Breaking News
Home / Featured / ಹೊರನಾಡು ಅನ್ನಪೂರ್ಣೇಶ್ವರಿಯ ಸನ್ನಿದಿಗೆ ಬಂದು ಹೀಗೆ ಮಾಡಿದರೆ ಎಂದಿಗೂ ಅನ್ನದ ಕೊರತೆ ಇರೋದಿಲ್ಲ.!

ಹೊರನಾಡು ಅನ್ನಪೂರ್ಣೇಶ್ವರಿಯ ಸನ್ನಿದಿಗೆ ಬಂದು ಹೀಗೆ ಮಾಡಿದರೆ ಎಂದಿಗೂ ಅನ್ನದ ಕೊರತೆ ಇರೋದಿಲ್ಲ.!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ತಾಯಿ ಅನ್ನಪೂರ್ಣಿಯ ಸನ್ನಿದಿಯಲ್ಲಿ ಬಂದು ಪೂಜೆ ಸಲ್ಲಿಸಿದರೆ ಎಂದಿಗೂ ಅನ್ನದ ಕೊರತೆ ಇರೋದಿಲ್ಲ ಅನ್ನೋ ನಂಬಿಕೆ ಭಕ್ತರದ್ದು ಈ ದೇವಾಲಯದ ಹಲವು ವಿಶೇಷತೆ ಇಲ್ಲಿದೆ ನೋಡಿ. ಶ್ರೀ ಕ್ಷೇತ್ರ ಹೊರನಾಡು ಎಂದೂ ಕರೆಯಲಾಗುವ ಅನ್ನಪೂರ್ಣೇಶ್ವರಿ ದೇವಸ್ಥಾನ, ಚಿಕ್ಕಮಗಳೂರಿನ ಹೊರನಾಡಿನಲ್ಲಿರುವ ಭದ್ರಾ ನದಿಯ ದಡದ ಮೇಲಿದೆ. ಈ ದೇವಾಲಯವು ಪ್ರಾಚೀನ ಇತಿಹಾಸವನ್ನು ಹೊಂದಿದೆ.

ಈ ದೇವಸ್ಥಾನವನ್ನು ಅಗಸ್ತ್ಯ ಮುನಿಗಳು 400 ವರ್ಷಗಳ ಹಿಂದೆ ಕಟ್ಟಿಸಿದ್ದು. ವಾಸ್ತು ಶಿಲ್ಪ ಹಾಗು ಜ್ಯೋತಿಷ್ಯವನ್ನು ಅವಲಂಬಿಸಿ ಈ ಸಣ್ಣ ದೇವಸ್ಥಾನಕ್ಕೆ ನವೀಕರಣ ಹಾಗು ಸೇರ್ಪಡೆಗಳನ್ನು ಮಾಡಲಾಯಿತು. ಇಲ್ಲಿ ದೇವಿ, ಪೀಠದ ಮೇಲೆ ಶಂಖ, ಚಕ್ರ ಹಾಗು ಶ್ರೀ ಚಕ್ರವನ್ನು ಹಿಡಿದು ನಿಂತಿದ್ದಾಳೆ.

ವಿಶೇಷ: ತಾಯಿಯ ಸನ್ನಿದಿಗೆ ಬಂದಂತ ಭಕ್ತರಿಗೆ ತಿಂಡಿ, ಮಧ್ಯಾಹ್ನದ ಊಟ ಹಾಗು ರಾತ್ರಿ ಊಟವನ್ನು ನೀಡಲಾಗುತ್ತದೆ ಹಾಗು ಉಳಿದುಕೊಳ್ಳಲು ದೇವಸ್ಥಾನದ ಆವರಣದಲ್ಲೇ ಸ್ಥಳ ನೀಡಲಾಗುತ್ತದೆ.

ಭಕ್ತರ ನಂಬಿಕೆ: ಭಕ್ತರ ಪ್ರಕಾರ ಇಲ್ಲಿ ಪೂಜೆ ಸಲ್ಲಿಸಿದವರಿಗೆ ತಮ್ಮ ಜೀವನದಲ್ಲಿ ಎಂದಿಗೂ ಅನ್ನದ ಕೊರತೆ ಬರುವುದಿಲ್ಲ ಎಂಬುದು.

ಅನ್ನ ಪೂರ್ಣೇಸರಿ ಎಂದು ಹೆಸರು ಬರಲು ಕಾರಣ: ತನ್ನ ಸನ್ನಿದಿಗೆ ಬಂದಂತ ಭಕ್ತರಿಗೆ ಮೂರೂ ಹೊತ್ತು ಅನ್ನವನ್ನು ಕೊಡುತ್ತಾಳೆ ಹಾಗು ಯಾವುದೇ ತೊಂದರೆ ಇಲ್ಲದೆ ತನ್ನ ದರುಶನವನ್ನು ಪಡೆಯುವಂತೆ ಮಾಡುತ್ತಲೇ ಹಾಗಾಗಿ ಭಕ್ತರು ‘ಎಲ್ಲರಿಗೂ ಅನ್ನ ನೀಡುವ ತಾಯಿ ಅನ್ನಪೂರ್ಣೇಶ್ವರಿ’ ಎಂದು ಕರೆಯುತ್ತಾರೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ ಎಂದ ಸುಮಲತಾ, ನಿಮ್ಮ ಪ್ರಕಾರ ಯಾವ ಪಕ್ಷದನ್ನು ಸ್ಪರ್ದಿಸಬೇಕು..!

ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ …

Leave a Reply

Your email address will not be published. Required fields are marked *