Breaking News
Home / Featured / ಚಿಕನ್ ಕಬಾಬ್ ಗಿಂತ ತರಕಾರಿ ಕಬಾಬ್ ಆರೋಗ್ಯಕ್ಕೆ ಉತ್ತಮ, ಈ ತರಕಾರಿ ಕಬಾಬ್ ಮಾಡುವ ವಿಧಾನ ಇಲ್ಲಿದೆ ನೋಡಿ..!

ಚಿಕನ್ ಕಬಾಬ್ ಗಿಂತ ತರಕಾರಿ ಕಬಾಬ್ ಆರೋಗ್ಯಕ್ಕೆ ಉತ್ತಮ, ಈ ತರಕಾರಿ ಕಬಾಬ್ ಮಾಡುವ ವಿಧಾನ ಇಲ್ಲಿದೆ ನೋಡಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ನಿಮ್ಮ ದೇಹಕ್ಕೆ ತರಕಾರಿ ಹೆಚ್ಚು ಆರೋಗ್ಯವನ್ನು ಮತ್ತು ಶಕ್ತಿಯನ್ನು ನೀಡುತ್ತದೆ. ಹಾಗಾಗಿ ತರಕಾರಿ ಕಬಾಬ್ ಸೇವನೆ ಮಾಡುವುದರಿಂದ ನಿಮ್ಮ ಅರೋಗ್ಯ ಉತ್ತಮವಾಗಿರುತ್ತದೆ.

ಬೇಕಾಗುವ ಪದಾರ್ಥಗಳು: ಕ್ಯಾರೆಟ್ ಆಲೂಗಡ್ಡೆ ,ಉಪ್ಪು, ಹೆಸರುಕಾಳು, ಅಚ್ಚ ಖಾರದ ಪುಡಿ, ಜೀರಿಗೆ ಪುಡಿ ಅರ್ಧ ಚಮಚ ,ಮೆಂತ್ಯೆ ಸೊಪ್ಪಿನ, ಪುಡಿಅರ್ಧ ಚಮಚ.

ದನಿಯಾ ಪುಡಿ ಆರ್ಧ ಚಮಚ, ಗರಂ ಮಸಾಲಾ ಪುಡಿ ಅರ್ಧ ಚಮಚ, ಅರಿಶಿಣದ ಪುಡಿ ಸ್ವಲ್ಪ ಕೊತ್ತಂಬರಿ ಸೊಪ್ಪು ಸ್ವಲ್ಪ, ಪುದೀನಾ ಸ್ವಲ್ಪ, ಹಸಿಮೆಣಸಿನ ಕಾಯಿ 3-4 , ಮೊಟ್ಟೆ ,ಬ್ರೆಡ್ ಪೌಡರ್, 1 ಬಟ್ಟಲು ಎಣ್ಣೆ ಕರಿಯಲು

ಮಾಡುವ ವಿಧಾನ: ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ನೀರು, ಉಪ್ಪು ಹಾಕಬೇಕು. ಆಲೂಗಡ್ಡೆ, ಕ್ಯಾರೆಟ್ ನ್ನು ಸಣ್ಣದಾಗಿ ಕತ್ತರಿಸಿಕೊಂಡು ನೀರಿಗೆ 10-15 ನಿಮಿಷ ಬೇಯಲು ಬಿಡಬೇಕು. ಹೆಸರುಕಾಳನ್ನು ಬೇಯಿಸಿಕೊಳ್ಳಬೇಕು. ಬೆಂದ ಬಳಿಕ ನೀರನ್ನು ತೆಗೆಯಬೇಕು. ಕ್ಯಾರೆಟ್, ಆಲೂಗಡ್ಡೆ, ಹೆಸರುಕಾಳನ್ನು ನುಣ್ಣಗೆ ಮಾಡಿಕೊಳ್ಳಬೇಕು.

ಮತ್ತೊಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ನುಣ್ಣೆ ಮಾಡಿಕೊಂಡ ಕಾಳು, ಕ್ಯಾರೆಟ್, ಆಲೂವನ್ನು ಹಾಕಿ, ಅಚ್ಚ ಖಾರದ ಪುಡಿ, ಜೀರಿಗೆ ಪುಡಿ, ಮೆಂತ್ಯೆ ಸೊಪ್ಪಿನ ಪುಡಿ, ದನಿಯಾ ಪುಡಿ, ಗರಂ ಮಸಾಲಾ ಪುಡಿ, ಅರಿಶಿಣದ ಪುಡಿ, ಕೊತ್ತಂಬರಿ ಸೊಪ್ಪು ಪುದೀನಾ, ಹಸಿಮೆಣಸಿನ ಕಾಯಿ ಸಣ್ಣಗೆ ಹೆಚ್ಚಿದ್ದು, ಮೊಟ್ಟೆ 1, ಬ್ರೆಡ್ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆಯನ್ನು ಹಾಕಿ ಬಿಸಿಯಾಗಲು ಬಿಡಬೇಕು.

ನಂತರ ಪಾತ್ರೆಯೊಂದಕ್ಕೆ 4 ಮೊಟ್ಟೆಯನ್ನು ಒಡೆದು ಹಾಕಿ. ಮಾಡಿಕೊಂಡ ಮಿಶ್ರಣವನ್ನು ವಡೆ ಆಕಾರಕ್ಕೆ ತಟ್ಟಿಕೊಳ್ಳಬೇಕು. ಉಳಿದ ಬ್ರೆಡ್ ಪೌಡರ್ ನ್ನು ಮತ್ತೊಂದು ಪಾತ್ರಯಲ್ಲಿಟ್ಟುಕೊಳ್ಳಬೇಕು. ವಡೆಯಂತೆ ತಟ್ಟಿದ ಮಿಶ್ರಣವನ್ನು ಮೊದಲಿಗೆ ಮೊಟ್ಟೆಯಲ್ಲಿ ಅದ್ದಿ, ನಂತರ ಬ್ರೆಡ್ ಪೌಡರ್ ಲ್ಲಿ ಅದ್ದಬೇಕು. ಮತ್ತೆ ಮೊಟ್ಟೆಯಲ್ಲಿ ಅದ್ದಿ, ಬ್ರೆಡ್ ಪೌಡರ್ ನಲ್ಲಿ ಅದ್ದಿಕೊಳ್ಳಬೇಕು. ಹೀಗೆ ಎಲ್ಲವನ್ನೂ ಮಾಡಿಕೊಂಡು ಕಾದ ಎಣ್ಣೆಯಲ್ಲಿ ಹಾಕಿ ಕೆಂಪಗೆ ಕರಿದರೆ ರುಚಿಕರವಾಗ ತರಕಾರಿ ಕಬಾಬ್ ಸವಿಯಲು ಸಿದ್ಧ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ ಎಂದ ಸುಮಲತಾ, ನಿಮ್ಮ ಪ್ರಕಾರ ಯಾವ ಪಕ್ಷದನ್ನು ಸ್ಪರ್ದಿಸಬೇಕು..!

ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ …

Leave a Reply

Your email address will not be published. Required fields are marked *