Breaking News
Home / Featured / ದಚ್ಚುಗೆ ತಲೆಬಾಗಿದೆ ದೈತ್ಯ ಯೂಟ್ಯೂಬ್ ಡಿ ಬಾಸ್ ಗೆ ಧನ್ಯವಾದ ಹೇಳಿದ್ದು ಯಾಕೆ ಇದು ಕನ್ನಡ ಸಿನಿಮಾದಲ್ಲೇ ಮೊಟ್ಟ ಮೊದಲು..!

ದಚ್ಚುಗೆ ತಲೆಬಾಗಿದೆ ದೈತ್ಯ ಯೂಟ್ಯೂಬ್ ಡಿ ಬಾಸ್ ಗೆ ಧನ್ಯವಾದ ಹೇಳಿದ್ದು ಯಾಕೆ ಇದು ಕನ್ನಡ ಸಿನಿಮಾದಲ್ಲೇ ಮೊಟ್ಟ ಮೊದಲು..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಸಿನಿಮಾವೂ ಕೆಲವು ದಿನಗಳಿಂದ ಯೂಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಚಿತ್ರತಂಡದೊಂದಿಗೆ ನಟ ದರ್ಶನ್ ಕೇಕ್ ಕತ್ತಿರಿಸಿ ಸಂಭ್ರಮಿಸಿದ್ದಾರೆ.

ಯಜಮಾನ ಚಿತ್ರತಂಡ ಮೊದಲು ಸಿನಿಮಾ ‘ಶಿವನಂದಿ’ ಹಾಡನ್ನು ರಿಲೀಸ್ ಮಾಡಿತ್ತು. ಬಳಿಕ ದರ್ಶನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ರೊಮ್ಯಾಂಟಿಕ್ ಹಾಡು ಹಾಗೂ ‘ಯಜಮಾನ’ ಟೈಟಲ್ ಸಾಂಗ್ ಬಿಡುಗಡೆ ಮಾಡಿತ್ತು. ಈ ಮೂರು ಹಾಡುಗಳು ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗಿದ್ದು, ಅಧಿಕ ವೀವ್ಸ್ ಆಗಿದ್ದು ಎಲ್ಲರಿಗು ಗೊತ್ತಿರುವ ವಿಚಾರ ಆದ್ರೆ ಇನ್ನೊಂದು ಹೊಸ ವಿಚಾರ ಏನು ಅನ್ನೋದು ಇಲ್ಲಿದೆ ನೋಡಿ.

ಎರಡು ದಿನಗಳ ಹಿಂದೆ ಯಜಮಾನ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದೆ. ಟ್ರೈಲರ್ ಬಿಡುಗಡೆಗೊಂಡು ಎರಡು ದಿನವಾದರೂ ಯೂಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ನಲ್ಲಿಯೇ ಇದೆ. ಇದುವರೆಗೂ 1.16 ಕೋಟಿಗಿಂತಲೂ ಅಧಿಕ ವೀವ್ಸ್ ಕಂಡಿದ್ದು, 2.37 ಲಕ್ಷ ಮಂದಿ ಲೈಕ್ಸ್ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಯಜಮಾನ ಚಿತ್ರತಂಡ ಹೊಸ ದಾಖಲೆ ನಿರ್ಮಿಸಿ ಯೂಟ್ಯೂಬ್ ನಲ್ಲಿ ಹೆಚ್ಚು ಸುದ್ದಿ ಆಗುತ್ತಿರುವ ಡಿ ಬಾಸ್ ಗೆ ಯೂಟ್ಯೂಬ್ ತಮ್ಮ ಕಡೆಯಿಂದ ಧನ್ಯವಾದಗಳನ್ನು ತಿಳಿಸಿದೆ. ಯೂಟ್ಯೂಬ್ ಸಂಸ್ಥೆಯೊಂದು ತನ್ನ ಕಡೆಯಿಂದ ಒಬ್ಬ ನಟನಿಗೆ ಹಾಗು ಚಿತ್ರತಂಡಕ್ಕೆ ಧನ್ಯವಾದ ತಿಳಿಸಿರುವುದು ಕನ್ನಡ ಸಿನಿಮಾರಂಗದಲ್ಲಿ ಇದೆ ಮೊಟ್ಟ ಮೊದಲು ಹಾಗಾಗಿ ಡಿ ಬಾಸ್ ಅಭಿಮಾನಿಗಳು ಈ ವಿಚಾರವನ್ನು ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡಿದ್ದಾರೆ.

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *