Breaking News
Home / Featured / ಬೆಡ್ ರೂಂ, ಕ್ಲೋಸ್ ಅಪ್ ಸೀನ್ ಇರುವ ಚಿತ್ರವನ್ನ ಯಾಕೆ ಮಾಡ್ಬೇಕು ಶ್ರುತಿ ಹರಿಹರನ್‍ಗೆ ಟಾಂಗ್ ಕೊಟ್ಟಿದು ಯಾರು ಗೊತ್ತಾ..!

ಬೆಡ್ ರೂಂ, ಕ್ಲೋಸ್ ಅಪ್ ಸೀನ್ ಇರುವ ಚಿತ್ರವನ್ನ ಯಾಕೆ ಮಾಡ್ಬೇಕು ಶ್ರುತಿ ಹರಿಹರನ್‍ಗೆ ಟಾಂಗ್ ಕೊಟ್ಟಿದು ಯಾರು ಗೊತ್ತಾ..!

ಕಳೆದ ವರ್ಷ ‘ವಿಸ್ಮಯ’ ಸಿನಿಮಾದಲ್ಲಿ ನಟ ಅರ್ಜುನ್ ಸರ್ಜಾ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಶೃತಿ ಹರಿಹರನ್ ಗಂಭೀರ ಆರೋಪವನ್ನು ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಕಿಯಿಸಿರುವ ಅರ್ಜುನ್ ಸರ್ಜಾ ಅವರ ಅತ್ತೆ ಪಾರ್ವತಮ್ಮ ಅವರು, ಬೆಡ್ ರೂಮ್ ಮತ್ತು ಕ್ಲೋಸ್ ಆಪ್ ಸೀನ್ ಇದ್ದ ಚಿತ್ರವನ್ನು ನಟಿಯರು ಒಪ್ಪಿಕೊಂಡು ಆಮೇಲೆ ಇಂತಹ ಆರೋಪ ಯಾಕೆ ಮಾಡಬೇಕು. ಈ ಸೀನ್ ಗಳಿಗೆ ಒಪ್ಪಿ ಆಮೇಲೆ ಅಯ್ಯೋ ನಂಗೆ ಹಂಗ್ ಮಾಡಿದರು, ಹಿಂಗ್ ಮಾಡಿದ್ರು ಅಂತ ದೂರುವ ಬದಲು ನಿಯತ್ತಾಗಿ ಸಂಸಾರ ಮಾಡಲಿ ಎಂದು ಶೃತಿ ಹರಿಹರನ್ ವಿರುದ್ಧ ಕಿಡಿ ಕಾರಿದ್ದಾರೆ.

ನಮ್ಮ ಅರ್ಜುನ್ ಅಂತಹ ವ್ಯಕ್ತಿ ಅಲ್ಲ. ಅವರು ಗಟ್ಟಿ ಚಿನ್ನ. ಇದುವರೆಗೆ ಅಂತಹ ಆರೋಪ ಯಾರೂ ಕೂಡ ಮಾಡಿಲ್ಲ. ಈ ಆರೋಪವನ್ನು ಘಟನೆ ನಡೆದ ದಿನವೇ ಶ್ರುತಿ ಯಾಕೆ ಮಾಡಿಲ್ಲ. ಸತ್ತ ಪ್ರಕರಣಕ್ಕೆ ಈಗ ಯಾಕೆ ಮರುಜೀವ ಕೊಡಬೇಕು ಇದೆಲ್ಲ ಪಬ್ಲಿಸಿಟಿ ಗಿಮಿಕ್ ಅಷ್ಟೇ. ಅರ್ಜುನ್ ಬಗ್ಗೆ ಯಾರು ಏನೇ ಹೇಳಿದರೂ ನಾವು ನಂಬಲ್ಲ.

ಇದು ಚಿತ್ರರಂಗ, ನಟಿಯರು ಕೂಡ ತಮಗೆ ಅನ್ ಕಂಫರ್ಟಬೆಲ್ ಅನಿಸುವ ಪಾತ್ರಗಳನ್ನು ಒಪ್ಪಿಕೊಳ್ಳಲು ಹೋಗಬಾರದು. ಒಪ್ಪಿಕೊಂಡ ಮೇಲೆ ಈ ರೀತಿ ಆಪಾದನೆಯನ್ನು ಮಾಡಬಾರದು. ಈ ಘಟನೆಯಿಂದ ನಮಗೆ ನೋವಾಗಿದೆ. ನಾನು ಇನ್ನಷ್ಟೇ ಮಗಳು, ಅಳಿಯನ ಜೊತೆ ಮಾತಾನಾಡಬೇಕಾಗಿದೆ ಎಂದು ಹೇಳಿದ್ದಾರೆ.

About SSTV Kannada

Check Also

ಮೂತ್ರಪಿಂಡಲ್ಲಿ ಕಲ್ಲಾಗಿರುವ ಸಮಸ್ಯೆಯೇ ಇದ್ದರೆ ಅದಕ್ಕೆ ನಿಮ್ಮ ಮನೆಯಲ್ಲಿಯೇ ಇದೆ ಸುಲಭ ಮನೆಮದ್ದು..!

ಪೈಲ್ಸ್, ಪಿಸ್ತುಲ, ಚರ್ಮ ರೋಗ, ಮೂಳೆ ಮಂಡಿ ನೋವು , ಅಜೀರ್ಣ, ಮುಟ್ಟು ಸಮಸ್ಯೆ , ಕ್ಷಯ ರೋಗ, ಬಿ …

Leave a Reply

Your email address will not be published. Required fields are marked *