Breaking News
Home / Featured / ಇನ್ಮುಂದೆ ಕೇಬಲ್‌, ಡಿಟಿಎಚ್ ಸೇವೆ ಸಿಗೋದು ಅನುಮನಾ..!

ಇನ್ಮುಂದೆ ಕೇಬಲ್‌, ಡಿಟಿಎಚ್ ಸೇವೆ ಸಿಗೋದು ಅನುಮನಾ..!

ಭಾರತೀಯ ಟ್ರಾಯ್ ಸಂಸ್ಥೆಯ ಹೊಸ ನೀತಿಗಳಿಂದ ಕೇಬಲ್‌, ಡಿಟಿಎಚ್ ಸೇವೆಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ ಇನ್ನು ಇದೆ ತಿಂಗಳು ರೆಗ್ಯುಲೇಟರಿ ಆಥಾರಿಟಿ ಆಫ್ ಇಂಡಿಯಾ ಒಂದು ಮುಕ್ತ ಸಭೆಯನ್ನು ಆಯೋಜಿಸಿದೆ ಈ ಸಭೆಯಲ್ಲಿ ಸಾಕಷ್ಟು ಹೊಸ ನಿಯಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಇವತ್ತಿನ ಆಧುನಿಕ ದಿನಗಳಲ್ಲಿ ಡಿಜಿಟಲ್ ವ್ಯಾಪ್ತಿ ಹೆಚ್ಚಾಗಿದ್ದು, ನೆಟ್‌ಫ್ಲಿಕ್ಸ್, ಅಮೆಜಾನ್‌ ಪ್ರೈಮ್, ಹಾಟ್‌ಸ್ಟಾರ್‌, ವೂಟ್ ಸೇರಿದಂತೆ ಒಟಿಟಿ ಸೇವೆಗಳು ಹೆಚ್ಚಾಗಿ ಬೆಳಕಿಗೆ ಬಂದಿದ್ದು ಹೆಚ್ಚು ಜನಪ್ರಿಯತೆ ಕಂಡಿವೆ.

ಹಲವು ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಕೇಬಲ್‌, ಡಿಟಿಎಚ್‌ಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ . ಜನರಿಗೆ ಆಪ್ತವಾಗಿದ್ದ ದುರದರ್ಶನ ಮತ್ತು ಅದಕ್ಕೆ ಜೀವ ತುಂಬುತ್ತಿದ್ದ ಕೇಬಲ್‌, ಡಿಟಿಎಚ್ ಗಳು ಅಡಕತ್ತರಿಯಲ್ಲಿವೆ.

ನಮ್ಮ ದೇಶದಲ್ಲಿ ಒಟಿಟಿ ಆಪ್ ಕಂಪನಿಗಳು ಇತ್ತೀಚೆಗೆ ಜನಪ್ರಿಯತೆ ಪಡೆಯುತ್ತಿರುವುದರಿಂದ ಅವುಗಳ ಬಳಕೆ ತ್ವರಿತಗತಿಯಲ್ಲಿ ವಿಸ್ತಾರವಾಗುತ್ತಿದೆ. ಆದರೆ ಜನರು ಟಿವಿ ಸೇವೆಗಳನ್ನು ನಿರಾಕರಿಸುವ ಮಟ್ಟಕ್ಕೆ ಇನ್ನೂ ಬಂದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಕೇಬಲ್‌ ಮತ್ತು ಡಿಟಿಎಚ್ ಸೇವೆಗಳು ಮಾಯವಾಗುವ ಸಾಧ್ಯತೆಯನ್ನು ತಜ್ಞರು ಹೇಳುತ್ತಿದ್ದಾರೆ.

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *