Breaking News
Home / Featured / ನೀಲಿ ಚಿತ್ರದ ತಾರೆಯಾಗಿ ಮಿಂಚಲಿರುವ ಬಹುಭಾಷಾ ನಟಿ ರಮ್ಯಾ ಕೃಷ್ಣ..!

ನೀಲಿ ಚಿತ್ರದ ತಾರೆಯಾಗಿ ಮಿಂಚಲಿರುವ ಬಹುಭಾಷಾ ನಟಿ ರಮ್ಯಾ ಕೃಷ್ಣ..!

ಇಷ್ಟು ದಿನ ವಿಭಿನ್ ಪಾತ್ರಗಳಿಂದ ಗುರುತುಸಿಕೊಂಡಿದ್ದ ಬಹುಭಾಷಾ ನಟಿ ರಮ್ಯಾ ಕೃಷ್ಣಾ ಇದೀಗ ನೀಲಿ ಚಿತ್ರದ ತಾರೆಯಾಗಿ ಮಿಂಚಲಿದ್ದಾರೆ.

ತಮಿಳಿನಲ್ಲಿ ತ್ಯಾಗರಾಜನ್ ಕುಮಾರರಾಜ್ ನಿರ್ದೇಶನ ಮಾಡುತ್ತಿರುವ ‘ಸೂಪರ್ ಡಿಲೆಕ್ಸ್’ ಚಿತ್ರದಲ್ಲಿ ರಮ್ಯಾಕೃಷ್ಣ ಮೊದಲ ಬಾರಿಗೆ ನೀಲಿತಾರೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಲೀಲಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇತ್ತೀಚೆಗೆ ರಮ್ಯಾಕೃಷ್ಣ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿ, “ನನಗೆ ಈ ಪಾತ್ರ ಮಾಡುವಾಗ ಮೊದಲು ತುಂಬಾ ಮುಜುಗರ ಆಯಿತು. ಈ ಪಾತ್ರ ತುಂಬಾ ಚಾಲೆಂಜಿಂಗ್ ಆಗಿದೆ. ಏಕೆಂದರೆ ಈ ಚಿತ್ರದ ಕಥೆಯಲ್ಲಿ ತುಂಬಾ ತಾಕತ್ ಇದೆ. ನಾನು ಈ ಪಾತ್ರವನ್ನು ಹಣಕ್ಕಾಗಿ ಮಾಡಿಲ್ಲ” ಎಂದು ಹೇಳಿದ್ದಾರೆ.

ಈ ಚಿತ್ರದ ಸೀನ್‍ವೊಂದು ಓಕೆ ಮಾಡಲು ನಿರ್ದೇಶಕರಿಗಾಗಿ ನಾನು ಎರಡು ದಿನ ಬರೋಬ್ಬರಿ 37 ರೀ-ಟೇಕ್ ತೆಗೆದುಕೊಂಡಿದ್ದೇನೆ. ನಾನು ರೀ-ಟೇಕ್ ತೆಗೆದುಕೊಂಡು ಅಭಿನಯಿಸುವಾಗ ಅಲ್ಲಿದ್ದ ಸಹಾಯಕರು ಅದನ್ನು ನೋಡಿ ಆಶ್ಚರ್ಯಪಟ್ಟರು ಎಂದರು.

ಈ ಚಿತ್ರದ ಪಾತ್ರಕ್ಕಾಗಿ ರಮ್ಯಾಕೃಷ್ಣ ಅವರ ಬದಲು ಹಿರಿಯ ನಟಿ ನಾದಿಯಾ ಅವರನ್ನು ಸಂಪರ್ಕಿಸಲಾಗಿತ್ತು. ಬಳಿಕ ಈ ಪಾತ್ರಕ್ಕೆ ರಮ್ಯಾಕೃಷ್ಣ ಅವರೇ ಸೂಕ್ತ ಎಂದು ಸ್ವತಃ ಚಿತ್ರದ ನಿರ್ದೇಶಕ ತ್ಯಾಗರಾಜನ್ ಕುಮಾರರಾಜ್ ಹೇಳಿದ್ದಾರೆ.

ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಇದೇ ತಿಂಗಳು 29ರಂದು ಬಿಡುಗಡೆಯಾಗಲಿದೆ.

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *