Breaking News
Home / Featured / ರಾಜ್ಯ ಸರ್ಕಾರದಲ್ಲಿ ಭರ್ಜರಿ ನೇಮಕಾತಿ 10,611 ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ, ಅರ್ಹ ಅಭ್ಯರ್ಥಿಗಳು ಬೇಗ ಅರ್ಜಿ ಸಲ್ಲಿಸಿ..!

ರಾಜ್ಯ ಸರ್ಕಾರದಲ್ಲಿ ಭರ್ಜರಿ ನೇಮಕಾತಿ 10,611 ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ, ಅರ್ಹ ಅಭ್ಯರ್ಥಿಗಳು ಬೇಗ ಅರ್ಜಿ ಸಲ್ಲಿಸಿ..!

ಕರ್ನಾಟಕ ರಾಜ್ಯ ಸರ್ಕಾರ ಸರ್ಕಾರೀ ಶಾಲೆಗಳನ್ನು ಸದೃಢಗೊಳಿಸಲು ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ಶಿಕ್ಷಕರಾಗಬಹುದಾಗಿದೆ.

ಸರ್ಕಾರವು ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಖಾಲಿ ಇರುವ 10,611 ಹುದ್ದೆಗಳನ್ನು ಭರ್ತಿ ಮಾಡಲಿದ್ದು ಇದಕ್ಕಾಗಿ ಮೇ 18 ರಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಈ ಹುದ್ದೆಗಳನ್ನು ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಪಿ.ಸಿ.ಜಾಫರ್ ತಿಳಿಸಿದ್ದಾರೆ.

ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8 ನೇ ತರಗತಿ) ವೃಂದದ ಹುದ್ದೆಗಳಿಗೆ ಅನ್ವಯವಾಗುವ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅನುಸಾರ ಅರ್ಹ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ಇದೇ 11 ರಿಂದ ಕೇಂದ್ರೀಕೃತ ದಾಖಲಾತಿ ಘಟಕದ ವೆಬ್ ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಏಪ್ರಿಲ್ 10 ಕಡೆಯ ದಿನವಾಗಿದೆ.

ಅಭ್ಯರ್ಥಿಗಳು ಅರ್ಜಿಗಳನ್ನು ನಿಗದಿತ ನಮೂನೆಯಲ್ಲಿ ಆನ್ ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. ಇತರೆ ಯಾವುದೇ ವಿಧಾನಗಳಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇಲ್ಲ ಎಂದು ಜಾಫರ್ ಸ್ಪಷ್ಟಪಡಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕಗಳು 1 ನೇ ಪರೀಕ್ಷೆ ಹೈದ್ರಾಬಾದ್- ಕರ್ನಾಟಕ ಪ್ರದೇಶದ ಜಿಲ್ಲೆಗಳ ಶೇ 80 ಸ್ಥಳೀಯ ವೃಂದದ ಮತ್ತು ಬೆಂಗಳೂರು ಬಿಬಿಎಂಪಿ ಪ್ರದೇಶದ ವ್ಯಾಪ್ತಿಯ ಶಾಲೆಗಳ ಶೇ 8 ರಷ್ಟು ರಾಜ್ಯ ಮಟ್ಟದ ಸ್ಥಳೀಯ ವೃಂದದ ಹುದ್ದೆಗಳಿಗೆ ಕ್ರಮವಾಗಿ ಮೇ 18 ಮತ್ತು 19 ರಂದು ನಡೆಯಲಿವೆ.

2 ನೇ ಪರೀಕ್ಷೆ ಹೈದ್ರಾಬಾದ್- ಕರ್ನಾಟಕ ಪ್ರದೇಶದ ಜಿಲ್ಲೆಗಳ ಶೇ 20 ಬೆಂಗಳೂರು ಬಿಬಿಎಂಪಿ ಪ್ರದೇಶದ ವ್ಯಾಪ್ತಿಯ ಶಾಲೆಗಳ ಶೇ 92 ರ ಮಿಕ್ಕುಳಿದ ವೃಂದದ ಮತ್ತು ಇತರೆ ಜಿಲ್ಲೆಗಳ ಶೇ 100 ಹುದ್ದೆಗಳಿಗೆ ಮೇ 25 ಮತ್ತು 26 ರಂದು ನಡೆಯಲಿದೆ. ನೇಮಕಾತಿ ಅಧಿಸೂಚನೆಗಳು ವೆಬ್ ಸೈಟ್ http://schooleducation.kar.nic.in ನಲ್ಲಿ ಎಲ್ಲ ಮಾಹಿತಿಗಳನ್ನು ತಿಳಿಯಬಹುದಾಗಿದೆ. ಹಾಗೂ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *