Breaking News
Home / Featured / ರೈತರ ಖಾತೆಗೆ 6000 ರು ಮೊದಲ ಕಂತು ವಿತರಣೆಗೆ ದಿನಾಂಕ ಫಿಕ್ಸ್ ಸಹಾಯಧನ ಪಡೆಯುವುದು ಹೇಗೆ?

ರೈತರ ಖಾತೆಗೆ 6000 ರು ಮೊದಲ ಕಂತು ವಿತರಣೆಗೆ ದಿನಾಂಕ ಫಿಕ್ಸ್ ಸಹಾಯಧನ ಪಡೆಯುವುದು ಹೇಗೆ?

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ವರ್ಷ 6 ಸಾವಿರ ರು. ನಗದು ನೀಡುವ ಸಲುವಾಗಿ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ ಯೋಜನೆಯನ್ನು ಶುಕ್ರವಾರವಷ್ಟೇ ಬಜೆಟ್‌ನಲ್ಲಿ ಪ್ರಕಟಿಸಿದ್ದ ಕೇಂದ್ರ ಸರ್ಕಾರ, ಅದನ್ನು ತ್ವರಿತವಾಗಿ ತರಲು ತಕ್ಷಣದಿಂದಲೇ ಭರದ ಸಿದ್ಧತೆ ಆರಂಭಿಸಿದೆ.

ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಅವರು ಬಜೆಟ್‌ನಲ್ಲಿ ಈ ಯೋಜನೆ ಘೋಷಣೆ ಮಾಡಿದ ದಿನವೇ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಕೃಷಿ ಇಲಾಖೆ ಕಾರ್ಯದರ್ಶಿಗಳು ಪತ್ರ ಬರೆದು, ಆದಷ್ಟುಬೇಗನೆ ಫಲಾನುಭವಿಗಳನ್ನು ಗುರುತಿಸುವಂತೆ ಸೂಚನೆ ನೀಡಿದ್ದಾರೆ.

ತಲಾ 2 ಸಾವಿರ ರು.ನಂತೆ 3 ಕಂತುಗಳಲ್ಲಿ ರೈತರ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡುವ ಯೋಜನೆ ಇದಾಗಿದೆ. ಮೊದಲ ಕಂತು ಮಾ.31ರೊಳಗೆ ರೈತರ ಖಾತೆ ತಲುಪಬೇಕಾಗಿದೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳನ್ನು ಗುರುತಿಸುವಂತೆ ರಾಜ್ಯಗಳಿಗೆ ಸಂದೇಶ ರವಾನಿಸಿದೆ.

ಪ್ರತಿ ಗ್ರಾಮದಲ್ಲೂ ಅರ್ಹ ಫಲಾನುಭವಿಯ ಹೆಸರು, ಲಿಂಗ ಹಾಗೂ ಆತ/ಆಕೆ ಎಸ್ಸಿ ಅಥವಾ ಎಸ್ಟಿಸಮುದಾಯಕ್ಕೆ ಸೇರಿದ್ದಾರೆಯೇ ಎಂಬ ಮಾಹಿತಿಯನ್ನು ಸಂಗ್ರಹಿಸುವಂತೆ ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಈ ಫಲಾನುಭವಿಗಳ ಹೆಸರನ್ನು ಗ್ರಾಮ ಪಂಚಾಯಿತಿ ನೋಟಿಸ್‌ ಬೋರ್ಡ್‌ನಲ್ಲಿ ಫಲಕ ಪ್ರಕಟಿಸಲಾಗುತ್ತದೆ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ ಎಂದ ಸುಮಲತಾ, ನಿಮ್ಮ ಪ್ರಕಾರ ಯಾವ ಪಕ್ಷದನ್ನು ಸ್ಪರ್ದಿಸಬೇಕು..!

ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ …

Leave a Reply

Your email address will not be published. Required fields are marked *