Breaking News
Home / Featured / ಯಾರು ನಿರೀಕ್ಷೆ ಮಾಡಿರಲಿಲ್ಲ ಹನುಮಂತುಗೆ ಡಿ ಬಾಸ್ ಇಷ್ಟೊಂದು ಬಹುದೊಡ್ಡ ಗಿಫ್ಟ್ ಕೊಡ್ತಾರೆ ಅಂತ..!

ಯಾರು ನಿರೀಕ್ಷೆ ಮಾಡಿರಲಿಲ್ಲ ಹನುಮಂತುಗೆ ಡಿ ಬಾಸ್ ಇಷ್ಟೊಂದು ಬಹುದೊಡ್ಡ ಗಿಫ್ಟ್ ಕೊಡ್ತಾರೆ ಅಂತ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಯಾರು ನಿರೀಕ್ಷೆ ಮಾಡಿರಲಿಲ್ಲ ಹನುಮಂತುಗೆ ಡಿ ಬಾಸ್ ಇಷ್ಟೊಂದು ಬಹುದೊಡ್ಡ ಗಿಫ್ಟ್ ಕೊಡ್ತಾರೆ ಅಂತ ಏನು ಅನ್ನೋದು ಇಲ್ಲಿದೆ ನೋಡಿ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊದಲಿನಿಂದಲೂ ಒಳ್ಳೆಯ ಪ್ರತಿಭೆಗಳಿಗೆ ಅವಕಾಶ ಕೊಡಬೇಕೆಂಬುದು ದರ್ಶನ್ ರವರ ವಾದವಾಗಿದೆ ಅದರಂತೆಯೇ ಅವರು ಸಹ ನಡೆದುಕೊಳ್ಳುತ್ತಾರೆ ಅಷ್ಟೇ ಅಲ್ಲದೆ ಯಾರ ಬದುಕಿನಲ್ಲೂ ಕಷ್ಟ ಕಾಣಬಾರದು ಎಂಬುದು ಚಾಲೆಂಜಿಂಗ್ ಸ್ಟಾರ್ ರವರ ಕನಸು.

ಇಂತಹ ಸಮಯದಲ್ಲಿ ಕುರಿ ಕಾಯುವ ಹುಡುಗನೊಬ್ಬ ಸರಿಗಮಪ ವೇದಿಕೆಯಲ್ಲಿ ಇಡೀ ಕರ್ನಾಟಕದ ಜನರ ಮನವನ್ನು ತಟ್ಟುತ್ತಿದ್ದಾರೆ ಇದನ್ನು ಕಂಡ ದರ್ಶನ್ ರವರು ತಮ್ಮ ಬಹು ನಿರೀಕ್ಷಿತ ಸಿನಿಮಾ ವಾಗಿರುವ ರಾಬರ್ಟ್ ಚಿತ್ರದ ಶೂಟಿಂಗ್ ನಲ್ಲಿ ನಿರತವಾಗಿರುವ ಸಮಯದಲ್ಲಿ ಬಿಡುವು ಮಾಡಿಕೊಂಡು ಅರ್ಜುನ್ ಜನ್ಯ ರವರಿಗೆ ಕರೆ ಮಾಡಿ ಒಂದು ಬೇಡಿಕೆಯನ್ನು ಮುಂದೆ ಇಡುತ್ತಾರೆ.

ಅದುವೇ ಹನುಮಂತಪ್ಪ ಅವರನ್ನು ಕರೆದುಕೊಂಡು ಬನ್ನಿ ನಾನು ನನ್ನ ಮುಂದಿನ ಚಿತ್ರವಾದ ರಾಬರ್ಟ್ ಚಿತ್ರದಲ್ಲಿ ಹನುಮಂತಪ್ಪ ನವರಿಗೆ ಒಂದು ಹಾಡನ್ನು ಹಾಡಲು ಅವಕಾಶ ನೀಡಬೇಕಾಗಿದೆ ಹೇಗಿದ್ದರೂ ನೀವೇ ಅದರ ಸಂಗೀತ ಸಂಯೋಜನೆ ಮಾಡಲಿದ್ದೀರಿ, ಆದ ಕಾರಣ ನೀವು ಹೇಗಾದರೂ ಮಾಡಿ ಹನುಮಂತಪ್ಪ ನವರ ಮನವೊಲಿಸಿ ನನ್ನ ಸಿನಿಮಾದಲ್ಲಿ ಹಾಡುವಂತೆ ಮಾಡಿ ಎಂದು ಹೇಳಿದ್ದಾರೆ.

ಇದನ್ನು ಕೇಳಿದ ಅರ್ಜುನ್ ಜನ್ಯ ರವರು ಒಂದು ಕ್ಷಣ ದಂಗಾಗಿ, ಹುಡುಗನ ಮನವೊಲಿಸುವ ಯಾವುದೇ ಅವಕಾಶ ಬೇಕಾಗಿಲ್ಲ ಬದಲಾಗಿ ನೀವು ಹೇಳಿದರೆ ಸಾಕು ಆತ ಬಂದು ನಿಮ್ಮ ಮುಂದೆ ಹಾಡುತ್ತಾನೆ ಎಂದು ಹನುಮಂತಪ್ಪನವರ ಸಾಮಾನ್ಯ ಗುಣ ಏನೆಂಬುದನ್ನು ದರ್ಶನ್ ರವರಿಗೆ ತಿಳಿಸಿದ್ದಾರೆ. ಈ ಮೂಲಕ ಹನುಮಂತಪ್ಪನವರು ರಾಬರ್ಟ್ ಚಿತ್ರದಲ್ಲಿ ಹಾಡೊಂದನ್ನು ಹಾಡುವುದು ಖಚಿತವಾಗಿದ್ದು ಹಾಡಿನ ಬಿಡುಗಡೆಗಾಗಿ ದರ್ಶನ್ ಹಾಗೂ ಹನುಮಂತಪ್ಪನವರ ಅಭಿಮಾನಿಗಳು ಕಾಯುತ್ತಾ ಕುಳಿತಿದ್ದಾರೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ ಎಂದ ಸುಮಲತಾ, ನಿಮ್ಮ ಪ್ರಕಾರ ಯಾವ ಪಕ್ಷದನ್ನು ಸ್ಪರ್ದಿಸಬೇಕು..!

ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ …

Leave a Reply

Your email address will not be published. Required fields are marked *