Breaking News
Home / Featured / ರಕ್ತಹೀನತೆ ನಿವಾರಿಸುವ ಏಲಕ್ಕಿ ಇನ್ನು ಹಲವು ರೋಗಗಳನ್ನು ಹೋಗಲಾಡಿಸುತ್ತೆ..!

ರಕ್ತಹೀನತೆ ನಿವಾರಿಸುವ ಏಲಕ್ಕಿ ಇನ್ನು ಹಲವು ರೋಗಗಳನ್ನು ಹೋಗಲಾಡಿಸುತ್ತೆ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಏಲಕ್ಕಿ ಪುಡಿಗೆ ಜೇನುತುಪ್ಪವನ್ನು ಸೇರಿಸಿ ಸೇವಿಸಿದರೆ ಬಾಯಿ ಹುಣ್ಣು ಗುಣವಾಗುತ್ತದೆ.ಉರಿ ಮೂತ್ರವಿದ್ದಲ್ಲಿ ಏಲಕ್ಕಿ ಪುಡಿಯ ಜೊತೆ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ಸೇವಿಸಿದರೆ ಉರಿ ಮೂತ್ರ ಕಡಿಮೆಯಾಗುತ್ತದೆ.

ಏಲಕ್ಕಿಯ ಎಲೆ ಮತ್ತು ಬೇರಿನ ಕಷಾಯವನ್ನು ಸೇವಿಸಿದರೆ ಭೇದಿ ನಿಲ್ಲುತ್ತದೆ.ಹೊಟ್ಟೆ ನೋವಿನಲ್ಲಿ ಏಲಕ್ಕಿ ಪುಡಿಯನ್ನು ಹಿಪ್ಪಲಿ ಬೇರಿನ ಪುಡಿ ಮತ್ತು ತುಪ್ಪದ ಜೊತೆ ಸೇವಿಸಿದರೆ ಹೊಟ್ಟೆ ನೋವು ನಿವಾರಣೆಯಾಗುತ್ತದೆ.

ಎರಡರಿಂದ ಮೂರು ಏಲಕ್ಕಿ ಹಾಕಿ ಮಾಡಿದ ಕಷಾಯಕ್ಕೆ 4ರಿಂದ 5 ಪುದೀನಾ ಎಲೆಯ ರಸ ಸೇರಿಸಿ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.

ರಕ್ತಹೀನತೆ ಇದ್ದಲ್ಲಿ, ಒಂದು ಚಿಟಿಕೆ ಏಲಕ್ಕಿ ಪುಡಿ ಮತ್ತು ಒಂದು ಚಮಚ ಅರಿಶಿನದ ಪುಡಿಯನ್ನು ಒಂದು ಲೋಟ ಹಾಲಿನೊಂದಿಗೆ ಸೇರಿಸಿ ರಾತ್ರಿ ಮಲಗುವ ಮುನ್ನ ಸೇವಿಸಿದರೆ ರಕ್ತ ಹೀನತೆ ನಿವಾರಣೆಯಾಗುತ್ತದೆ.

ನಿಯಮಿತವಾಗಿ ಏಲಕ್ಕಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ, ಜೀರ್ಣಶಕ್ತಿ ವೃದ್ಧಿಸುತ್ತದೆ.ವಾತ, ಪಿತ್ತ, ಕಫ್‌, ದಂತ ರೋಗ ಮತ್ತು ಬಾಯಿ ವಾಸನೆ ನಿವಾರಣೆಗೆ ಏಲಕ್ಕಿ ಉತ್ತಮ ಪರಿಹಾರ.

ಆ್ಯಸಿಡಿಟಿ ನಿವಾರಣೆಗೆ ಒಂದೆರಡು ಏಲಕ್ಕಿಯನ್ನು ಪುಡಿ ಮಾಡಿ ಬಿಸಿನೀರಿನಲ್ಲಿ ಹಾಕಿ ಕುದಿಸಿ ನಂತರ ಕುಡಿದರೆ ಆ್ಯಸಿಡಿಟಿ ನಿವಾರಣೆಯಾಗುತ್ತದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ದಕ್ಷಿಣ ಭಾರತದ ಮೊದಲ ಯುದ್ಧವಿಮಾನ ಮಹಿಳಾ ಪೈಲಟ್ ನಮ್ಮ ಕನ್ನಡ ಕುವರಿ ಚಿಕ್ಕಮಗಳೂರ ಹುಡುಗಿ..!

ಘಮಘಮಿಸುವ ಕಾಫಿಗೆ ಹೆಸರಾಗಿರುವ ಚಿಕ್ಕಮಗಳೂರಿನ ಹೆಮ್ಮೆಯ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಚಿಕ್ಕಮಗಳೂರಿನವರಾದ ಮೇಘನಾ ಶಾನಭೋಗ್ ಯುದ್ಧ ವಿಮಾನದ …

Leave a Reply

Your email address will not be published. Required fields are marked *