Breaking News
Home / Featured / ಕೇವಲ 7 ರೂ ಪಾವತಿಸಿದರೆ ನಿಮಗೆ ಸಿಗುತ್ತದೆ 50 ಲಕ್ಷ ರೂ ವಿಮೆ ಹೇಗೆ ಗೊತ್ತಾ..!

ಕೇವಲ 7 ರೂ ಪಾವತಿಸಿದರೆ ನಿಮಗೆ ಸಿಗುತ್ತದೆ 50 ಲಕ್ಷ ರೂ ವಿಮೆ ಹೇಗೆ ಗೊತ್ತಾ..!

ಜನರ ಆರೋಗ್ಯ ಸುರಕ್ಷತಾ ದೃಷ್ಟಿಯಿಂದ ಭಾರತೀಯ ಜೀವ ವಿಮಾ ನಿಗಮವು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.ಈ ಹೊಸ ಯೋಜನೆಯಲ್ಲಿ ಪಾಲಿಸಿದಾರರಿಗೆ ಕ್ಯಾನ್ಸರ್‌ ರೋಗ ಉಂಟಾದರೆ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಅನುಕೂಲವಾಗುವಂತೆ ವಿಮೆಯನ್ನು ಸಿದ್ಧಪಡಿಸಿದೆ.ಕಡಿಮೆ ಮೊತ್ತದ ಹೆಚ್ಚು ಲಾಭದಾಯಕವಾಗಿರುವ ಈ ಪಾಲಿಸಿಗೆ ವರ್ಷಕ್ಕೆ 2400 ರೂ.ಗಳನ್ನು ಪಾವತಿಸಬೇಕು. ಅಂದರೆ ಪ್ರತಿದಿನ ಕೇವಲ 7 ರೂ. ಅಷ್ಟೇ. ಕ್ಯಾನ್ಸರ್‌ನ ಆರಂಭಿಕ ಹಂತ ಮತ್ತು ನಂತರದ ಹಂತಗಳಿಗೆ ವಿಮಾ ಮೊತ್ತ ದೊರೆಯಲಿದೆ.ಈ ಪಾಲಿಸಿಯನ್ನು ಆನ್​ಲೈನ್​ ಮೂಲಕ ಖರೀದಿಸಿದರೆ ಶೇ.7ರಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಬಹುದು.

ಎಲ್ಐಸಿ ಕ್ಯಾನ್ಸರ್ ಕವರ್ ಯೋಜನೆ: ಈ ಯೋಜನೆಯನ್ನು ಪಡೆಯಲು ಇರುವ ಅರ್ಹತೆಗಳು ಈ ಪಾಲಿಸಿಯನ್ನು ಖರೀದಿಸಲು ಕನಿಷ್ಠ ವಯಸ್ಸು: 20 ವರ್ಷ, ಗರಿಷ್ಠ ವಯಸ್ಸು: 65 ವರ್ಷ, ಮೆಚ್ಯೂರಿಟಿಯ ಕನಿಷ್ಠ ವಯಸ್ಸು: 50 ವರ್ಷ ,ಮೆಚ್ಯೂರಿಟಿಯ ಗರಿಷ್ಠ ವಯಸ್ಸು: 75 ವರ್ಷ,ಕನಿಷ್ಠ ವಿಮಾ ಮೊತ್ತ: 10 ಲಕ್ಷ,ಗರಿಷ್ಠ ವಿಮಾ ಮೊತ್ತ : 50 ಲಕ್ಷ,ಪಾಲಿಸಿಯ ಕನಿಷ್ಠ ಅವಧಿ: 10 ವರ್ಷ,ಗರಿಷ್ಠ ಅವಧಿ: 30 ವರ್ಷ.

ಈ ಪಾಲಿಸಿಯನ್ನು ಪಡೆದುಕೊಂಡ ವ್ಯಕ್ತಿಯು ಎರಡು ಹಂತದಲ್ಲಿ ವಿಮಾ ಮೊತ್ತಕ್ಕೆ ಅರ್ಜಿ ಸಲ್ಲಿಸಬಹುದು. ಇದರಲ್ಲಿ ಕ್ಯಾನ್ಸರ್ ರೋಗದ ಆರಂಭಿಕ ಹಂತ ಮತ್ತು ಕ್ಯಾನ್ಸರ್ ರೋಗ ನಿರ್ಣಯದ ಹಂತ. ಇದನ್ನು ಅವಲಂಭಿಸಿ ವಿಮಾ ಮೊತ್ತವನ್ನು ನಿರ್ಣಯಿಸಲಾಗುತ್ತದೆ.

ಆರಂಭಿಕ ಹಂತ: ಇಲ್ಲಿ ಪಾಲಿಸಿದಾರರಿಗೆ ಆರಂಭಿಕ ಘಟ್ಟದ ಕ್ಯಾನ್ಸರ್‌ ಪತ್ತೆಯಾದರೆ ಶೇ.25ರಷ್ಟು ಖಾತರಿಯ ವಿಮೆ ಪರಿಹಾರ ಮೊತ್ತ ಸಿಗಲಿದೆ. ಅಲ್ಲದೆ ಮುಂದಿನ ಮೂರು ವರ್ಷಗಳ ತನಕ ಪ್ರಿಮಿಯಂ ನೀಡಬೇಕಾಗಿಲ್ಲ. ಆದರೆ ಈ ಪ್ರಯೋಜನಗಳನ್ನು ಕೇವಲ ಆರಂಭಿಕ ಹಂತದಲ್ಲಿ ಮಾತ್ರ ನೀಡಲಾಗುತ್ತದೆ. ಮುಂದಿನ ಹಂತದಲ್ಲಿ ನಿಮ್ಮ ರೋಗವು ಆರಂಭಿಕ ಹಂತದಲ್ಲೇ ಗುರುತಿಸಲ್ಪಟ್ಟರೆ ಯಾವುದೇ ವಿಮೆಯನ್ನು ನೀಡಲಾಗುವುದಿಲ್ಲ. ಅಲ್ಲದೆ ನೀವು ಈಗಾಗಲೇ ಪ್ರಯೋಜನವನ್ನು ಪಡೆದುಕೊಂಡಿರುವುದರಿಂದ ನಿಮ್ಮ ವಿಮಾ ಮೊತ್ತವು ಪಾವತಿಸಿದ ವಿಮಾ ಮೊತ್ತಕ್ಕಿಂತ ಕಡಿಮೆ ಇರಲಿದೆ.

ಕ್ಯಾನ್ಸರ್‌ ರೋಗದ ಮಹತ್ವದ ಘಟ್ಟ :
ಲಂಪ್ ಸಮ್ ಲಾಭಗಳು: ಕ್ಯಾನ್ಸರ್‌ ರೋಹ ಮಹತ್ವದ ಘಟ್ಟದಲ್ಲಿದ್ದರೆ, ಶೇ.100ರಷ್ಟು ಖಾತರಿಯ ಮೊತ್ತ ಪರಿಹಾರ ಸಿಗಲಿದೆ. ನೀವು ಆರಂಭಿಕ ಹಂತದಲ್ಲಿ ವಿಮೆಯನ್ನು ಪಡೆದುಕೊಂಡಿದ್ದರೆ ಈ ಮೊತ್ತವು ಕಡಿಮೆಯಾಗುತ್ತದೆ.

ವರಮಾನ ಲಾಭಗಳು: 10 ವರ್ಷಗಳವರಗೆ ವಿಮೆ ಮೊತ್ತದ ಶೇ.1ರಷ್ಟು ನಿಮಗೆ ನೀಡಲಾಗುತ್ತದೆ. ಈ ವೇಳೆ ನೀವೇನಾದರೂ ಮೃತಪಟ್ಟರೆ, ಈ ಮೊತ್ತವು ನಾಮಿನಿಗೆ ಪಾವತಿಸಲಾಗುತ್ತದೆ.

ಪ್ರೀಮಿಯಂ ಮನ್ನಾ ಪ್ರಯೋಜನ: ಕ್ಯಾನ್ಸರ್​ನ ಮಹತ್ವದ ಘಟ್ಟದಲ್ಲಿದ್ದರೆ ನೀವು ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಅದೇ ರೀತಿಯ ನೀವು ನೇರವಾಗಿ ರೋಗದ ಎರಡನೇ ಹಂತದ ಪ್ರಯೋಜನಗಳನ್ನು ಪಡೆದುಕೊಂಡರೆ, ಆರಂಭಿಕ ಹಂತದ ಕ್ಯಾನ್ಸರ್ ಲಾಭಗಳನ್ನು ಪಡೆಯಲು ಸಾಧ್ಯವಿಲ್ಲ. ಪ್ರಮುಖ ಹಂತದ ಕ್ಯಾನ್ಸರ್ ವಿಮೆಯನ್ನು ಪಡೆದುಕೊಂಡ ಬಳಿಕ ನಿಮ್ಮ ಪಾಲಿಸಿಯು ಅಂತ್ಯಗೊಳುತ್ತದೆ.

ನೀವು 10 ಲಕ್ಷದ ಪಾಲಿಸಿ ಯೋಜನೆಯನ್ನು ತೆಗೆದುಕೊಂಡಿರುತ್ತೀರಿ. ಇದಾದ ಎರಡು ವರ್ಷಗಳ ಬಳಿಕ ನಿಮಗೆ ಆರಂಭಿಕ ಕ್ಯಾನ್ಸರ್ ಕಂಡು ಬಂದರೆ ನಿಮಗೆ 2.5 ಲಕ್ಷ ನೀಡಲಾಗುತ್ತದೆ. ಮುಂದಿನ ಮೂರು ವರ್ಷ ನೀವು ಯಾವುದೇ ಪ್ರಿಮಿಯಂ ಪಾವತಿಸಬೇಕಾಗಿಲ್ಲ. 5 ವರ್ಷಗಳ ನಂತರ ಕ್ಯಾನ್ಸರ್ ರೋಗವು ಮಹತ್ವದ ಘಟ್ಟ ತಲುಪಿದ್ದರೆ ಉಳಿದ 7.5 ಲಕ್ಷ ವಿಮಾ ಮೊತ್ತವನ್ನು ಭಾರತೀಯ ಜೀವ ವಿಮಾ ನಿಗಮವು ಪಾವತಿಸುತ್ತದೆ.

About SSTV Kannada

Check Also

ಮೂತ್ರಪಿಂಡಲ್ಲಿ ಕಲ್ಲಾಗಿರುವ ಸಮಸ್ಯೆಯೇ ಇದ್ದರೆ ಅದಕ್ಕೆ ನಿಮ್ಮ ಮನೆಯಲ್ಲಿಯೇ ಇದೆ ಸುಲಭ ಮನೆಮದ್ದು..!

ಪೈಲ್ಸ್, ಪಿಸ್ತುಲ, ಚರ್ಮ ರೋಗ, ಮೂಳೆ ಮಂಡಿ ನೋವು , ಅಜೀರ್ಣ, ಮುಟ್ಟು ಸಮಸ್ಯೆ , ಕ್ಷಯ ರೋಗ, ಬಿ …

Leave a Reply

Your email address will not be published. Required fields are marked *