Breaking News
Home / Featured / ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಭಾಷಣ ಮಾಡಿದ ಹೆಮ್ಮೆಯ ಕನ್ನಡತಿ ನಮ್ಮ ಬೆಂಗಳೂರು ಹುಡುಗಿ ಈ ಭಾಷಣಕ್ಕೆ ತಲೆಬಾಗಿ ನಮಸ್ಕರಿಸಿದ ಮೋದಿ..!

ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಭಾಷಣ ಮಾಡಿದ ಹೆಮ್ಮೆಯ ಕನ್ನಡತಿ ನಮ್ಮ ಬೆಂಗಳೂರು ಹುಡುಗಿ ಈ ಭಾಷಣಕ್ಕೆ ತಲೆಬಾಗಿ ನಮಸ್ಕರಿಸಿದ ಮೋದಿ..!

ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಭಾಷಣ ಮಾಡಿದ ಹೆಮ್ಮೆಯ ಕನ್ನಡತಿ ನಮ್ಮ ಬೆಂಗಳೂರು ಹುಡುಗಿ ಈ ಭಾಷಣಕ್ಕೆ ತಲೆಬಾಗಿ ನಮಸ್ಕರಿಸಿದ ಮೋದಿ ಏನಿದು ಭಾಷಣ ಅನ್ನೋದು ಇಲ್ಲಿದೆ ನೋಡಿ.

ದೆಹಲಿಯಲ್ಲಿ ರಾಷ್ಟ್ರೀಯ ಯುವ ಸಂಸತ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ದೇಶದ ಬೇರೆ ಬೇರೆ ಭಾಗಗಳಿಂದ ಬಂದ ಸ್ಪರ್ಧಿಗಳು ದೇಶದ ಕುರಿತು ತಮ್ಮ ತಮ್ಮ ಅಭಿಪ್ರಾಯ, ಆಲೋಚನೆ , ಚಿಂತನೆಗಳನ್ನು ಹಂಚಿಕೊಂಡರು. ಈ ಸ್ಪರ್ಧೆಯಲ್ಲಿ ನಮ್ಮ ಬೆಂಗಳೂರಿನವರೆ ಆದ ಅಂಜನಾಕ್ಷಿಯವರು ಭಾಗವಹಿಸಿದ್ದರು.

ಎಲ್ಲಾ ಸ್ಪರ್ಧಿಗಳ ಭಾಷಣವನ್ನು ಸ್ವತಃ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಆಲಿಸಿ, ತುಂಬಾ ಚೆನ್ನಾಗಿ ಮಾತನಾಡಿದ ಪ್ರತಿಭೆಗಳಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಬೆಂಗಳೂರಿನ ಆಯುರ್ವೇದ ಮತ್ತು ಸಂಶೋಧನ ಕೇಂದ್ರದಲ್ಲಿ ಅಧ್ಯಯನ ಮಾಡುತ್ತಿರುವ ಅಂಜನಾಕ್ಷಿ ಎಂಬುವವರು ಈ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಪಡೆದು ಕರ್ನಾಟಕ ಕ್ಕೆ ಗೌರವ ತಂದು ಕೊಟ್ಟಿದ್ದಾರೆ.

ವಿಶೇಷವೆಂದರೆ ಪ್ರಧಾನಿ ನರೇಂದ್ರ ಮೋದಿಯವರು ಅಂಜನಾಕ್ಷಿ ಅವರ ಮಾತಿಗೆ ತಲೆ ಭಾಗಿ ನಮಸ್ಕರಿಸಿದ್ದಾರೆ. ಅಲ್ಲದೆ ಒಂದೂ ವರೆ ಲಕ್ಷ ಹಣ ಮತ್ತು ಪ್ರಶಸ್ತಿ ಪತ್ರವನ್ನು ಬಹುಮಾನವಾಗಿ ನೀಡಿದ್ದಾರೆ.

ಭಾರತ ಇಡೀ ಪ್ರಪಂಚದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ. ಕೆಲವರು ಇದನ್ನು ಶಾಪ ಎಂದು ಪರಿಗಣಿಸುತ್ತಾರೆ. ಆದರೆ ಈ ಯುವತಿ ಭಾರತದ ಜನಸಂಖ್ಯೆಯೇ ಈ ರಾಷ್ಟ್ರದ ಶಕ್ತಿ ಎಂದು ಹೇಳಿದ್ದಾರೆ. ಇದು ಮೋದಿಯವರ ಮೆಚ್ಚುಗೆಗೆ ಕಾರಣವಾಗಿದೆ.

ನಮ್ಮ ಭಾರತ ಪ್ರಪಂಚದ ಹೃದಯ ಭಾಗದಲ್ಲಿದೆ. ನಮ್ಮ ದೇಹಕ್ಕೆ ಹೃದಯ ಎಷ್ಟು ಮುಖ್ಯವೋ ಈ ಪ್ರಪಂಚಕ್ಕೆ ಭಾರತ ಅಷ್ಟೇ ಮುಖ್ಯವಾದದ್ದು. ಪ್ರಪಂಚದಿಂದ ಬಂದ ಎಲ್ಲವನ್ನೂ ಸ್ವೀಕರಿಸಿ ಒಳ್ಳೆಯದನ್ನು ಮಾತ್ರ ಈಡೀ ಪ್ರಪಂಚಕ್ಕೆ ಭಾರತ ಹಿಂದಿರುಗಿ ಕೊಡುತ್ತಿದೆ. ಒಂದು ಹೃದಯ ಮಾಡುವ ಕೆಲಸವನ್ನು ಮಾಡುತ್ತಾ ಬಂದಿದೆ. ಮುಂದೆಯು ಸಹ ಪ್ರಪಂಚಕ್ಕೆ ಉತ್ತಮವಾದುದನ್ನು ಕೊಡುವ ಕೆಲಸ ಭಾರತದಿಂದ ಆಗಬೇಕು ಎಂದು ಅಂಜನಾಕ್ಷೀ ಹೇಳಿದರು.

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *