Breaking News
Home / Featured / ಗೋ ಮೂತ್ರದಿಂದ ಕ್ಯಾನ್ಸರ್ ಗುಣಪಡಿಸಬಹುದು ಹೇಗೆ ಗೊತ್ತಾ..!

ಗೋ ಮೂತ್ರದಿಂದ ಕ್ಯಾನ್ಸರ್ ಗುಣಪಡಿಸಬಹುದು ಹೇಗೆ ಗೊತ್ತಾ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಜುನಾಘಡ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ವಿಜ್ಞಾನಿಗಳು ಒಂದು ವರ್ಷದಿಂದ ಪ್ರಯೋಗ ನಡೆಸಿ ಈಗ ಯಶಸ್ವಿಯಾಗಿದ್ದಾರೆ. ಸಂಶೋಧನೆಯ ಮೊದಲ ಪ್ರಯತ್ನದಲ್ಲಿಯೇ ಗೋವಿನ ಮೂತ್ರವನ್ನು ಬಳಸಿ ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲಬಹುದು ಎಂಬ ಪ್ರಯತ್ನದಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ.

ಗೋ ಮೂತ್ರದಿಂದ ಬಾಯಿ, ಗರ್ಭಕೋಶ, ಶ್ವಾಸಕೋಶ, ಮೂತ್ರಪಿಂಡ, ಚರ್ಮ, ಸ್ತನ ಕ್ಯಾನ್ಸರ್ ಗಳನ್ನು ಕೂಡ ಗುಣಪಡಿಸಬಹುದೆಂದು ತಿಳಿಸಿದ್ದಾರೆ.ಸಹಾಯಕ ಪ್ರಾಧ್ಯಾಪಕರಾದ ಶಾರದಾ ಭಟ್, ರುಕಮ್ ಸಿನ್ಹ ತೋಮರ್, ಹಾಗೂ ಸಂಶೋಧನಾ ವಿದ್ಯಾರ್ಥಿ ಕವಿತಾ ಜೋಶಿ ಯವರನ್ನು ಒಳಗೊಡ ಈ ಸಂಶೋಧನಾ ತಂಡ, ಒಂದು ವರ್ಷದ ಪ್ರಯೋಗದ ಫಲವಾಗಿ ಕ್ಯಾನ್ಸರ್ ನ್ನು ಗೋ ಮೂತ್ರದಿಂದ ಗುಣಪಡಿಸಬಹುದು ಎಂದು ಸಾಬೀತುಪಡಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾರದಾ ಭಟ್ ಬಾಟಲಿಯಲ್ಲಿ ಸಂಗ್ರಹಿಸಲಾದ ಕ್ಯಾನ್ಸರ್ ಕೋಶಗಳ ಮೇಲೆ ನಾವು ನೇರ ಪ್ರಯೋಗ ಮಾಡಿದ್ದೇವೆ. ನಿರ್ಧಿಷ್ಟ ಸಂಖ್ಯೆಯ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಬೇಕಾದ ಗೋ ಮೂತ್ರದ ಪ್ರಮಾಣವನ್ನು ಎಷ್ಟಿರಬೇಕೆಂಬುದನ್ನು ಅಪಾಯಕಾರಿಯಾದ ಸಂಶೋಧನೆಯ ಮೂಲಕ ಕಂಡುಕೊಂಡಿದ್ದೇವೆ ಎಂದು ಹೇಳಿದರು.

ಮುಂದಿನ ಹಂತದಲ್ಲಿ ಇದನ್ನು ಇಲಿಗಳ ಮೇಲೆ ಪ್ರಯೋಗ ಮಾಡಲಾಗುತ್ತದೆ. ಅದು ಯಶಸ್ಸು ಕಂಡನಂತರ ವಿವಿಧ ರೀತಿಯ ಕ್ಯಾನ್ಸರ್ ವಿಧಗಳಿಗೆ ಮಾತ್ರೆಗಳನ್ನು ತಯಾರಿಸಲಾಗುವುದು ಎಂದರು.ಈ ಕುರಿತು ಮಾತನಾಡಿದ ತೋಮರ್, ಕ್ಯಾನ್ಸರ್ ಚಿಕಿತ್ಸೆಗೆ ನೀಡುವ ಕೆಮೊಥೆರಪಿಯಿಂದ ಶರೀರದಲ್ಲಿನ ಕ್ಯಾನ್ಸರ್ಜೀ ವಕೋಶಗಳೊಂದಿಗೆ ಇನ್ನುಳಿದ ಜೀವಕೋಶಗಳನ್ನೂ ಸಹ ಅದು ಕೊಲ್ಲುತ್ತದೆ. ಆದರೆ ಗೋ ಮೂತ್ರ ಕೇವಲ ಕ್ಯಾನ್ಸರ್ ಪೀಡಿತ ಕೋಶಗಳನ್ನು ಮಾತ್ರ ಕೊಲ್ಲುತ್ತದೆ ಎಂದು ಹೇಳಿದರು.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಫಲ ಹೇಗಿದೆ ನೋಡಿ ಶುಭ ಅಶುಭ ಫಲಗಳ ಲೆಕ್ಕಾಚಾರ ಪಂಡಿತ್ ಸುದರ್ಶನ್ ಭಟ್ ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ …

Leave a Reply

Your email address will not be published. Required fields are marked *