Breaking News
Home / Featured / ದೇಶ ಸೇವೆ ಕೆಲಸದಲ್ಲಿದ್ದೇನೆ ಸರ್ ಅಂತಾ ಪರಿಪರಿಯಾಗಿ ಬೇಡಿಕೊಂಡರೂ ದೇಶ ಕಾಯೋ ಸೈನಿಕನನ್ನು ಬೆತ್ತಲೆ ಮಾಡಿ ಥಳಿಸಿದ ಸಿಪಿಐ ಅಧಿಕಾರಿ..!

ದೇಶ ಸೇವೆ ಕೆಲಸದಲ್ಲಿದ್ದೇನೆ ಸರ್ ಅಂತಾ ಪರಿಪರಿಯಾಗಿ ಬೇಡಿಕೊಂಡರೂ ದೇಶ ಕಾಯೋ ಸೈನಿಕನನ್ನು ಬೆತ್ತಲೆ ಮಾಡಿ ಥಳಿಸಿದ ಸಿಪಿಐ ಅಧಿಕಾರಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಿಪಿಐ ಅಧಿಕಾರಿಯೊಬ್ಬರು ದೇಶ ಕಾಯೋ ಸೈನಿಕನನ್ನು ಬೆತ್ತಲೆ ಮಾಡಿ ಮನಬಂದಂತೆ ಥಳಿಸಿದ್ದಾರೆ. ಮನುಷತ್ವವನ್ನೇ ಮರೆತು ಮೃಗೀಯ ರೀತಿ ವರ್ತಿಸಿದ್ದಾರೆ. ಅಲ್ಲದೇ ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆದೊಯ್ದು ನಡೆದಾಡಲು ಆಗದಂತೆ ಥಳಿಸಿದ್ದಾರೆ.

ಹಾವೇರಿ ಜಿಲ್ಲೆ ಹಿರೇಕೆರೂರು ಠಾಣೆಯ ಸಿಪಿಐ ಸಂಗನಾಥ್ ಹಾಗೂ ಆತನ ಸಿಬ್ಬಂದಿ ಮೃಗೀಯ ವರ್ತನೆ ತೋರಿದ್ದಾರೆ. ಲೋಕೇಶ್ ಮುತ್ತಗಿ ದೇಶ ಕಾಯೋ ಯೋಧರಾಗಿದ್ದು, ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹೊಲಬಿಕೊಂಡ ಗ್ರಾಮದ ನಿವಾಸಿಯಾಗಿದ್ದಾರೆ. ಥ್ರೀ ಮಡ್ರಾಸ್ ಇನ್ ಪ್ಯಾಂಟ್ರಿ ರಿಜಮೆಂಟ್ ದೆಹಲಿಯಲ್ಲಿ ಗನ್ ಮ್ಯಾನ್ ಆಗಿ ದೇಶ ಕಾಯೋ ಕೆಲಸ ಮಾಡ್ತಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಲೋಕೇಶ್ ರಜೆ ಮೇಲೆ ಊರಿಗೆ ಬಂದಿದ್ದರು. ಆಗಸ್ಟ್ 4ರಂದು ಹಿರೇಕೆರೂರು ಪಟ್ಟಣದ ಅಂಗಡಿಯೊಂದರಲ್ಲಿ ಮಾಲೆ ತರಲು ಹೋಗಿದ್ದರು. ಆಗ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ್ದಾರೆ ಎನ್ನುವ ಆರೋಪದಡಿ ಲೋಕೇಶ್ ವಿರುದ್ಧ ದೂರು ದಾಖಲಾಗಿತ್ತು. ದೂರು ಏನೇ ಇರಲಿ ಆರೋಪಿ ಸ್ಥಾನದಲ್ಲಿರೋ ಲೋಕೇಶ್ ನನ್ನು ಹಿರೇಕೆರೂರು ಪೊಲೀಸರು ಬಂಧಿಸಿ, ಜೈಲಿಗೆ ಕಳಿಸಬಹುದಿತ್ತು. ಆದರೆ ಪೊಲೀಸ್ ಠಾಣೆಗೆ ಕರೆದೊಯ್ದು ಸಿಪಿಐ ಸಂಗನಾಥ್ ಮತ್ತು ಇಬ್ಬರು ಪೊಲೀಸ್ ಪೇದೆ ಸೇರಿಕೊಂಡು ಸೈನಿಕ ಲೋಕೇಶ್ ಅವರನ್ನು ಬೆತ್ತಲೆ ಮಾಡಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ಹಲ್ಲೆಯಿಂದಾಗಿ ಲೋಕೇಶ್ ಮೈಮೇಲೆ ಎಲ್ಲ ಬಾಸುಂಡೆಗಳು ಮೂಡಿದ್ದು, ರಕ್ತ ಹೆಪ್ಪುಗಟ್ಟುವಂತೆ ಥಳಿಸಿದ್ದಾರೆ. ನಂತರ ಲೋಕೇಶ್‍ರನ್ನು ಜೈಲಿಗೆ ಕಳುಹಿಸಿದ್ದಾರೆ. ಈಗ ಜಾಮೀನು ಪಡೆದುಕೊಂಡು ಬಂದಿರೋ ಲೋಕೇಶ್, ಸಿಪಿಐ ಸಂಗನಾಥ್ ಮತ್ತು ಅವರ ಸಿಬ್ಬಂದಿ ಮಾಡಿರೋ ಮೃಗೀಯ ವರ್ತನೆಯಿಂದ ಪಡಬಾರದ ಕಷ್ಟಪಡುತ್ತಿದ್ದಾರೆ. ದೇಶ ಸೇವೆ ಕೆಲಸದಲ್ಲಿದ್ದೇನೆ ಸರ್ ಅಂತಾ ಲೋಕೇಶ್ ಪರಿಪರಿಯಾಗಿ ಬೇಡಿಕೊಂಡರೂ ಸಿಪಿಐ ಮತ್ತವರ ಸಿಬ್ಬಂದಿ ಮನುಷ್ಯತ್ವವನ್ನು ಮರೆತು ಥಳಿಸಿದ್ದಾರೆ ಎನ್ನಲಾಗಿದೆ.
ಕೃಪೆ:ಪಬ್ಲಿಕ್ ಟಿವಿ

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ದಕ್ಷಿಣ ಭಾರತದ ಮೊದಲ ಯುದ್ಧವಿಮಾನ ಮಹಿಳಾ ಪೈಲಟ್ ನಮ್ಮ ಕನ್ನಡ ಕುವರಿ ಚಿಕ್ಕಮಗಳೂರ ಹುಡುಗಿ..!

ಘಮಘಮಿಸುವ ಕಾಫಿಗೆ ಹೆಸರಾಗಿರುವ ಚಿಕ್ಕಮಗಳೂರಿನ ಹೆಮ್ಮೆಯ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಚಿಕ್ಕಮಗಳೂರಿನವರಾದ ಮೇಘನಾ ಶಾನಭೋಗ್ ಯುದ್ಧ ವಿಮಾನದ …

Leave a Reply

Your email address will not be published. Required fields are marked *