Breaking News
Home / Featured / ನಮ್ಮ ಮೆಟ್ರೋದಲ್ಲಿ ಭರ್ಜರಿ ಉದ್ಯೋಗಾವಕಾಶ ಏಪ್ರಿಲ್ 8 ಕೊನೆಯ ದಿನ ಬೇಗ ಅರ್ಜಿ ಸಲ್ಲಿಸಿ..!

ನಮ್ಮ ಮೆಟ್ರೋದಲ್ಲಿ ಭರ್ಜರಿ ಉದ್ಯೋಗಾವಕಾಶ ಏಪ್ರಿಲ್ 8 ಕೊನೆಯ ದಿನ ಬೇಗ ಅರ್ಜಿ ಸಲ್ಲಿಸಿ..!

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ (BMRCL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ. ಖಾಲಿ ಇರುವ 100 ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವರ್ಗಿಕರಣ: ಎಕ್ಸಿಕ್ಯುಟೀಚ್ ಇಂಜಿನಿಯರ್, ಅಸಿಸ್ಟೆಂಟ್ ಎಕ್ಸಿಕ್ಯುಟೀವ್ ಇಂಜಿನಿಯರ್, ಅಸಿಸ್ಟೆಂಟ್ ಇಂಜಿನಿಯರ್, ಸೆಕ್ಷನ್ ಇಂಜಿನಿಯರ್ ಹೀಗೆ ಒಟ್ಟು 100 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ದಿನಾಂಕ 08 -03 – 2019 ರೊಳಗೆ ಆನ್ ಲೈನ್ ಮೂಲಕ ಅರ್ಜಿಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ ಬಳಿಕ ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಏಪ್ರಿಲ್ 8.2019 ರೊಳಗೆ ಕಳುಹಿಸಬೇಕು.

ವಯೋಮಿತಿ : ಎಕ್ಸಿಕ್ಯುಟೀವ್ ಇಂಜಿನಿಯರ್ ಹುದ್ದೆಗೆ 50, ಅಸಿಸ್ಟೆಂಟ್ ಎಕ್ಸಿಕ್ಯುಟೀವ್ ಇಂಜಿನಿಯರ್ ಹುದ್ದೆಗೆ 45, ಅಸಿಸ್ಟೆಂಟ್ ಇಂಜಿನಿಯ್ ಹುದ್ದೆಗೆ 40, ಸೆಕ್ಷನ್ ಇಂಜಿನಿಯರ್ ಹುದ್ದೆಗೆ 35 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.

ವೇತನ ಶ್ರೇಣಿ : 1.ಎಕ್ಸಿಕ್ಯುಟೀವ್ ಇಂಜಿನಿಯರ್ 80,000 ರೂ. 2.ಅಸಿಸ್ಟೆಂಟ್ ಎಕ್ಸಿಕ್ಯುಟೀವ್ ಇಂಜಿನಿಯರ್ 65,000 ರೂ., 3.ಅಸಿಸ್ಟೆಂಟ್ ಇಂಜಿನಿಯರ್ 50,000 ರೂ., 4.ಸೆಕ್ಷನ್ ಇಂಜಿನಿಯರ್ 36, 000 ರೂ. [ಪ್ರತಿ ತಿಂಗಳಿಗೆ] ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ bmrcl.co.in ಗೆ ಲಾಗಿನ್ ಮಾಡಿ ತಿಳಿದುಕೊಳ್ಳಿ.

ಅರ್ಜಿ ಪ್ರತಿಯನ್ನು ಸಲ್ಲಿಸುವ ವಿಳಾಸ:
General Manager (HR)
Bangalore Metro Rail Corporation Limited
III Floor, BMTC Complex
K.H.Road, Shanthinagar
Bengaluru 560027.

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *