Breaking News
Home / Featured / ವಿಶ್ವದ ಏಕೈಕ ಆಮೆ ಆಕಾರದ ಶ್ರೀ ಕ್ಷೇತ್ರ ಶ್ರೀ ಲಕ್ಷ್ಮಿ ಗವಿರಂಗನಾಥ ಸ್ವಾಮಿ ಪುಣ್ಯ ಕ್ಷೇತ್ರಕ್ಕೆ ಭೇಟಿನೀಡಿ ನಿಮ್ಮ ಸಕಲ ಸಂಕಷ್ಟಗಳಿಂದ ದೂರವಿರಿ..!

ವಿಶ್ವದ ಏಕೈಕ ಆಮೆ ಆಕಾರದ ಶ್ರೀ ಕ್ಷೇತ್ರ ಶ್ರೀ ಲಕ್ಷ್ಮಿ ಗವಿರಂಗನಾಥ ಸ್ವಾಮಿ ಪುಣ್ಯ ಕ್ಷೇತ್ರಕ್ಕೆ ಭೇಟಿನೀಡಿ ನಿಮ್ಮ ಸಕಲ ಸಂಕಷ್ಟಗಳಿಂದ ದೂರವಿರಿ..!

ಕೂಮಾ೯ದ್ರಿಗಿರಿ ಶಿಖರದ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನು ಭಗವತ್ ರಕ್ಷಕನು ಅದಾ ಶ್ರೀ ಮಹಾನ್ ವಿಷ್ಣುವಿನ ಕೂರ್ಮಾವತಾರವಾಗಿ ನೆಲೆಸಿರುವ ಕ್ಷೇತ್ರವೇ ಶ್ರೀ ಗವಿ ರಂಗನಾಥ ಪುರದ ಸ್ವಾಮಿ.

ಸ್ವಾಮಿಯ ಕೆಳಭಾಗದ ಬಂಡೆಯ ಗುಹೆಲ್ಲಿ ಭಗವತಿ ಶ್ರೀ ಲಕ್ಷ್ಮಿ ಅಮ್ಮನವರು ಉದ್ಭವ ಮೂರ್ತಿ ನೆಲೆನಿಂತಿರುವುದು ನಾವು ಕಾಣಬಹುದಾಗಿದೆ.ದೇವಸ್ಥಾನದ ನಿರ್ಮಾಣ ಕಾರ್ಯವು ಬಲು ರೋಚಕ ಪವಾಡಸದೃಶ ವಾಗಿದೆ,

ಪುರಾಣ ಕತೆಯಲ್ಲಿ ಶ್ರೀಕ್ಷೇತ್ರದ ಉಲ್ಲೇಖ ಮಾಡಲಾಗಿದೆ ಅನಾದಿ ಕಾಲದಲ್ಲಿ ಅಮೃತ ಗೋಸ್ಕರ ಕ್ಷೀರಸಾಗರವನ್ನು ಕಡೆಯಲು ಮಂದರ ಪರ್ವತವನ್ನು ಕಡಗೋಲು ವಾಸಕಿ ಅಗ್ಗವಾಗಿ ಕಡೆಯುತ್ತಿರುವಾಗ ಮಂದರ ಪರ್ವತವು ಕುಸಿಯಲಾರಂಭಿಸುತ್ತದೆ, ದೇವಾನುದೇವತೆಗಳು ಪ್ರಾರ್ಥನೆಯಿಂದ ಶ್ರೀ ಮಹಾನ್ ವಿಷ್ಣು ತನ್ನ ದಶಾವತರದ ಎರಡನೇ ಅವತಾರವಾದ ಕೂರ್ಮಾವತಾರ ವಾಗಿ ಪರ್ವತವನ್ನು ಮೇಲಕ್ಕೆತ್ತಿ ನಿಲ್ಲಿಸಿ ಸಮುದ್ರ ಮಂಥನ ಕಾರ್ಯವು ಸುಗಮವಾಗಿ ನಡೆಯುವಂತೆ ಮಾಡಿಕೊಟ್ಟರು ಅಮೃತವು ಉತ್ಪತ್ತಿಯಾಗುವ ಜೊತೆಯಲ್ಲಿ ಉದ್ಭವಿಸಿದ ಶ್ರೀಲಕ್ಷ್ಮಿಯನ್ನು ಸ್ವೀಕರಿಸಿ ಶ್ರೀ ಲಕ್ಷ್ಮಿ ನಾರಾಯಣ ನಾಗಿ ಕೋಮಾ೯ ಮಾದ್ರಿ ರೂಪದಲ್ಲಿ ಶ್ರೀ ಕ್ಷೇತ್ರದಲ್ಲಿ ನೆಲೆಸಿ ಭಕ್ತರಿಗೆ ಇಷ್ಟಾನುಸಾರವಾಗಿ ಅನುಭವಿಸುತ್ತಿದೆ.

ಸ್ಥಳದ ಹಿನ್ನೆಲೆ : ಹಲವಾರು ವರ್ಷನ್ ವರ್ಷಗಳ ಹಿಂದೆ ಗಿರಿ-ಶಿಖರ ಎಂಬ ಪ್ರದೇಶವಿತ್ತು, ಈ ಪ್ರದೇಶಕ್ಕೆ ಗೋಲ್ಲನೊವ೯ ಪ್ರತಿ ದಿನ ಗೋವುಗಳನ್ನು ಮೇಯಿಸಲೆಂದು ಬರುತ್ತಿದ್ದ. ಈ ಗುಂಪಿನಲ್ಲಿದ್ದ ಕಪಿಲೆ ಎಂಬ ಗೋವು ದಿನನಿತ್ಯ ಒಂದು ಗುಹೆ ಒಳಗೆ ಪ್ರವೇಶಿಸಿ ಹುತ್ತಕ್ಕೆ ಹಾಲನ್ನು ಪ್ರತಿ ದಿನ ನೀಡುತ್ತಿತ್ತು .ಗ್ರಾಮಕ್ಕೆ ಹಿಂದಿರುಗಿದ ಹಸುಗಳು ಹಾಲನ್ನು ಕರೆಯಲು ಹೋದಾಗ ಕ್ರಮೇಣವಾಗಿ ಕಮ್ಮಿ ಹಾಲನ್ನು ಕೊಡುತ್ತಿತ್ತು.

ಇದನ್ನು ಗಮನಿಸಿದ ಗೋಮಂದೆಯ ಒಡೆಯ ಹಾಗೂ ಗೌಡನು ಅಗಿದ್ದವರು ಗುಲ್ಲನನ್ನು ಪ್ರಶ್ನಿಸಿದನು ದನ ಕಾಯುವ ಗೊಲ್ಲನು ಕಪಿಲೆ ಎಂಬ ಹಸು ತುಂಬಾ ಕಡಿಮೆ ಹಾಲನ್ನು ನೀಡುತ್ತಿದೆ ಎಂದು ತಿಳಿಸಿದ, ಒಂದು ದಿನ ಗವಿಯ ಕಡೆಗೆ ಹೋಗುತ್ತಿದ್ದ ಕಪಿಲೆ ಎಂಬ ಹೊಸ ವನ್ನು ಗಮನಿಸಿದ ಗೊಲ್ಲನು ಆಧಾರ ಅನುಸಾರವಾಗಿ ಹಿಂಬಾಲಿಸುತ್ತಾ ಗವಿಯ ಒಳಗೆ ಪ್ರವೇಶಿಸುತ್ತಾನೆ ಅಲ್ಲಿ ಹೋದ ಹಸುವು ಹುತ್ತದ ಮೇಲೆ ಹೋಗಿ ತಾನೇ ಹಾಲನ್ನು ನೀಡುತ್ತಿತು, ಇದನ್ನು ನೋಡಿದ ಗೊಲ್ಲನು ಆಶ್ಚರ್ಯಗೊಂಡು ಚಕಿತಗೊಂಡು ಅವನ ಕೈಕಾಲು ಪರದಾಡಿ ಅಲ್ಲಿ ಸಾಷ್ಟಾಂಗ ನಮಸ್ಕಾರವನ್ನು ಮಾಡಿದನು.

