Breaking News
Home / Featured / ಬಾಯಿಯ ಆರೋಗ್ಯ,ರಕ್ತ ಶುದ್ದೀಕರಣ,ಕೂದಲು ಸಮಸ್ಯೆಗಳಿಗೆ ರಾಮಬಾಣ ಈ ಬೇವಿನ ಸೊಪ್ಪು..!

ಬಾಯಿಯ ಆರೋಗ್ಯ,ರಕ್ತ ಶುದ್ದೀಕರಣ,ಕೂದಲು ಸಮಸ್ಯೆಗಳಿಗೆ ರಾಮಬಾಣ ಈ ಬೇವಿನ ಸೊಪ್ಪು..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಕೂದಲು:
ತಲೆಹೊಟ್ಟು ಮತ್ತು ಶುಷ್ಕ ನೆತ್ತಿಗೆ ಸಹ ಬೇವಿನ ಸೊಪ್ಪನ್ನು ಬಳಸಬಹುದು. ವಾತಾವರಣದಲ್ಲಿ ಹವಾಮಾನ ಬದಲಾದರೆ ನಿಮ್ಮ ನೆತ್ತಿಯ ಪಿಎಚ್ ಏರುಪೇರಾಗಿ ನಿಮ್ಮ ತಲೆಕೂದಲು ಜಿಡ್ಡುಜಿಡ್ಡಾಗಿ ಹೊಟ್ಟು ಉತ್ಪತ್ತಿಯಾಗುತ್ತದೆ. ಆದರೆ ಬೇವಿನ ಎಲೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಅಂಶಗಳಿಂದ ಒಣ ನೆತ್ತಿ ಮತ್ತು ತಲೆಹೊಟ್ಟನ್ನು ನಿವಾರಿಸಬಹುದು. ತಲೆಕೂದಲು ಉದುರುವುದನ್ನು ಕೂಡ ನಿಯಮಿತವಾಗಿ ಹಚ್ಚುತ್ತಾ ಬಂದರೆ ತಡೆಯಬಹುದು.

ರಕ್ತ ಶುದ್ದೀಕರಣ:
ಮನುಷ್ಯನ ದೇಹ ಆರೋಗ್ಯದಿಂದ ಇರಬೇಕಾದರೆ ಜೀರ್ಣಕ್ರಿಯೆ ಉತ್ತಮವಾಗಿರಬೇಕು. ಯಾವುದೇ ರೋಗ ಬರುವ ಮೊದಲು ಅದನ್ನು ತಡೆಗಟ್ಟುವುದು ಮುಖ್ಯವಾಗುತ್ತದೆ. ಉತ್ತಮ ಆರೋಗ್ಯ ಜೀರ್ಣಕ್ರಿಯೆ ಉಂಟಾಗಲು ಬೇವಿನ ಸೊಪ್ಪು ತಿಂದರೆ ಒಳ್ಳೆಯದು. ಮಳೆಗಾಲದಲ್ಲಿ ಆರೋಗ್ಯಕರ ಆಹಾರ ತಿನ್ನುವುದು ಮುಖ್ಯವಾಗುತ್ತದೆ.

ಬಾಯಿಯ ಆರೋಗ್ಯ:
ಬೇವಿನ ಎಲೆಯನ್ನು ಹಲವು ಟೂತ್ ಪೇಸ್ಟ್ ಗಳಲ್ಲಿ ಮತ್ತು ಮೌತ್ ವಾಶ್ ಗಳಲ್ಲಿ ಬಳಸಲಾಗುತ್ತದೆ ಹಲ್ಲು ನೋವಿಗೆ ಕೂಡ ಉಪಶಮನಕಾರಿ. ಮಳೆಗಾಲದಲ್ಲಿ ಬಾಯಿನೋವಿನ ಸಮಸ್ಯೆ ಅಧಿಕವಾಗಿರುತ್ತದೆ. ಬಾಯಿಯಲ್ಲಿರುವ ನಂಜನ್ನು ನಿವಾರಿಸುತ್ತದೆ. ಒಸಡುಗಳ ಉರಿಯೂತವನ್ನು ನಿಗ್ರಹಿಸುವ ಶಕ್ತಿ ಹೊಂದಿದೆ.ಇದು ಬ್ಯಾಕ್ಟೀರಿಯದ ಗುಣಲಕ್ಷಣಗಳೊಂದಿಗೆ ನೈಸರ್ಗಿಕ ಆಂಟಿಮೈಕ್ರೊಬಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿರುತ್ತದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಫಲ ಹೇಗಿದೆ ನೋಡಿ ಶುಭ ಅಶುಭ ಫಲಗಳ ಲೆಕ್ಕಾಚಾರ ಪಂಡಿತ್ ಸುದರ್ಶನ್ ಭಟ್ ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ …

Leave a Reply

Your email address will not be published. Required fields are marked *