Breaking News
Home / Featured / ರಾಜ್ಯದ ಗರ್ಭಿಣಿ ಮಹಿಳೆಯರಿಗೆ ಬಿಗ್ ಗಿಫ್ಟ್ ಕೊಟ್ಟ ಕುಮಾರಸ್ವಾಮಿ..!

ರಾಜ್ಯದ ಗರ್ಭಿಣಿ ಮಹಿಳೆಯರಿಗೆ ಬಿಗ್ ಗಿಫ್ಟ್ ಕೊಟ್ಟ ಕುಮಾರಸ್ವಾಮಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಸಮ್ಮಿಶ್ರ ಸರ್ಕಾರದ ಸಿಎಂ ಕುಮಾರಸ್ವಾಮಿ ಇಂದು ತಮ್ಮ ಬಜೆಟ್ ಮಂಡನೆ ಮಾಡಿದು ಇದರಲ್ಲಿ ರಾಜ್ಯದ ರೈತ ಮಹಿಳೆಯರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಗೃಹ ಲಕ್ಷ್ಮಿ ಬೆಲೆ ಸಾಲ ಯೋಜನೆ ನೀಡಿದ್ದಾರೆ ಇದರ ಜೊತೆಗೆ ರಾಜ್ಯದ ಗರ್ಭಿಣಿ ಮಹಿಳೆಯರಿಗೆ ಬಿಗ್ ಗಿಫ್ಟ್ ನೀಡಿದ್ದಾರೆ ಏನ್ ಗಿಫ್ಟ್ ಅನ್ನೋದು ಇಲ್ಲಿದೆ ನೋಡಿ.

ರಾಜ್ಯದ ಗರ್ಭಿಣಿ ಮಹಿಳೆಯರಿಗೆ ಹೆರಿಗೆ ಆಗುವುದಕ್ಕೆ ಮುನ್ನ ಮೂರೂ ತಿಂಗಳು ಪ್ರತಿ ತಿಂಗಳು ೨ ಸಾವಿರದಂತೆ ಮೂರೂ ತಿಂಗಳಿಗೆ ಆರು ಸಾವಿರ ಮತ್ತು ಹೆರಿಗೆಯ ನಂತರ ಮೂರೂ ತಿಂಗಳ ಕಾಲ ಪ್ರತಿ ತಿಂಗಳು ೨ ಸಾವಿರದಂತೆ ಆರು ಸಾವಿರ ನೀಡಲಾಗುವುದು ಈ ಹಣ ಆಧಾರ ಕಾರ್ಡ್ ಹೊಂದಿರುವ ಮಹಿಳೆಯರಿಗೆ ನೇರವಾಗಿ ಅವರ ಖಾತೆಗಳಿಗೆ ವರ್ಗಾವಣೆ ಮಾಡಲಾಗುವುದು ಎಂದು ತಮ್ಮ ಬಜೆಟ್ ನಲ್ಲಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

ರಾಜ್ಯದ ರೈತ ಮಹಿಳೆಯರು ಹಲವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸಾಲ ಮಾಡಿಕೊಂಡು ಸಿಕ್ಕಾಪಟ್ಟೆ ಬಡ್ಡಿ ಕಟ್ಟಿ ಸಾಲದ ಸುಳಿಯಲ್ಲಿ ಬೀಳುವಂತ ಮಹಿಳೆಯರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.ಗೃಹಲಕ್ಷಿ ಯೋಜನೆಯ ಮೂಲಕ ರೈತರ ಆಭರಣಗಳಿಗೆ ಶೇ.3 ರಷ್ಟು ಬಡ್ಡಿ ದರದಲ್ಲಿ ಬೆಳೆ ಸಾಲ ನೀಡಲಾಗುವುದು ಎಂದು ಸಿಎಂ ಇವತ್ತು ತಮ್ಮ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ.

ರೈತರಿಗೆ ಅನುಕೂಲವಾಗುವಂತೆ ಹೈನುಗಾರಿಕೆ ವಿಭಾಗಕ್ಕೆ ಸಹಾಯಧನ ನೀಡಲಾಗಿದೆ. ಹಾಲಿನ ಪ್ರೋತ್ಸಾಹ ಧನ ೫ ರಿಂದ ೬ ರೂಗಳಿಗೆ ಹೆಚ್ಚಳ ಮಾಡಲಾಗಿದೆ. ಹಾಲು ಉತ್ಪಾದಕರನ್ನು ಉತ್ತೇಜಿಸಲು 2502 ಕೋಟಿ ರೂ ಅನುದಾನ ಘೋಷಣೆ.

ಇನ್ನು ರೈತ ಸಿರಿ ಯೋಜನೆ ಘೋಷಣೆ ಮಾಡಿದ ಸಿಎಂ ಕುಮಾರಸ್ವಾಮಿ. ಈ ಯೋಜನೆಯಲ್ಲಿ ಸಿರಿಧಾನ್ಯಗಳ ವ್ಯಾಸಾಯಕ್ಕಾಗಿ ರೈತರಿಗೆ ಹತ್ತು ಸಾವಿರ ರೂಗಳನ್ನು ನೀಡಲಾಗುತ್ತದೆ.

ಇಂದು ಎಕರೆಗೆ ಹತ್ತು ಸಾವಿರ ನಂತೆ ರೈತರ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾಹಿಸಲಾಗುತ್ತದೆ. ಈ ರೀತಿಯಾಗಿ ಸಿಎಂ ಕುಮಾರಸ್ವಾಮಿ ತಮ್ಮ ಎರಡನೇ ಬಜೆಟ್ ನಲ್ಲಿ ರೈತರಿಗಾಗಿ ಈ ಹೊಸ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ ಎಂದ ಸುಮಲತಾ, ನಿಮ್ಮ ಪ್ರಕಾರ ಯಾವ ಪಕ್ಷದನ್ನು ಸ್ಪರ್ದಿಸಬೇಕು..!

ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ …

Leave a Reply

Your email address will not be published. Required fields are marked *