟ್ ಅಟೆಂಡೆಂಟ್, ಸಚಿವ, ಪ್ರಾಣಿಗಳ ತರಬೇತುದಾರ, ಸಂಪಾದಕ, ಪಬ್ಲಿಕ್‌ ರಿಲೇಶನ್‌ ಮತ್ತು ಕೋಚ್‌ ಆಗಿ ಕಾರ್ಯ ನಿರ್ವಹಿಸಬಹುದು.

ಮಕರ :
ಆಂಬೀಶಿಯಸ್‌, ರಿಸೋರ್ಸ್‌ಫುಲ್‌, ಸಹನಶೀಲ ಹಾಗೂ ಅಥೋರಿಟೇರಿಯನ್‌ ವ್ಯಕ್ತಿತ್ವ. ಇವರಿಗೆ ಭವಿಷ್ಯ ಇರುವ ಕ್ಷೇತ್ರಗಳು ಎಂದರೆ ಹಣಕಾಸು, ವ್ಯಾಪಾರ ಅಭಿವೃದ್ಧಿ, ವೈದ್ಯ, ತರಬೇತುದಾರ, ಮ್ಯಾನೇಜರ್, ನಿರ್ವಾಹಕ, ಸಂಪಾದಕ, ಬ್ಯಾಂಕರ್, ಐಟಿ ಮತ್ತು ವಿಜ್ಞಾನ ಸಂಬಂಧಿತ ಉದ್ಯೋಗಗಳು.

ಕುಂಭ :
ವಿಶ್ಲೇಷಣಾತ್ಮಕ, ಬುದ್ಧಿವಂತ, ಸೃಜನಶೀಲ, ಮತ್ತು ಛಲಗಾರ ವ್ಯಕ್ತಿತ್ವ ಇವರದ್ದು. ಇವರಿಗೆ ಆ್ಯಪ್‌ ಡೆವಲಪರ್, ಪಶುವೈದ್ಯ, ವಿಜ್ಞಾನಿ, ಎಂಜಿನಿಯರ್, ಸಂಶೋಧಕ, ಆರ್ಗನಿಕ್‌ ರೈತ, ವಿಮಾನ ಚಾಲಕ, ವಿನ್ಯಾಸಕ, ಮತ್ತು ಸಂಗೀತ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯ ಇದೆ.

ಮೀನ :
ಸಹಾನುಭೂತಿಯ, ಅರ್ಥಗರ್ಭಿತ, ಹೊಂದಿಕೊಳ್ಳುವಂತಹ ಮತ್ತು ವಿಪರೀತ ಸೂಕ್ಷ್ಮ ಸ್ವಭಾವದ ವ್ಯಕ್ತಿ ಮೀನಾ ರಾಶಿಯವರು. ಕಲಾವಿದ, ಡಿಸೈನರ್, ಮನಶ್ಶಾಸ್ತ್ರಜ್ಞ, ಮನರಂಜನೆ, ನರ್ಸ್, ಭೌತಿಕ ಚಿಕಿತ್ಸಕ, ಫಿಲೋಥ್ರೋಪಿಸ್ಟ್‌ ಮತ್ತು ಪಶುವೈದ್ಯ ಕ್ಷೇತ್ರದಲ್ಲಿ ನೀವು ನಿಮ್ಮ ಉಜ್ವಲ ಭವಿಷ್ಯವನ್ನು ಆರಂಭಿಸಬಹುದು.

About SSTV Kannada

Check Also

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮಾನಸಿಕ ರೋಗಗಳಿಗೆ ಮನೆ ಬಾಗಿಲಲ್ಲೆ ಚಿಕಿತ್ಸೆ ಲಭ್ಯ ಇಲ್ಲಿದೆ ಫುಲ್ ಡಿಟೇಲ್ಸ್..!

ಹೌದು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮಾನಸಿಕ ರೋಗಗಳಿಗೆ ಮನೆ ಬಾಗಿಲಲ್ಲೆ ಚಿಕಿತ್ಸೆ ದೊರೆಯುತ್ತದೆ ಕರ್ನಾಟಕದಲ್ಲಿ ಕಳೆದ 2016-17 ನೇ ಸಾಲಿನಿಂದ …

Leave a Reply

Your email address will not be published. Required fields are marked *

error: Content is protected !!