Breaking News
Home / Featured / ಲೋಕ ಸಮರಕ್ಕೂ ಮುನ್ನ ಬಿಗ್ ಗಿಫ್ಟ್ ಕೊಟ್ಟ ಮೋದಿ ಸರ್ಕಾರ..!

ಲೋಕ ಸಮರಕ್ಕೂ ಮುನ್ನ ಬಿಗ್ ಗಿಫ್ಟ್ ಕೊಟ್ಟ ಮೋದಿ ಸರ್ಕಾರ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಲೋಕ ಸಮರಕ್ಕೂ ಮುನ್ನ ಬಿಗ್ ಗಿಫ್ಟ್ ಕೊಟ್ಟ ಮೋದಿ ಸರ್ಕಾರ ಏನಿದು ಹೊಸ ಯೋಜನೆ ಅಂತೀರಾ ಇಲ್ಲಿದೆ ನೋಡಿ. ಲೋಕಸಭೆ ಚುನಾವಣೆಗೂ ಮೊದಲು ಕೇಂದ್ರ ಸರಕಾರಿ ನೌಕರರಿಗೆ ಪ್ರಧಾನಿ ಮೋದಿ ಸರಕಾರದಿಂದ ಸಿಹಿ ಸುದ್ದಿ ಹೊರಬೀಳುವ ಸಾಧ್ಯತೆಯಿದೆ. ಏಳನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕೆಂಬ ಕೇಂದ್ರ ಸರಕಾರಿ ನೌಕರರ ಬಹುದಿನಗಳ ಬೇಡಿಕೆ ಶೀಘ್ರವೇ ಈಡೇರುವ ನಿರೀಕ್ಷೆ ಇದೆ.

ಕೇಂದ್ರ ಸರಕಾರಿ ನೌಕರರ ಕನಿಷ್ಠ ವೇತನವನ್ನು ಹೆಚ್ಚಿಸುವ ಸಂಬಂಧ ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ ಎಂದು ರಾಷ್ಟ್ರೀಯ ಜಂಟಿ ಕ್ರಿಯಾ ಮಂಡಳಿಯ ಮುಖ್ಯಸ್ಥರಾದ ಶಿವ ಗೋಪಾಲ್‌ ಮಿಶ್ರಾ ಇತ್ತೀಚಿಗೆ ಹೇಳಿಕೆ ನೀಡಿದ್ದರು.

ಹೀಗಾಗಿ ಕೇಂದ್ರ ಸರಕಾರಿ ನೌಕರರ ನಿರೀಕ್ಷೆ ಗರಿಗೆದರಿದೆ. ಏಳನೇ ವೇತನ ಯೋಗದ ಶಿಫಾರಸ್ಸಿನಂತೆ ಕೇಂದ್ರ ಸರಕಾರಿ ನೌಕರರ ಕನಿಷ್ಠ ವೇತನ ಈಗಿರುವ 18,000 ರೂ.ಗಳಿಂದ 26,000 ರೂ. ಹೆಚ್ಚಿಸಬೇಕು ಎಂಬುದು ನೌಕರರ ಬೇಡಿಕೆ. ಬಹುತೇಕ ಅದು ಈಡೇರಲಿದೆ ಎಂದು ಮೂಲಗಳು ತಿಳಿಸಿವೆ.

ಏಳನೇ ವೇತನ ಆಯೋಗದ ಶಿಫಾರಸ್ಸು ಜಾರಿಯಿಂದ ಹಣದುಬ್ಬರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕನಿಷ್ಠ ವೇತನ ಹೆಚ್ಚಳದಿಂದ ದೇಶದ ಬೊಕ್ಕಸಕ್ಕೆ ಭಾರಿ ಹೊರೆ ಬೀಳಲಿದೆ ಎಂದು ಆರ್ಥಿಕ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಏನೇ ಆಗಲಿ ನೌಕರರ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸಲಿ ಎಂಬುದು ಕೇಂದ್ರ ಸರ್ಕಾರೀ ನೌಕರರ ಆಶಯವಾಗಿದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ ಎಂದ ಸುಮಲತಾ, ನಿಮ್ಮ ಪ್ರಕಾರ ಯಾವ ಪಕ್ಷದನ್ನು ಸ್ಪರ್ದಿಸಬೇಕು..!

ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ …

Leave a Reply

Your email address will not be published. Required fields are marked *