ನಿಮ್ಮ ಮನೆಯಲ್ಲಿಯೇ ರುಚಿ ರುಚಿ ರವೇ ಟೋಸ್ಟ್ ಮಾಡುವ ಸಿಂಪಲ್ ವಿಧಾನ ಹೇಗೆ ಅನ್ನೋದು ಇಲ್ಲಿದೆ ನೋಡಿ.
ಬೇಕಾಗುವ ಪದಾರ್ಥಗಳು.
ರವೆ1 ಬಟ್ಟಲು ಮೊಸರು, ಅರ್ಧ ಬಟ್ಟಲು ಉಪ್ಪು ರುಚಿಗೆ ತಕ್ಕಷ್ಟು,ಈರುಳ್ಳಿ ಸಣ್ಣಗೆ ಹೆಚ್ಚಿದ್ದು ಒಂದು ಚಿಕ್ಕ ಬಟ್ಟಲು ಟೊಮೆಟೋ ಸಣ್ಣಗೆ ಹೆಚ್ಚಿದ್ದು ಒಂದು ಚಿಕ್ಕ ಬಟ್ಟಲು,ಕ್ಯಾಪ್ಸಿಕಂ,ಸಣ್ಣಗೆ ಹೆಚ್ಚಿದ್ದು ಒಂದು ಚಿಕ್ಕ ಬಟ್ಟಲು ಹಸಿಮೆಣಸಿನ ಕಾಯಿ 2-3 ಸಣ್ಣಗೆ ಹೆಚ್ಚಿದ್ದು ಕ್ಯಾರೆಟ್- ಸಣ್ಣಗೆ ಹೆಚ್ಚಿದ್ದು ಒಂದು ಚಿಕ್ಕ ಬಟ್ಟಲು ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ ಬ್ರೆಡ್ – 2-3 ಬೆಣ್ಣೆ – ಸ್ವಲ್ಪ.
ಮಾಡುವ ವಿಧಾನ.
ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ರವೆ ಹಾಗೂ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿ ಕಲಸಿಕೊಳ್ಳಬೇಕು.
ನಂತರ ಇದಕ್ಕೆ ಈರುಳ್ಳಿ, ಟೊಮೆಟೋ, ಕ್ಯಾಪ್ಸಿಕಂ, ಕ್ಯಾರೆಟ್, ಕೊಬ್ಬಂಬರಿ ಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಂಡು 10-15 ನಿಮಿಷ ನೆನೆಯಲು ಬಿಡಬೇಕು.
ನಂತರ ಬ್ರೆಡ್ ಗಳ ಒಂದು ಬಂದಿಗೆ ಗ್ರೀನ್ ಚಟ್ನಿಯನ್ನು ಹಾಕಿ ಅದರ, ಮೇಲೆ ರವೆ ಮಸಾಲೆಯನ್ನು ಹಾಕಬೇಕು.
ಒಲೆಯ ಮೇಲೆ ತವ ಇಟ್ಟು, ಅದು ಕಾದ ನಂತರ ಮಸಾಲೆಯುಕ್ತ ಬ್ರೆಡ್ ಗಳನ್ನು ಹಾಕಿ ಕೆಂಪಗೆ ಸುಡಬೇಕು, ಮತ್ತೊಂದು ಬದಿಗೆ ಬೆಣ್ಣೆ ಹಾಕಿ ಕೆಂಪಗೆ ಸುಟ್ಟರೆ ರುಚಿಕರವಾದ ಬ್ರೆಡ್ ಟೋಸ್ಟ್ ಸವಿಯಲು ಸಿದ್ಧ.