Breaking News
Home / Featured / ಇದೇನಪ್ಪ ಹಿಂಗೇ ಅಂಗಡಿಗಳಲ್ಲಿ ಕೊಡುವ ರಸೀದಿಗಳಿಂದಲೂ ಕಾನ್ಸರ್ ಬರುತ್ತಂತೆ ಎಚ್ಚರ..!

ಇದೇನಪ್ಪ ಹಿಂಗೇ ಅಂಗಡಿಗಳಲ್ಲಿ ಕೊಡುವ ರಸೀದಿಗಳಿಂದಲೂ ಕಾನ್ಸರ್ ಬರುತ್ತಂತೆ ಎಚ್ಚರ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ನಾವು ಅಂಗಡಿಗಳಲ್ಲಿ ಏನೇ ಖರೀದಿಸಿದರು ಬಿಲ್‌ ಅಥವಾ ರಸೀದಿ ಪಡೆಯುವುದು ಸಾಮಾನ್ಯ. ಕೆಲವೊಮ್ಮೆ ಅಂಗಡಿಯವರು ಕೊಡದಿದ್ದರು ನಾವೇ ಕೇಳಿ ಪಡೆಯುತ್ತೇವೆ. ಆದರೆ ಗ್ರಾಹಕರೆಲ್ಲಾ ಬೆಚ್ಚಿ ಬೀಳುವಂತಹ ಸುದ್ದಿಯನ್ನು ಸಂಶೋಧಕರು ಹೇಳುತ್ತಿದ್ದಾರೆ. ರಸೀದಿ ಪಡೆಯುವುದರಿಂದ ಕ್ಯಾನ್ಸರ್‌ ಬರುತ್ತದಂತೆ.

ಸಾಮಾನ್ಯವಾಗಿ ಅಂಗಡಿಗಳಲ್ಲಿ ಕೊಟ್ಟರಸೀದಿಗಳು ಪರ್ಸ್‌ ಅಥವಾ ಜೇಬು ಸೇರುತ್ತದೆ. ಇದು ಕ್ಯಾನ್ಸರ್‌ಗೆ ಕಾರಣವಾಗುತ್ತದೆಯಂತೆ. ಏಕೆಂದರೆ ತಜ್ಞರ ಪ್ರಕಾರ ಶೇ.90ರಷ್ಟು ರಸೀದಿಗಳಲ್ಲಿ ಕ್ಯಾನ್ಸರ್‌ಕಾರಕ ಅಂಶವಿರುತ್ತದಂತೆ ,ಮತ್ತು ಥರ್ಮಲ್‌ ಪೇಪರ್‌ನಲ್ಲಿ ಅಚ್ಚಾಗುವ ಇಂಕ್‌ನಲ್ಲಿ ಬಿಸ್ಫೆನಾಲ್‌ ಎಂಬ ಅಂಶವನ್ನು ಒಳಗೊಂಡಿರುತ್ತದೆ. ಸಮೀಕ್ಷೆ ಪ್ರಕಾರ ಈ ರಾಸಾಯನಿಕವು ಹಾರ್ಮೋನ್‌ ಡಿಪೆಂಡೆಂಟ್‌ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಸ್ಥೂಲಕಾಯ, ಮಧುಮೇಹ, ಬಂಜೆತನಕ್ಕೂ ಕಾರಣವಾಗುತ್ತದಂತೆ.

ಯೂನಿವರ್ಸಿಟಿ ಆಫ್‌ ಗ್ರನಡಾದ ಮಾರ್ಗದರ್ಶನದಲ್ಲಿ ಅಂತಾರಾಷ್ಟ್ರೀಯ ಸಂಶೋದಕರು ಬ್ರೆಜಿಲ್‌, ಸ್ಪೈನ್‌ ಮತ್ತು ಫ್ರಾನ್ಸ್‌ಗಳಲ್ಲಿ ನೀಡಲಾಗುವ 112 ಥರ್ಮಲ್‌ ರಸೀದಿಗಳನ್ನು ವಿಶ್ಲೇಷಿಸಿದಾಗ ಈ ಭಯಾನಕ ಮತ್ತು ಅಚ್ಚರಿಯಾದ ಫಲಿತಾಂಶವೊಂದು ಹೊರಬಿದ್ದಿದೆ. ಹಾಗಾಗಿ ರಸೀದಿಗಳನ್ನು ಪಡೆಯುವಾಗ ಎಚ್ಚರಿಕೆಯಿಂದಿರಬೇಕು ಎಂದು ಸಮೀಕ್ಷಕರು ಎಚ್ಚರಿಸಿದ್ದಾರೆ.

ಆದ್ದರಿಂದ ತಿನ್ನುವ ವಸ್ತುಗಳೊಂದಿಗೆ, ಪರ್ಸ್‌ ಮತ್ತು ಜೇಬಿನಲ್ಲಿ ಇಂತಹ ರಸೀದಿಗಳನ್ನು ಇಡದಂತೆ, ಅವುಗಳ ಮೇಲೆ ಮತ್ತೆ ಬರೆಯದಂತೆ ಎಚ್ಚರ ವಹಿಸಬೇಕು ಎಂದಿದ್ದಾರೆ. ಅದಷ್ಟೇ ಅಲ್ಲದೆ ಮಕ್ಕಳ ಕೈಗೆ ಕೊಡಲೇಬಾರದು ಎಂದಿದ್ದಾರೆ. ಇದಕ್ಕಿಂತ ಹಿಂದೆ ಮಿಚಿಗನ್‌ ಮೂಲದ ಲಾಭ ರಹಿತ ಸಂಘಟನೆಯೊಂದು ನಡೆಸಿದ ಸಮೀಕ್ಷೆಯಲ್ಲೂ ಇದೇ ಫಲಿತಾಂಶ ವ್ಯಕ್ತವಾಗಿತ್ತು.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ ಎಂದ ಸುಮಲತಾ, ನಿಮ್ಮ ಪ್ರಕಾರ ಯಾವ ಪಕ್ಷದನ್ನು ಸ್ಪರ್ದಿಸಬೇಕು..!

ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ …

Leave a Reply

Your email address will not be published. Required fields are marked *