Breaking News
Home / Featured / ಹೆಂಗಸರಿಗೊಂದು ಕಹಿ ಸುದ್ದಿ ಬ್ಯೂಟಿಪಾರ್ಲರ್ ಗೆ ಮೇಜರ್ ಸರ್ಜರಿ ಮಾಡಲಿರುವ ಕೇಂದ್ರ ಸರ್ಕಾರ ಯಾಕೆ ಗೊತ್ತಾ..!

ಹೆಂಗಸರಿಗೊಂದು ಕಹಿ ಸುದ್ದಿ ಬ್ಯೂಟಿಪಾರ್ಲರ್ ಗೆ ಮೇಜರ್ ಸರ್ಜರಿ ಮಾಡಲಿರುವ ಕೇಂದ್ರ ಸರ್ಕಾರ ಯಾಕೆ ಗೊತ್ತಾ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಫೇಶಿಯಲ್, ಥ್ರೆಡ್ಡಿಂಗ್, ಲೇಸರ್ ಟ್ರೀಟ್‍ಮೆಂಟ್, ಮೊಡವೆಗೆ ಬ್ಲೀಚಿಂಗ್ ಅಂತಾ ಬ್ಯೂಟಿಪಾರ್ಲರ್ ಗೆ ಹೋಗುವ ಲೇಡಿಸ್‍ಗಳಿಗೆ ಇದು ಬೇಸರದ ಸುದ್ದಿ. ಯಾಕೆಂದರೆ ಬ್ಯೂಟಿ ಪಾರ್ಲರ್ ಗಳಿಗೆ ಮೇಜರ್ ಸರ್ಜರಿ ಮಾಡೋದಕ್ಕೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ದೊಡ್ಡ ಬೆಳವಣಿಕೆ ನಡೆದಿದೆ.

ಮುಖದಲ್ಲಿ ಮೊಡವೆ ಇದ್ದರೆ, ಟ್ಯಾನ್ ಆಗಿದ್ದರೆ, ತಲೆಗೂದಲು ಉದುರುವಿಕೆಗೆ ಹೆಣ್ಮಕ್ಕಳು ನೇರವಾಗಿ ಬ್ಯೂಟಿ ಪಾರ್ಲರ್‌ಗೆ ಹೋಗುತ್ತಾರೆ. ಆದರೆ ಇನ್ನು ಮುಂದೆ ಹೀಗೆ ಡೈರೆಕ್ಟಾಗಿ ಹೋಗೋದಕ್ಕೆ ಸಾಧ್ಯವಿಲ್ಲ. ಏಕೆಂದರೆ ಪಾರ್ಲರ್ ಗಳಿಗೆ ಬ್ರೇಕ್ ಹಾಕಿ ಅಂತಾ ವೈದ್ಯರು ಫೈಟ್ ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯದ ಚರ್ಮದ ವೈದ್ಯರು ಎಲ್ಲಾ ಕೇಂದ್ರ ಆರೋಗ್ಯ ಇಲಾಖೆಗೆ ಬ್ಯೂಟಿ ಪಾರ್ಲರ್‌ಗೆ ಮೊದಲು ಕಾಯ್ದೆ ತನ್ನಿ ಎಂದು ಮನವಿ ಮಾಡಿದ್ದಾರೆ.

ಸದ್ಯದಲ್ಲಿಯೇ ರಾಜ್ಯದಲ್ಲಿ ಬ್ಯೂಟಿಪಾರ್ಲರ್ ಗಳಿಗೆ ಕಡಿವಾಣ ಬೀಳುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಮಡಿಕೇರಿಯಲ್ಲಿ ಬ್ಯೂಟೀಷನ್ ಎಡವಟ್ಟಿನಿಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು, ರಾಜ್ಯದ ಚರ್ಮರೋಗ ತಜ್ಞರ ತಂಡ ಕೇಂದ್ರ ಆರೋಗ್ಯ ಇಲಾಖೆಗೆ ದೂರು ನೀಡಿದೆ. ಬ್ಯೂಟೀಷನ್‍ಗಳು ವೈದ್ಯರಾಗುತ್ತಿದ್ದಾರೆ. ಅವರಿಗೆ ಯಾವುದೇ ಕಾನೂನು ಇಲ್ಲ. ಪಾರ್ಲರ್ ಗಳಲ್ಲಿ ಲೇಸರ್ ಟ್ರೀಟ್‍ಮೆಂಟ್ ಸೇರಿದಂತೆ, ಚರ್ಮರೋಗಕ್ಕೆ ಅವರೇ ಕ್ರೀಮ್ ಗಳನ್ನು ನೀಡುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು ಅಂತಾ ವೈದ್ಯರೆಲ್ಲ ದೂರು ಕೊಂಡೊಯ್ದಿದ್ದಾರೆ

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಶತ್ರುಭಾದೆ ನಿವಾರಣೆಗೆ ಭಾನುವಾರ ಸೂರ್ಯ ದೇವನ ನೆನೆದು ಹೀಗೆ ಮಾಡಿ..!

ವ್ಯವಹಾರಿಕ ಜೀವನದಲ್ಲಿ ಮನುಷ್ಯನಿಗೆ ಶತ್ರುಗಳು ಇರುವುದು ಸರ್ವೇ ಸಾಮಾನ್ಯ ನಿಮ್ಮ ಏಳಿಗೆಯನ್ನ ಅವರು ಸಹಿಸುವುದಿಲ್ಲ ನಿಮ್ಮ ಯಲ್ಲ ಚಲನ ವಲನಗಳನ್ನ …

Leave a Reply

Your email address will not be published. Required fields are marked *