Breaking News
Home / Featured / ತೆಂಗಿನಕಾಯಿ ಚಿಪ್ಪು ಬಿಸಾಡುವ ಮುನ್ನ ಗಮನಿಸಿ ಒಂದು ಚಿಪ್ಪಿನ ಬೆಲೆ 1300 ಅಂತೇ ಹೇಗೆ ಮಾರಬೇಕು ಗೊತ್ತಾ..!

ತೆಂಗಿನಕಾಯಿ ಚಿಪ್ಪು ಬಿಸಾಡುವ ಮುನ್ನ ಗಮನಿಸಿ ಒಂದು ಚಿಪ್ಪಿನ ಬೆಲೆ 1300 ಅಂತೇ ಹೇಗೆ ಮಾರಬೇಕು ಗೊತ್ತಾ..!

ಇವತ್ತಿನ ಆದುನಿಕ ಸಮಾಜದಲ್ಲಿ ಅಥವಾ ಜಗತ್ತಿನಲ್ಲಿ ಯಾವ ವಸ್ತು ಉಪಯೋಗಕ್ಕೆ ಬರಲ್ಲ ಅಂತ ತಿಳಿದುಕೊಳ್ಳಬೇಡಿ ಯಾಕೆ ಅಂದ್ರೆ ಪ್ರತಿಯೊಂದು ವಸ್ತು ಕೂಡ ಇವತ್ತಿನ ದಿನಗಳಲ್ಲಿ ಯಾವುದಾದರು ಒಂದು ಉಪಯೋಗಕ್ಕೆ ಬಂದೆ ಬರುತ್ತದೆ ಅನ್ನೋದಕ್ಕೆ ಈ ತೆಂಗಿನ ಚಿಪ್ಪು ಸಾಕ್ಷಿ ಅನ್ನೋದು ಇಲ್ಲಿದೆ ನೋಡಿ.

ತೆಂಗಿನ ಕಾಯಿ ಚಿಪ್ಪು ಆನ್ಲೈನ್ -ನಲ್ಲಿ ಮಾರಟವಾಗುತ್ತಿದೆ ಅದರ ಬೆಲೆ ಕೇಳಿದ ಎಲ್ಲರು ಬೆರಗಾಗಿದ್ದಾರೆ. ಅಮೆಜಾನ್ ಆನ್ ಲೈನ್ ಸ್ಟೋರ್ ನಲ್ಲಿ ಏನು ಬೇಕಾದ್ರೂ ಸಿಗುತ್ತೆ. ಅಂದ ಹಾಗೆ ಇನ್ಮುಂದೆ ನೀವು ಮನೆಯಲ್ಲಿ ತೆಂಗಿನ ಕಾಯಿ ಚಿಪ್ಪುನ್ನು ಬಿಸಾಡುವುದನ್ನು ನಿಲ್ಲಿಸಿ.

ಅಮೆಜಾನ್ ನ ವೆಬ್ ಸೈಟ್ ನಲ್ಲಿ ಈ ತೆಂಗಿನ ಕಾಯಿ ಒಂದು ಚಿಪ್ಪಿನ ಬೆಲೆ ಬರೋಬ್ಬರಿ 1,300 ರೂಪಾಯಿ. ರಿಬ್ರ್ಯಾಂಡೆಡ್ ನೈಸರ್ಗಿಕ ತೆಂಗಿನ ಕಾಯಿ ಕಪ್ ಬೆಲೆ 1,289ರಿಂದ ಆರಂಭವಾಗಿ 2,499 ರೂಪಾಯಿವರೆಗೂ ಇದೆ.

ತೆಂಗಿನ ಕಾಯಿಲ್ಲಿ ಬಿರುಕು, ಬಾಗಿದ ಮತ್ತು ಇತರ ಓರೆಕೋರೆ ಇರಬಹುದು’ ಎಂದು ಮಾರಾಟಕ್ಕೆ ಇರಿಸಲಾಗಿರುವ ಚಿಪ್ಪಿನ ಬಗ್ಗೆ ವಿವರಣೆ ನೀಡಲಾಗಿದೆ.ಸುಶಾನ್‌ ಪೂಜಾರಿ ಎಂಬುವರು ಟ್ವೀಟ್‌ ಮಾಡಿ “ತೆಂಗಿನ ಚಿಪ್ಪಿನ ಮೇಲೆ ಶೇ.65ರಷ್ಟು ಡಿಸ್ಕೌಂಟ್‌ ನೀಡಿ ಶ್ರೀಮಂತನಾಗುವೆ. ಬಳಿಕ ವೆಬ್‌ಸೈಟ್‌ ಅನ್ನು ಖರೀದಿಸುವೆನೋ ಎಂದು ತಿಳಿದುಕೊಳ್ಳುತ್ತೇನೆ’ ಎಂದು ಬರೆದು ಕೊಂಡಿದ್ದಾರೆ. ಕುತೂಹಲಕರ ವಿಚಾರವೆಂದರೆ ಅಮೆಜಾನ್‌ನಿಂದ ಅದನ್ನು ಖರೀದಿ ಮಾಡಿದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೋರೂಮ್‌ಗಳಲ್ಲಿ ಹೋದರೆ ಅದಕ್ಕೆ 3 ಸಾವಿರ ರೂ. ನೀಡಬೇಕು. ವೆಬ್‌ಸೈಟ್‌ನಲ್ಲಿ ಕಡಿಮೆಯಲ್ಲಿ ಸಿಕ್ಕಿದೆ ಎಂದು ಹೇಳಿ ಕೊಂಡಿದ್ದಾರೆ.

ಇದಕ್ಕೆ ಕೆಲವರು ರಿವ್ಯೂ ಮಾಡಿ, ರೇಟಿಂಗ್ ಕೂಡ ನೀಡಿ ಅಮೆಜಾನ್ ತಾಣದ ಕಾಲೆಳೆದಿದ್ದಾರೆ. ‘ಇದು ತೋರಿಸಿದ ಗಾತ್ರದಷ್ಟು ದೊಡ್ಡದಾಗಿಲ್ಲ, ಚಿಕ್ಕದಾಯಿತು’ ಅಂತ ಕೊರಗಿ ಒಬ್ಬರು ಕಮೆಂಟ್ ಮಾಡಿದ್ದರೆ, ಮತ್ತೊಬ್ಬರು, ‘ಈ ಬೆಲೆಗೆ ಅರ್ಧ ತೆಂಗಿನ ಕಾಯಿಯ ಚಿಪ್ಪು ನೀಡುವ ಬದಲು, ಎರಡು ಚಿಪ್ಪುಗಳನ್ನು ನೀಡಿದರೆ ಒಳ್ಳೇದಿತ್ತು ಅಂತ ಕಿಚಾಯಿಸಿದ್ದಾರೆ. ಮತ್ತು ಈ ಕೆಲಸಕ್ಕೆ ಬಾರದ ಚಿಪ್ಪುಗಳನ್ನು ಯಾರು ಖರೀದಿ ಮಾಡುತ್ತಾರೋ, ಅವರನ್ನು ನೋಡಿದ್ರೆ ಪಾಪ ಅನಿಸ್ತಿದೆ ಎಂದು ಒಬ್ಬರು ಬರೆದಿದ್ದರೆ, 15 ರೂಪಾಯಿ ಕೊಟ್ಟರೆ ಇಡೀ ತೆಂಗಿನಕಾಯಿಯೇ ಸಿಗುತ್ತದೆ. ನಿಮ್ಮಲ್ಲಿ ಹಣ ಜಾಸ್ತಿ ಇದೆಯೆಂದಾದರೆ ಹೋಗಿ ಬಡವರಿಗೆ ಹಂಚಿಬಿಡಿ ಅಂತನೂ ಇನ್ನೊಬ್ಬರು ಬಿಟ್ಟಿ ಸಲಹೆ ಕೊಟ್ಟಿದ್ದಾರೆ. ಹೀಗೆ ತೆಂಗಿನಕಾಯಿ ಚಿಪ್ಪು ದೇಶದೆಲ್ಲಡೆ ತನ್ನದೇ ಆದ ಹವಾ ಸೃಷ್ಟಿ ಮಾಡಿದೆ. ಸಂಗ್ರಹ ವಿಕಾಸವಾಣಿ.

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *