Breaking News
Home / Featured / ಸ್ಯಾಂಡಲ್ ವುಡ್ ನಲ್ಲಿ ಅಧಿಕ ಪ್ರಸಂಗಿಯ ಆಟ ಶುರು..!

ಸ್ಯಾಂಡಲ್ ವುಡ್ ನಲ್ಲಿ ಅಧಿಕ ಪ್ರಸಂಗಿಯ ಆಟ ಶುರು..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಈ ಪ್ರಪಂಚದಲ್ಲಿ ಅಧಿಕ ಪ್ರಸಂಗಿಗಳಿಗೆ ಕೊರತೆಯಿಲ್ಲ. ನಿಮ್ಮ ಸುತ್ತಮುತ್ತ ಫ್ರೆಂಡ್ಸ್, ಸಂಬಂಧಿಗಳಲ್ಲಿ, ಮನೆಗಳಲ್ಲಿ ಅಧಿಕ ಪ್ರಸಂಗಿ ಅಂತ ಒಬ್ರಾದ್ರೂ ಇದ್ದೇ ಇರ್ತಾರೆ.ಅಯ್ಯೋ ಇದೇನಪ್ಪಾ, ಅಧಿಕ ಪ್ರಸಂಗಿ ಬಗ್ಗೆ ಈಗ್ಯಾಕೆ ಮಾತು ಅಂತೀರಾ.

ಇದೇ ಶೀರ್ಷಿಕೆಯಡಿ ಒಂದು ಅದ್ಭುತ ಪ್ರಯೋಗಾತ್ಮಕ ಸಿನಿಮಾ ರೆಡಿಯಾಗ್ತಿದೆ. ಅಧಿಕ ಪ್ರಸಂಗಿ ಅಂದ್ರೆನೆ ಒಂಥರ ವಿಚಿತ್ರ, ಅದರಲ್ಲೂ ಅದೇ ಬೇಸ್ ಮೇಲೆ ಇಂಥ ಸಿನಿಮಾ ಬರ್ತಾ ಇರೋದು ಮತ್ತೊಂದು ಇಂಟ್ರೆಸ್ಟಿಂಗ್ ಸುದ್ದಿ. ಚಿತ್ರದ ಮೊದಲ ಪೋಸ್ಟರ್ ನಲ್ಲಿಯೇ ಅಧಿಕ ಪ್ರಸಂಗಿ ತನ್ನ ಝಲಕ್ ತೋರಿಸಿದ್ದಾನೆ. ಹುಡುಗಿಯೊಬ್ಬಳು ತನ್ನ ಹುಡುಗನಿಗೆ ಸಿಗರೇಟ್ ಹಚ್ಚುವ ಪೋಸ್ಟರ್ ಸ್ಯಾಂಡಲ್ವುಡ್ನಲ್ಲಿ ಸಖತ್ ಕ್ರೇಜ್ ಹುಟ್ಟಿಸಿದೆ. ಸಾಕಷ್ಟು ಕಿರುಚಿತ್ರಗಳನ್ನು ನಿರ್ದೇಶನ ಮಾಡಿ ತನ್ನ ಕ್ರಿಯೇಟಿವಿಟಿಯನ್ನು ಗಾಂಧಿನಗರಕ್ಕೆ ಪ್ರದರ್ಶಿಸಿದ್ದ ಯುವ ನಿರ್ದೇಶಕ ರಾಕಿ ಸೋಮ್ಲಿ ಈಗ ಅಧಿಕ ಪ್ರಸಂಗಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಮೊದಲ ಚಿತ್ರವಾದರೂ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡೆ ಫೀಲ್ಡ್ಗೆ ಇಳಿದಿದ್ದಾರೆ. ಸಿನಿಮಾ ಅಂದ್ರೆ ಕೇವಲ ಶೋಕಿ ಅಲ್ಲ, ಇದರಲ್ಲಿ ಪರಿಶ್ರಮ ಪಟ್ಟರೆ ಬದುಕು ಕಟ್ಟಿಕೊಳ್ಳ ಬೇಕೆನ್ನುವುದು ರಾಕಿ ಸೋಮ್ಲಿ ಅವರ ಜೀವನದ ಕನಸು. ಈಗ ಆ ಕನಸಿಗೆ ಚಾಲನೆ ದೊರೆತಿದೆ.ಇನ್ನೇನು ಸದ್ಯದಲ್ಲೇ ಅಧಿಕ ಪ್ರಸಂಗಿ ಸಿನಿಮಾ ಸೆಟ್ಟೇರಲಿದೆ. ಚಿತ್ರದ ನಾಯಕನಾಗಿ ಸುಕೇತ್ ಕಾಣಿಸಿಕೊಳ್ಳಲಿದ್ದಾರೆ. ಸುಕೇತ್ ಗೆ ನಟನೆ ಹೊಸತೇನಲ್ಲ. ರಂಗಾಯಣದ ನಾಟಕಗಳಲ್ಲಿ ಅಭಿನಯಿಸುತ್ತಾ ತಮ್ಮ ಒಳಗಿರುವ ಪ್ರತಿಭೆಯನ್ನು ಈಗಾಗಲೇ ಹೊರಹಾಕಿದ್ದಾರೆ. ಈಗ ಅಧಿಕ ಪ್ರಸಂಗಿ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸುಕೇತ್ ಗೆ ಜೋಡಿಯಾಗಿ ತಾನ್ವಿ ರೆಡ್ಡಿ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ. ಮೂಲತಃ ಡ್ಯಾನ್ಸರ್ ಆಗಿರುವ ತಾನ್ವಿ ರೆಡ್ಡಿ ಈಗ ಸಿನಿ ಜರ್ನಿ ಶುರು ಮಾಡಿದ್ದಾರೆ.ಪೋಸ್ಟರ್ನಲ್ಲಿ ಈ ಪೇರ್ ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದೆ.

ಉಳಿದಂತೆ ಪೋಷಕ ಪಾತ್ರಗಳಲ್ಲಿ ರಂಗಾಯಣ ರಘು, ವಿಜಯ್ ಚೆಂಡೂರು ಹಾಗೂ ಇತರೆ ಹಿರಿಯ ಕಲಾವಿದರು ಸಾಥ್ ನೀಡಲಿದ್ದಾರೆ. ಚಿತ್ರದ ಮತ್ತೊಂದು ಹೈಲೆಟ್ ಏನೆಂದರೆ, ಸುದ್ದಿ ವಾಹಿನಿಗಳಲ್ಲಿ ತನ್ನ ಆ್ಯಂಕರಿಂಗ್ ಸ್ಟೈಲ್ ನ ಮೂಲಕ ವೀಕ್ಷಕರ ಮನಗೆದ್ದಿದ್ದ ನಿರೂಪಕ ಮಂಜುನಾಥ್ ದಾವಣಗೆರೆ ಈ ಸಿನಿಮಾದ ಪ್ರಮುಖ ಪಾತ್ರ ಒಂದಕ್ಕೆ ಬಣ್ಣ ಹಚ್ಚಲಿದ್ದಾರೆ. ಅಧಿಕ ಪ್ರಸಂಗಿ ಚಿತ್ರ ಮಂಜುನಾಥ್ ಗೆ ಜಾಕ್ ಪಾಟ್ ಅಂತಾನೇ ಹೇಳಬಹುದು.ಯಾಕೆಂದರೆ ತಾನು ಅಭಿನಯಿಸಲಿರುವ ಮೊದಲ ಚಿತ್ರ ಕಾಲವನ್ನು ತಡೆಯೋರು ಯಾರೂ ಇಲ್ಲ ಬಿಡುಗಡೆ ಆಗುವುದಕ್ಕೂ ಮುಂಚೆಯೇ ಮತ್ತೊಮ್ಮೆ ಗಾಂಧಿನಗರದಿಂದ ಮಂಜು ಪ್ರತಿಭೆಗೆ ಬುಲಾವ್ ಬಂದಿದೆ. ಈ ಹಿಂದೆ ಕೂಡ ಕೆಲ ನಿರ್ದೇಶಕರು ಮಂಜುಗೆ ಸಿನಿಮಾಗಳಲ್ಲಿ ನಟಿಸುವಂತೆ ಒತ್ತಾಯಿಸಿದ್ದರು ಕೂಡ ಮಂಜು ಎಲ್ಲರಿಗೂ ಓಕೆ ಅಂದಿರಲಿಲ್ಲ. ಕಾರಣ ತಾನು ಸ್ಕ್ರೀನ್ ಮೇಲೆ ಪ್ರತಿಸಲ ಬಂದಾಗಲೂ ವಿಭಿನ್ನ ಪಾತ್ರಗಳಲ್ಲಿ ಬರಬೇಕೆಂಬ ಹಸಿವು ಮಂಜು ಅವರನ್ನು ಕಟ್ಟಿ ಹಾಕಿತ್ತು.

ಆದರೆ ಈಗೀಗ ಸೃಜನಾತ್ಮಕ ಪಾತ್ರಗಳು ಮಂಜೂ ಅವರನ್ನು ಹುಡುಕಿಕೊಂಡು ಬರುತ್ತಿದೆ. ಈ ಚಿತ್ರದಲ್ಲಿ ಕತೆಗೆ ಹೊಸ ಟ್ವಿಸ್ಟ್ ಕೊಡುವ ನಾಯಕನ ಸ್ನೇಹಿತನ ಪಾತ್ರದಲ್ಲಿ ಮಂಜು ಕಾಣಿಸಿಕೊಳ್ಳಲಿದ್ದಾರೆ. ಹಾಗೆ ಮಂಜುನಾಥ್ ಕೂಡ ಈ ಸಿನಿಮಾದ ಬಗ್ಗೆ ಬಹಳ ಎಕ್ಸೈಟ್ ಆಗಿದ್ದಾರೆ. ಇನ್ನೂ ಈ ಸದಭಿರುಚಿಯುಳ್ಳ ಕಥೆಗೆ ಆರ್. ಸಿದ್ದರಾಜು ಬಂಡವಾಳ ಹೂಡಲಿದ್ದಾರೆ.ಚಿತ್ರಕ್ಕೆ ಶಿವು ಪುತ್ರ ಕ್ಯಾಮೆರಾ ಕೈಚಳಕ ಇದ್ದು, ರೋಬೋಟ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಬೆಂಗಳೂರು ಸಕಲೇಶಪುರ ಹಾಗೂ ಹೊರ ದೇಶಗಳ ಸ್ಪೆಷಲ್ ಲೊಕೇಷನ್ಗಳಲ್ಲಿ ಶೂಟಿಂಗ್ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ.ಒಟ್ಟಿನಲ್ಲಿ ಅಧಿಕ ಪ್ರಸಂಗಿ ಪ್ರೇಕ್ಷಕನ ಮನಸ್ಸನ್ನ ಗೆಲ್ತಾನ.? ಇಲ್ಲವಾ..?ಅನ್ನೋದನ್ನ ತಿಳಿದುಕೊಳ್ಳುವುದಕ್ಕೆ ಚಿತ್ರ ರಿಲೀಸ್ ಆಗುವವರೆಗೂ ಸಿನಿಪ್ರಿಯರು ಕಾಯಬೇಕಾಗಿದೆ….!
ಶಶಿಕುಮಾರ್ ಶೆಟ್ಟಿ…

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ ಎಂದ ಸುಮಲತಾ, ನಿಮ್ಮ ಪ್ರಕಾರ ಯಾವ ಪಕ್ಷದನ್ನು ಸ್ಪರ್ದಿಸಬೇಕು..!

ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ …

Leave a Reply

Your email address will not be published. Required fields are marked *