Breaking News
Home / Featured / ದಕ್ಷಿಣ ಕಾಶಿ ಎಂದೇ ಕರೆಯುವ ಅಂತರಗಂಗೆ ಬೆಟ್ಟವು ಪುರಾತನ ಸ್ಥಳವು ಹೌದು ಪ್ರವಾಸಿಗರ ತಾಣವು ಹೌದು ಒಮ್ಮೆ ಭೇಟಿ ನೀಡಿ..!

ದಕ್ಷಿಣ ಕಾಶಿ ಎಂದೇ ಕರೆಯುವ ಅಂತರಗಂಗೆ ಬೆಟ್ಟವು ಪುರಾತನ ಸ್ಥಳವು ಹೌದು ಪ್ರವಾಸಿಗರ ತಾಣವು ಹೌದು ಒಮ್ಮೆ ಭೇಟಿ ನೀಡಿ..!

ಕೋಲಾರಕ್ಕೆ ಹೊಂದಿಕೊಂಡಂತಿರುವ ಈ ಸ್ಥಳ ಪ್ರವಾಸಿಗರ ಹಾಟ್ ಫೇವರಿಟ್‌. ಜಿಲ್ಲಾ ಕೇಂದ್ರದಿಂದ ಸುಮಾರು 4 ಕಿ. ಮೀ. ದೂರದಲ್ಲಿ ಅಂತರಗಂಗೆ ಬೆಟ್ಟವಿದೆ.

ಅಂತರಗಂಗೆ ಬೆಟ್ಟವನ್ನು ದಕ್ಷಿಣ ಕಾಶಿ ಕ್ಷೇತ್ರ ಎಂದು ಕರೆಯಲಾಗುತ್ತದೆ. ದೇವಾಲಯದಲ್ಲಿ ಬಸವನ ಬಾಯಿಯಿಂದ ನಿರಂತರವಾಗಿ ಹರಿಯುವ ನೆಲದಡಿಯ ನೀರು ಮೀರುವ ಒಂದು ಕೊಳ ಇದೆ. ಪರ್ವತದ ಮೇಲಕ್ಕೆ ಕಡಿದಾದ, ಇಕ್ಕಟ್ಟಾದ ಹಾದಿ ಇಲ್ಲ.ಈ ಪರ್ವತದ ಸುತ್ತ ತೇರಹಳ್ಳಿ, ಪಾಪನಾಯಕನ ಹಳ್ಳಿ, ಕೆಂಚೇಗೌಡನ ಹಳ್ಳಿ ಮತ್ತು ಹಲವಾರು ಇತರದ ಏಳು ಹಳ್ಳಿಗಳಿವೆ. ಹುಣ್ಣಿಮೆಯ ದಿನದ ಸಂದರ್ಭದಲ್ಲಿ ಸಾಂಸ್ಕೃತಿಕ ಸಂಘದವರು ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸುತ್ತಾರೆ.

ಈ ಬೆಟ್ಟವು ಪರಶುರಾಮ ಹಾಗು ಜಮದಗ್ನಿಗೆ ಸಂಬಂಧಿಸಿದೆ. ಹಿಂದೂ ಪುರಾಣದ ಪ್ರಕಾರ ಕರ್ತವೀರ್ಯಾರ್ಜುನನನ್ನು ಪರಶುರಾಮನು ಕೊಂದಿದ್ದಾನೆ, ನಂತರ ಜಮದಗ್ನಿಯ ಸಾವು ಹಾಗು ರೇಣುಕಾ ಸ್ವಯಂ ಬಲಿ ಈ ಬೆಟ್ಟದ ಮೇಲೆ ನಡೆದಿದೆ. ಪರಶುರಾಮನು ಕ್ಷತ್ರಿಯ ವರ್ಗದವರನ್ನು ಕೊಲ್ಲಲು ಈ ಬೆಟ್ಟದ ಮೇಲೆ ಶಪಥ ಮಾಡಲಾಗಿದೆ. ಕಾಶಿ ವಿಶ್ವೇಶ್ವರ ದೇವಾಲಯದ ನೀರು ಬಸವನ ಬಾಯಿಂದ ಬರುವ ಅಂತರಗಂಗೆ ಎಂಬ ಜಲವೆಂದು ಭಕ್ತರ ನಂಬಿಕೆ.

ಬೆಟ್ಟದ ಮೇಲೆ ಶಿವನ ದೇವಸ್ಥಾನ, ಅದರ ಪಕ್ಕದಲ್ಲೇ ಕಲ್ಯಾಣಿ, ಗಣೇಶನ ವಿಗ್ರಹ ಹಾಗೂ ಬಸವಣ್ಣನ ಮೂರ್ತಿಯ ಬಾಯಿಯಿಂದ ನಿರಂತರವಾಗಿ ಗಂಗೆ ಹರಿಯುವುದು ಇಲ್ಲಿನ ವಿಶೇಷ. ಈ ಕಾರಣಕ್ಕೆ ಈ ಪ್ರದೇಶಕ್ಕೆ ಅಂತರಗಂಗೆ ಎಂಬ ಹೆಸರು ಬಂದಿದೆ.
ಬಸವಣ್ಣನ ಬಾಯಿಯಿಂದ ಬರುವ ನೀರಿನ ಒರತೆಯು ಈವರೆಗೆ ಒಮ್ಮೊಯೂ ನಿಂತಿಲ್ಲ. ಈ ಬೆಟ್ಟದ ಸುತ್ತ ವಾಸಿಸುತ್ತಿರುವ ನಿವಾಸಿಗಳ ಪ್ರಕಾರ, ಅಂತರಗಂಗೆ ವರ್ಷದ ಎಲ್ಲ ದಿನಗಳಲ್ಲಿಯೂ ಒಂದೇ ರೀತಿ ಹರಿಯುತ್ತದೆ.

ಹೋಗುವ ಮಾರ್ಗ
ಬೆಂಗಳೂರಿನಿಂದ ಕೋಲಾರ ಮಾರ್ಗವಾಗಿ ಸುಮಾರು 65 ಕಿ.ಮೀ. ಸಾಗಬೇಕು. ಕೇವಲ ಎರಡೂವೆರೆ ಗಂಟೆಯಲ್ಲಿ ಕೋಲಾರ ತಲುಪಬಹುದು. ಅಲ್ಲಿಂದ ನಾಲ್ಕು ಕಿ.ಮೀ. ಸಾಗಿದರೆ ಅಂತರಗಂಗೆಯ ಬುಡವನ್ನು ತಲುಪಬಹುದು. ಬೆಟ್ಟವನ್ನು ಹತ್ತಿ ಇಳಿಯಲು ಸುಮಾರು 5 ಗಂಟೆ ಅವಧಿ ಬೇಕಾಗುತ್ತದೆ. ನಗರದಿಂದ ಕೋಲಾರಕ್ಕೆ ಸಮರ್ಪಕವಾದ ವಾಹನ ವ್ಯವಸ್ಥೆಯಿದೆ. ಕೋಲಾರದಿಂದ ಅಂತರಗಂಗೆಗೆ ಆಟೊಗಳ ಮೂಲಕವೇ ಸಾಗಬೇಕು.

ಬೈಕ್‌ ಸವಾರರಿಗೆ
ಬೈಕ್‌ನಲ್ಲಿ ಹೋಗುವವರು ನಗರದ ಮೆಜೆಸ್ಟಿಕ್‌ನಿಂದ ಕೋಲಾರವನ್ನು ಸುಮಾರು ಎರಡು ತಾಸಿನಲ್ಲಿ ತಲುಪಬಹುದು ಹಾಗೂ ಕೋಲಾರದಿಂದ ಅಂತರಗಂಗೆಯನ್ನು 15 ನಿಮಿಷದಲ್ಲಿ ತಲುಪಬಹುದು.

About SSTV Kannada

Check Also

ಮುಖದ ಮೇಲಿನ ಮೊಡವೆ ಗುಳ್ಳೆ ಹೋಗಲಾಡಿಸಲು ಇಲ್ಲಿದೆ ತುಂಬ ಸರಳ ವಿಧಾನ..!

ಮುಖದ ಮೇಲಿನ ಮೊಡವೆ ಗುಳ್ಳೆಗಳು ಸಾಮಾನ್ಯವಾಗಿ ಎಲ್ಲರಿಗೂ ಬರುವುದು ಸಹಜ ಆದರೆ ಕೆಲವರಿಗೆ ಆ ಮುಖದ ಮೇಲಿನ ಮೊಡವೆ ಗುಳ್ಳೆಗಳು …

Leave a Reply

Your email address will not be published. Required fields are marked *

error: Content is protected !!