Breaking News
Home / Featured / ನಮ್ಮ ಉತ್ತಮ ಜೀವನಕ್ಕೆ ಈ ಸರಳ ಸೂತ್ರಗಳೇ ಸಾಕು ಅನಿಸುತ್ತದೆ…!

ನಮ್ಮ ಉತ್ತಮ ಜೀವನಕ್ಕೆ ಈ ಸರಳ ಸೂತ್ರಗಳೇ ಸಾಕು ಅನಿಸುತ್ತದೆ…!

ಆಧ್ಯಾತ್ಮಿಕ ಜೀವನ ನಡೆಸಲು ಸನಾತನ ಧರ್ಮದಲ್ಲಿ ಒಂದಷ್ಟು ನಿಯಮಗಳನ್ನು ನೀಡಲಾಗಿದೆ. ಈ ನಿಯಮಗಳನ್ನು ಪಾಲಿಸಿದ್ದೇ ಆದಲ್ಲಿ, ಅತ್ಯುತ್ತಮ ಜೀವನವನ್ನು ನಡೆಸಬಹುದಾಗಿದೆ ಎಂಬ ನಂಬಿಕೆ ಇದೆ.

ಅಹಿಂಸೆ ಮತ್ತು ಕೋಪವನ್ನು ನಿಗ್ರಹಿಸುವುದು
ಕೋಪದ ಕೈಗೆ ಬುದ್ಧಿ ಕೊಡಬಾರದು ಎಂದು ಹಿರಿಯರು ಹೇಳುತ್ತಾರೆ, ಕೋಪದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಯಾವುದು ಸಹ ಉತ್ತಮವಾಗುವುದಿಲ್ಲ. ಅಂತೆಯೇ ಅತ್ಯುತ್ತಮ ಜೀವನ ನಡೆಸಲು ಓರ್ವ ವ್ಯಕ್ತಿ ಅಹಿಂಸೆಯನ್ನು ಅಳವಡಿಸಿಕೊಳ್ಳಬೇಕು ಎನ್ನುತ್ತದೆ ಸನಾತನ ಧರ್ಮ. ಹೀಗೆ ಮಾಡುವುದರಿಂದ ಮನಸ್ಸು ಶಾಂತವಾಗಿರಲಿದ್ದು, ಯಾವುದೇ ವಿಷಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ದೃಢವಾಗಿ ಅತ್ಯುತ್ತಮ ಫಲಿತಾಂಶ ಬರಲಿದೆ.

ಅಗತ್ಯಕ್ಕಿಂತ ಹೆಚ್ಚಿನದ್ದನ್ನು ಉಳಿದವರ ಒಳಿತಿಗೆ ನೀಡಿ
ಸನಾತನ ಧರ್ಮದಲ್ಲಿ ಸಂಪತ್ತು ಗಳಿಸುವುದನ್ನು ತಪ್ಪು ಎಂದು ಹೇಳಲಾಗಿಲ್ಲ. ಬದಲಾಗಿ ಓರ್ವ ವ್ಯಕ್ತಿ ತನ್ನ ಅಗತ್ಯಕ್ಕಿಂತ ಹೆಚ್ಚು ಸಂಪಾದಿಸಿದರೆ ಹೆಚ್ಚು ಸಂತೋಷವಾಗಿರುತ್ತಾನೆ. ಆದರೆ ತನ್ನ ಅಗತ್ಯಗಳನ್ನು ಪೂರೈಸಿದ ನಂತರ ಉಳಿದಿದ್ದನ್ನು ಅಗತ್ಯವಿರುವ ಇತರರಿಗೆ ನೀಡುವುದರಿಂದ ಆತನ ಒಳಗಿನ ಸಂತೋಷ ಮತ್ತಷ್ಟು ಹೆಚ್ಚಾಗಲಿದೆ ಇದರಿಂದ ಮತ್ತಷ್ಟು ನೆಮ್ಮದಿಯ ಜೀವನ ನಡೆಸಬಹುದೆಂದು ಹೇಳಲಾಗಿದೆ.

ನಂಬಿಕೆ, ಆಸ್ತಿಕ್ಯ
ಇದು ಸನಾತನ ಧರ್ಮ ಮಾನವ ಕುಲಕ್ಕೆ ಮಾಡಿರುವ ಬಹು ದೊಡ್ಡ ಬೋಧನೆ, ಯಾವುದೇ ಕೆಲಸ ಮಾಡುವ ಮುನ್ನ ಶ್ರದ್ಧೆಯಿಂದ ಮಾಡಬೇಕೆಂದು ಸನಾತನ ಧರ್ಮದ ಎಲ್ಲಾ ಅವತಾರ ಪುರುಷರು ಹೇಳಿದ್ದಾರೆ. ಅಂತೆಯೇ, ಮಾಡುವ ಕೆಲಸದಲ್ಲಿ ನಂಬಿಕೆ ಇಡಬೇಕು, ಆಗ ಸಕಾರಾತ್ಮಕ ಫಲಿತಾಂಶವೇ ದೊರೆಯಲಿದೆ ಎಂಬ ನಂಬಿಕೆಯಿದೆ, ನಂಬಿಕೆ ಇದ್ದರೆ ಮೋಕ್ಷವು ಸಾಧ್ಯ ಎಂದು ಹೇಳಲಾಗಿದೆ.

ಮತ್ಸರ ತ್ಯಜಿಸುವುದು
ಯಾರನ್ನು ಸಹ ದ್ವೇಷಿಸದೆ, ಸೇಡು ತೀರಿಸಿಕೊಳ್ಳದೆ, ಕೇವಲ ತನ್ನ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಿದರೆ, ಅದರಿಂದ ಮನುಷ್ಯನ ಅಭಿವೃದ್ಧಿ ಮತ್ತಷ್ಟು ಉತ್ತಮವಾಗಲಿದೆ.

ಧ್ಯಾನ, ದೇವರ ಪೂಜೆ
ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳುವುದಕ್ಕೆ ಧ್ಯಾನ ಒಂದು ಪರಿಣಾಮಕಾರಿ ಮಾರ್ಗವಾಗಿದೆ. ಇದರಿಂದಾಗಿ ಚಿತ್ತ ಶುದ್ಧಿ ಸಾಧ್ಯವಾಗಲಿದ್ದು, ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗಲಿದೆ.

About Manju

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *