Breaking News
Home / Featured / ಶನಿ ಕಾಟ ಕಡಿಮೆ ಮಾಡಲು ಮತ್ತು ಈ ದೋಷವಿದ್ದವರು ಈ ರೀತಿ ಮಾಡಬೇಕು..!

ಶನಿ ಕಾಟ ಕಡಿಮೆ ಮಾಡಲು ಮತ್ತು ಈ ದೋಷವಿದ್ದವರು ಈ ರೀತಿ ಮಾಡಬೇಕು..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಯಾವುದೇ ರಾಶಿಗೆ ಶನಿಗ್ರಹವು ಗೋಚರದಲ್ಲಿ ರಾಶಿಯಿಂದ 12ನೇ ಮನೆಯಲ್ಲಿ ಹಾಗೂ ಅದೇ ರಾಶಿಯ ಜನ್ಮಸ್ಥಾನದಲ್ಲಿ ರಾಶಿಯಿಂದ 2ನೇ ಮನೆಯಲ್ಲಿ ಸಂಚರಿಸುವುದಕ್ಕೆ ಪ್ರತಿ ರಾಶಿಯಲ್ಲಿ ಎರಡು ವರ್ಷ ಆರು ತಿಂಗಳು ತನ್ನ ಅವಧಿಯನ್ನು ಪೂರ್ಣಗೊಳಿಸುತ್ತಾನೆ.

ಒಟ್ಟು ಮೂರು ರಾಶಿಯಲ್ಲಿ ಈ ಮೇಲಿನ ಸ್ಥಾನಗಳಲ್ಲಿ ಬಂದಾಗ ಮಾತ್ರ ಸಾಡೇಸಾತ್‌ ಅಥವಾ ಶನಿಕಾಟ ಎನ್ನುವರು. ಜೀವಿತಾವಧಿಯಲ್ಲಿ ಮೂರು ಅಥವಾ ನಾಲ್ಕು ಬಾರಿ ಸಾಡೇಸಾತ್‌ ಕಾಟವಿರುತ್ತದೆ.

ಮೊದಲನೆಯ ಸಲ ಪ್ರವೇಶಿಸಿದಾಗ ಜೀವನವನ್ನು ಅಸ್ತವ್ಯಸ್ತಗೊಳಿಸುವನು.ಎರಡನೆಯ ಸಲ ಪ್ರವೇಶಿಸಿದಾಗಲೂ ಜೀವನವನ್ನು ಅಸ್ತವ್ಯಸ್ತಗೊಳಿಸುವನು.ಮೂರನೇ ಸಲ ಪ್ರವೇಶಿಸಿದಾಗ ಭಯಂಕರ ತೊಂದರೆ, ಕಷ್ಟ, ನಷ್ಟಕ್ಕೆ ಗುರಿ ಮಾಡುವನು.

ನಾಲ್ಕನೇ ಸಲ ಪ್ರವೇಶಿಸಿದರೆ ಬದುಕಿದ್ದೂ ಸತ್ತ ಹಾಗೆ ಮಾಡುವನು. ಆದರೆ ಕೊನೆಯಲ್ಲಿ ಬಿಟ್ಟು ಹೋಗುವಾಗ ಶನಿ ದೇವನು ರಾಜಯೋಗ ಕೊಟ್ಟು ಹೋಗುವನು. ಎಲ್ಲರಿಗೂ ಸಾಡೇಸಾತ್‌ ಅಷ್ಟಾಗಿ ಕಾಡುವುದಿಲ್ಲ. ಕೆಲವರು ತೊಂದರೆ ಅನುಭವಿಸುತ್ತಾರೆ. ಪೂರ್ವಜನ್ಮದಲ್ಲಿ ಮಾಡಿದ ಪಾಪ ಪುಣ್ಯಕ್ಕೆ ತಕ್ಕಂತೆ ಫಲ ಪಡೆಯುತ್ತಾರೆ.

ಈ ದೋಷವಿದ್ದವರು ಈ ರೀತಿ ಮಾಡಬೇಕು.
ಪ್ರತಿ ಶನಿವಾರ ಕೋತಿಗಳಿಗೆ ಬಾಳೆಹಣ್ಣು ಹಾಗೂ ನಾಯಿಗಳಿಗೆ ಸಿಹಿ ಪದಾರ್ಥ ನೀಡಬೇಕು.ಆಲದ ಮರದ ಬುಡದಲ್ಲಿ ಎಳ್ಳೆಣ್ಣೆ ದೀಪವನ್ನು ಪ್ರತಿ ಶನಿವಾರ ಹಚ್ಚಬೇಕು.

ಶ್ರೀ ಆಂಜನೇಯ ದೇವಸ್ಥಾನಕ್ಕೆ ಅಥವಾ ಶನಿ ದೇವರ ದೇವಸ್ಥಾನಕ್ಕೆ ಪ್ರತಿ ಶನಿವಾರ ಕರಿ ಎಳ್ಳು, ಕರಿ ದಾರ ಹಾಗೂ ಕರಿ ಬಟ್ಟೆಯಿಂದ ಎಳ್ಳುಗಂಟು ಅಥವಾ ಎಳ್ಳು ದೀಪ ಮಾಡಿ ಎಳ್ಳೆಣ್ಣೆಯಲ್ಲಿ ಅದ್ದಿ ಮೂರು ದೀಪ ಹಚ್ಚಬೇಕು.

ಸಾಡೇಸಾತ್‌ ಶುರುವಾದಾಗ ಯಾವುದಾದರೂ ಒಂದು ಅಮಾವಾಸ್ಯೆಯಂದು ಕರಿ ಎಳ್ಳು, ಕರಿ ಬಟ್ಟೆ, ಕಬ್ಬಿಣದ ಬಾಣಲೆ, ಎಳ್ಳೆಣ್ಣೆ, ಬಾಳೆಹಣ್ಣು, ವೀಳ್ಯದೆಲೆ, ಅಡಕೆ ದಕ್ಷಿಣೆ ಸಮೇತ ಪೂಜಿಸಿ ದಾನ ಕೊಡಬೇಕು. ಆಂಜನೇಯ ಸ್ತೋತ್ರ ಹಾಗೂ ಶನಿ ದೇವರ ಶ್ಲೋಕವನ್ನು ತಪ್ಪದೇ ಶನಿವಾರ ಇಪ್ಪತ್ತೊಂದು ಸಲ ಪಠಿಸಬೇಕು.ಸ್ನಾನದ ನೀರಿಗೆ ಎಳ್ಳು ಬೆರೆಸಿ ಸ್ನಾನ ಮಾಡಬೇಕು. ಸಾಡೇಸಾತ್‌ ನಡೆಯುವಾಗ ವೀರ ಬಾಹುಕ ಯಂತ್ರವನ್ನು ಪೂಜಿಸಿದಲ್ಲಿ ಶನಿ ದೇವರ ಕಾಟ ಆದಷ್ಟು ಕಡಿಮೆ ಪ್ರಮಾಣದಲ್ಲಿ ಆಗುತ್ತದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ದಕ್ಷಿಣ ಭಾರತದ ಮೊದಲ ಯುದ್ಧವಿಮಾನ ಮಹಿಳಾ ಪೈಲಟ್ ನಮ್ಮ ಕನ್ನಡ ಕುವರಿ ಚಿಕ್ಕಮಗಳೂರ ಹುಡುಗಿ..!

ಘಮಘಮಿಸುವ ಕಾಫಿಗೆ ಹೆಸರಾಗಿರುವ ಚಿಕ್ಕಮಗಳೂರಿನ ಹೆಮ್ಮೆಯ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಚಿಕ್ಕಮಗಳೂರಿನವರಾದ ಮೇಘನಾ ಶಾನಭೋಗ್ ಯುದ್ಧ ವಿಮಾನದ …

Leave a Reply

Your email address will not be published. Required fields are marked *