Breaking News
Home / Featured / ಉತ್ತರ ಕರ್ನಾಟಕ ಪ್ರತ್ಯೇಕ ಹೋರಾಟ ವಿಚಾರ: ದೇವೇಗೌಡರಿಗೆ ಬಿಎಸ್ ವೈ ಕೇಳಿದ ಮೂರು ಪ್ರಶ್ನೆಗಳು ಏನು ಗೊತ್ತಾ..!

ಉತ್ತರ ಕರ್ನಾಟಕ ಪ್ರತ್ಯೇಕ ಹೋರಾಟ ವಿಚಾರ: ದೇವೇಗೌಡರಿಗೆ ಬಿಎಸ್ ವೈ ಕೇಳಿದ ಮೂರು ಪ್ರಶ್ನೆಗಳು ಏನು ಗೊತ್ತಾ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಮಾಡುತ್ತಿರುವ ಅವಾಂತರಗಳಿಗೆ ದೇವೇಗೌಡರೇ ಕಾರಣ, ಹೀಗಾಗಿ ಅವರೇ ನನ್ನ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಮಾತನಾಡಿದ ಯಡಿಯೂರಪ್ಪ, ಉತ್ತರ ಕರ್ನಾಟಕ ವಿಚಾರದಲ್ಲಿ ಬೆಂಕಿ ಹಚ್ಚಿದ್ದು ಸಿಎಂ ಕುಮಾರ ಸ್ವಾಮಿ, ಆದರೆ ನನ್ನನ್ನು ಸಿಕ್ಕಿಸಲಾಗುತ್ತಿದೆ. ಹೀಗಾಗಿ ನಾನು ಮಾಜಿ ಪ್ರಧಾನಿ ಎಚ್ .ಡಿ ದೇವೇಗೌಡರಿಗೆ ಮೂರು ಪ್ರಶ್ನೆಗಳನ್ನು ಕೇಳುತ್ತೇನೆ, ಅದಕ್ಕೆ ದೇವೇಗೌಡರು ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ದೇವೇಗೌಡರಿಗೆ ಬಿ,ಎಸ್ ಯಡಿಯೂರಪ್ಪ ಮೂರುಪ್ರಶ್ನೆಗಳು
1 ಉತ್ತರ ಕರ್ನಾಟಕಕ್ಕೇ ಲಿಂಗಾಯತ ಸಿಎಂಗಳ ಕೊಡುಗೆ ಎನು ಎಂದು ಕೇಳಿದ್ದು ಯಾರು ?
2 ಉತ್ತರ ಕರ್ನಾಟಕದಿಂದ ರಾಜ್ಯಕ್ಕೆ ಏನು ಕೊಡುಗೆ ಏನು ಎಂದು ಹುಬ್ಬಳ್ಳಿಯಲ್ಲಿ ಪ್ರಶ್ನಿಸಿದವರು ಯಾರು?
3. ಚನ್ನಪಟ್ಟಣದಲ್ಲಿ ಜಾತಿ ಆಧಾರದಲ್ಲಿ ಮತ ಕೇಳಿದ್ದು ಯಾರು?

ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ, ಈ ಎಲ್ಲಾ ಪ್ರಶ್ನೆಗಳನ್ನು ಹಾಕಿದವರು ಸಿಎಂ ಕುಮಾರ ಸ್ವಾಮಿ, ಹೀಗಾಗಿ ಅವರ ತಂದೆ ಎಚ್,ಡಿ ದೇವೇಗೌಡ ನನ್ನ ಈ ಎಲ್ಲಾ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕು ಎಂದು ತಿಳಿಸಿದ್ದಾರೆ.
ಸಂಗ್ರಹ

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ದಕ್ಷಿಣ ಭಾರತದ ಮೊದಲ ಯುದ್ಧವಿಮಾನ ಮಹಿಳಾ ಪೈಲಟ್ ನಮ್ಮ ಕನ್ನಡ ಕುವರಿ ಚಿಕ್ಕಮಗಳೂರ ಹುಡುಗಿ..!

ಘಮಘಮಿಸುವ ಕಾಫಿಗೆ ಹೆಸರಾಗಿರುವ ಚಿಕ್ಕಮಗಳೂರಿನ ಹೆಮ್ಮೆಯ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಚಿಕ್ಕಮಗಳೂರಿನವರಾದ ಮೇಘನಾ ಶಾನಭೋಗ್ ಯುದ್ಧ ವಿಮಾನದ …

Leave a Reply

Your email address will not be published. Required fields are marked *