ಅ ಸಂಜೆ ಗ್ರಾಮಕ್ಕೆ ತಿರುಗಿ ಊರಿನ ಗೌಡರಿಗೆ ಆ ದೃಶ್ಯವನ್ನು ವಿವರಿಸಿದನು. ಮರುದಿನವೂ ಬೆಳಗ್ಗೆ ಗೌಡರು ತಾನೇ ಸ್ವತಹ ಗಿರಿಶಿಖರಕ್ಕೆ ನಡೆದು ಅದ್ಭುತವನ್ನು ಕಂಡರು ಈ ಘಟನೆಯ ನೋಡಿದ ತಕ್ಷಣವೇ ಗ್ರಾಮಕ್ಕೆ ಒಳಗೊಂಡು ಪಾಳೇಗಾರನ ಬೂದಿಹಾಳ್ ಈಗಿನ ಶ್ರೀರಾಂಪುರ ಪಾಳೇಗಾರನಾಗಿದ್ದ ಹಸಿರುಮನೆ ನಾಯಕ ಮತ್ತು ಕುಮಾರ ಮಲ್ಲ ಅವರಿಗೂ ಕೂಡ ವಿಷಯವನ್ನು ತಿಳಿಸಿ ಹಿಂದಿನ ದಿನವೇ ಸ್ವಾಮಿ ಬೂದಿಹಾಳಾ ಪಾಳೆಗಾರರ ಸ್ವಪ್ನವಾಗಿ ಕಾಣಿಸಿಕೊಂಡು ನಾನು ಶ್ರೀಮಾನ್ ಮಹಾವಿಷ್ಣುವಿನ ಕೊಮಾ೯ ಅವತಾರವಾಗಿ ಶ್ರೀ ರಂಗನಾಥ ನಾಮಾಂಕಿತಗೊಂಡು ಶ್ರೀ ಗಿರಿ ಶಿಖರದಲ್ಲಿ ನೆಲೆಯೂರಿ ನಿಲ್ಲುತ್ತೇನೆ ,ನಿತ್ಯವೂ ಪೂಜೆ ಕಾರ್ಯವೈಕರಿಗಳು ನಿರಂತರವಾಗಿ ನಡೆಸಲು ಏರ್ಪಡಿಸಬೇಕೆಂದು ಆಶೀರ್ವದಿಸಿದನು.

ಈಗ ಗ್ರಾಮ ಗ್ರಾಮ ಗೌಡನು ಇದೇ ವಿಷಯವನ್ನು ನೆರವೇರಿಸಿದನು ಅನುಸಾರವಾಗಿ ಸುತ್ತಮುತ್ತಲಿನ ಗ್ರಾಮಗಳಾದ ಹೆಗ್ಗೆರೆ ಬನ್ನಿ ಕೆರೆ ಎಣ್ಣೆಗೆರೆ ನಡುವಿನ ಹಳ್ಳಿಯ ಮುಖಾಂತರ ಗ್ರಾಮ ನ ಮುಖಾಂತರ ಗಳು ಮಂಗಳವಾದ್ಯ ಸಹಿತ ಪೂಜೆ ಸಾಮಗ್ರಿಗಳನ್ನು ಗಿರಿಶಿಖರ ದಲ್ಲಿ ತಂದು ಗುಹೆಯನ್ನು ಪ್ರವೇಶಿಸಿ ಬೆಟ್ಟವಾಗಿ ಬೆಳೆದಿದ್ದ ಮರವನ್ನು ತೆಗೆದು ದೇವಸ್ಥಾನ ನಿಮಾ೯ಣ ಕಾಯ೯ಪ್ರಾರಂಭವಾಯಿತು.

ಮಾರ್ಗ:ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಬಳಿಯ ಗವಿರಂಗಪುರ ಎಂಬ ಊರಿನಲ್ಲಿ ನೆಲೆಸಿದೆ. ಹೊಸದುರ್ಗದಿಂದ 29 ಕಿ.ಮೀ ದೂರದಲ್ಲಿದೆ ಹಾಗೂ ಚಿತ್ರದುರ್ಗದಿಂದ 90 ಕಿ.ಮೀ ದೂರದಲ್ಲಿದೆ. ಈ ಕ್ಷೇತ್ರಕ್ಕೆ ರಸ್ತೆ ಮಾರ್ಗದ ಮೂಲಕ ಮಾತ್ರ ಸಂಚರಿಸಬಹುದು.

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *