Breaking News
Home / Featured / ಹುಡುಗನಿಗೆ ತಾಳಿಕಟ್ಟಿದ ಹುಡುಗಿ..!

ಹುಡುಗನಿಗೆ ತಾಳಿಕಟ್ಟಿದ ಹುಡುಗಿ..!

ವರ ವಧುವಿಗೆ ತಾಳಿಕಟ್ಟೋದು ನಾವು ಕಾಮನ್ ಆಗಿ ನೋಡಿದ್ದೇವೆ. ಆದರೆ ಇಲ್ಲಿ ಅಂದರೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ವಧುವೇ ವರನಿಗೆ ತಾಳಿ ಕಟ್ಟುವ ಮೂಲಕ ಡಿಫರೆಂಟಾಗಿ ಮದುವೆಯಾಗಿದ್ದಾರೆ.

ಹೌದು, ಸಾಮಾನ್ಯವಾಗಿ ವರ ವಧುವಿಗೆ ತಾಳಿ ಕಟ್ಟುತ್ತಾನೆ. ಆದ್ರೆ ನಾಲತವಾಡ ಪಟ್ಟಣದಲ್ಲಿ ಹಿರಿಯರು ವಧುವಿನಿಂದಲೇ ವರನಿಗೆ ಮಾಂಗಲ್ಯಧಾರಣೆ ಮಾಡಿಸಿದ್ದಾರೆ. ಈ ಭಾಗದಲ್ಲಿ ಇದೊಂದು ವಿಶಿಷ್ಠ ಮದುವೆ ಆಚರಣೆಯಾಗಿದೆ. ಸೋಮವಾರದಂದು ನಾಲತವಾಡ ಪಟ್ಟಣದಲ್ಲಿ ಎರಡು ಜೋಡಿಗಳು ವಿಶೇಷವಾಗಿ ಮದುವೆಯಾಗಿದ್ದಾರೆ. ಪ್ರಭುರಾಜ್ ಜೊತೆ ಅಂಕಿತಾ ಹಾಗೂ ಅಮಿತ್ ಜೊತೆ ಪ್ರಿಯಾ ಎನ್ನುವ ಎರಡು ಜೊಡಿಯ ಮದುವೆ ಆಗಿದ್ದು, ಇಲ್ಲಿ ಇಬ್ಬರು ವರರಿಗೆ ವಧುಗಳೇ ತಾಳಿ ಕಟ್ಟಿದ್ದು ವಿಪರ್ಯಾಸ ಅನಿಸಿದರೂ ವಿಶೇಷವಾಗಿತ್ತು.

ತಾಳಿಯ ಜೊತೆ ರುದ್ರಾಕ್ಷಿ ಜೋಡಿಸಿ ತಾಳಿ ಕಟ್ಟುವ ಮೂಲಕ 12ನೇ ಶತಮಾನದ ಕಲ್ಯಾಣ ಕ್ರಾಂತಿಗೆ ನಾಂದಿ ಹಾಡಲಾಯಿತು. ಅಪ್ಪಟ ಬಸವ ಧರ್ಮದ ತತ್ವದ ಅಡಿಯಲ್ಲಿ ನಡೆದ ಮದುವೆ ಇದಾಗಿದ್ದು, ಶುಭ ಮುಹೂರ್ತ ನೋಡದೆ ಮದುವೆ ಮಾಡಿಸಲಾಗಿದೆ. ವಧು-ವರರಿಗೆ ಅಕ್ಷತೆ ಬದಲು ಪುಷ್ಪವೃಷ್ಟಿ ಹಾಕಿ ಹಿರಿಯರು ಆಶೀರ್ವಾದ ಮಾಡಿದ್ದಾರೆ.

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *