Breaking News
Home / Featured / ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀಗೆ ನೋಟಿಸ್ ನೀಡಿದ ಚುನಾವಣಾ ಆಯೋಗ..!

ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀಗೆ ನೋಟಿಸ್ ನೀಡಿದ ಚುನಾವಣಾ ಆಯೋಗ..!

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕೋಡಿಮಠದ ಶ್ರೀ ಶಿವಾನಂದ ರಾಜೇಂದ್ರ ಸ್ವಾಮಿಗಳು ದೇಶದ ಮತ್ತು ರಾಜ್ಯದ ರಾಜಕೀಯ ಇನ್ನುಳಿದ ಬೆಳವಣಿಗೆಗಳ ಬಗ್ಗೆ ಭವಿಷ್ಯ ನುಡಿಯುತ್ತಿರುತ್ತಾರೆ. ಆ ಭವಿಷ್ಯ ಕೂಡ ಎಷ್ಟೋ ಬಾರಿ ಅದು ನಿಜವಾಗಿರುವುದುಂಟು.

ಅದೇ ರೀತಿ ಮೊನ್ನೆ ಯಾದಗಿರಿ ತಾಲೂಕಿನ ಅಬ್ಬೆತುಮಕೂರನ ಜಾತ್ರೆಯಲ್ಲಿ ಭಾಗವಹಿಸಿ ಲೋಕಸಭಾ ಚುನಾವಣೆ ಬಗ್ಗೆ ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀ ಶಿವಾನಂದ ರಾಜೇಂದ್ರ ಸ್ವಾಮೀಜಿಗಳಿಗೆ ಸಹಾಯಕ ಚುನಾವಣಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ಮಾರ್ಚ್ 11 ರಂದು ನಡೆದ ಜಾತ್ರೆಯಲ್ಲಿ ಸತ್ಯ ವಿಷದಂತೆ ಇರುತ್ತೆ ಕುರುವಂಶ ದೊರೆಗಳು ಬಡಿದಾಡ್ಯಾರು ಪಾಂಡವರು ಕೌರವರು ಬಡಿದಾಡ್ಯಾರು, ರತ್ನ ಖಚಿತ ಸುವರ್ಣ ಕಿರೀಟ ಸ್ಥಿರವಾದಿತು ಎಂದು ಭವಿಷ್ಯ ನುಡಿದಿದ್ದರು. ಶ್ರೀಗಳ ಭವಿಷ್ಯ ನುಡಿಯನ್ನು ಕೇಂದ್ರದಲ್ಲಿ ಅಧಿಕಾರ ರಚನೆ ಮಾಡಲು ಶತ್ರುಗಳಂತೆಯಿದ್ದ ಪಕ್ಷಗಳು ಅಂದರೆ ಸಮಾಜವಾದಿ ಬಿಎಸ್‍ಪಿ ಒಂದಾಗಿವೆ. ಘಟಬಂಧನ ರಚನೆ ಮಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಹವಣಿಸುತ್ತಿವೆ. ಅದರೆ ಮೋದಿಗೆ ಈಗ ಸ್ಥಿರವಾದ ರತ್ನ ಖಚಿತ ಕೀರಿಟ ಈಗಿನ ಚುನಾವಣೆ ನಂತರವೂ ಖಚಿತವಾಗಲಿದೆ. ಬೇವು ಬೆಲ್ಲವಾದಿತು ಅಂದರೆ ಸೈನಿಕರ ಮೇಲಿನ ದಾಳಿ ಪ್ರಧಾನಿ ಮೋದಿ ಪಾಲಿಗೆ ಕಹಿಯ ಬದಲು ಸಿಹಿಯಾಗಲಿದೆ ಎಂದು ಮಠದವರು ವಿಶ್ಲೇಷಿಸಿದ್ದರು.

ಈಗ ಆ ಭವಿಷ್ಯಕ್ಕೆ ಸಂಬಂಧಿಸಿದಂತೆ ಚುನಾವಣೆ ನೀತಿಸಂಹಿತೆ ಉಲ್ಲಂಘನೆ ಎಂದು ಶ್ರೀಗಳಿಗೆ ಸಹಾಯಕ ಚುನಾವಣಾಧಿಕಾರಿಗಳದ ಶಂಕರಗೌಡ ಸೋಮನಾಳ ಅವರು ಯಾದಗಿರಿ ಗ್ರಾಮೀಣ ಠಾಣೆ ಪಿಎಸ್‍ಐ ಮೂಲಕ ನೋಟಿಸ್ ನೀಡಿದ್ದಾರೆ. 2019ರ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮಾರ್ಚ್ 10 ರಿಂದಲೇ ಜಾರಿಯಾಗಿದೆ. ನೀವು ಹೇಳಿಕೆ ನೀಡಿರುವುದು ನಿಜವಾದಲ್ಲಿ ಇದು ಮತದಾರರ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ 48 ಗಂಟೆಗಳ ಒಳಗೆ ನಿಲಿತ ರೂಪದಲ್ಲಿ ಉತ್ತರಿಸುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ.

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *