Breaking News
Home / Featured / ಸೀತಾಫಲದಲ್ಲಿರುವ ಲಾಭಗಳು ನಿಮಗೆ ತಿಳಿದರೆ ತಿನ್ನದೇ ಇರೋಕೆ ಸಾಧ್ಯನೇ ಇಲ್ಲ ಬಿಡಿ..!

ಸೀತಾಫಲದಲ್ಲಿರುವ ಲಾಭಗಳು ನಿಮಗೆ ತಿಳಿದರೆ ತಿನ್ನದೇ ಇರೋಕೆ ಸಾಧ್ಯನೇ ಇಲ್ಲ ಬಿಡಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಸೀತಾಫಲ ತಿನ್ನಲು ಹೋದರೆ ಬರಿ ಬೀಜಗಳೆ ಹೆಚ್ಚು ಎಷ್ಟೇ ತಿಂದರು ಕೂಡ ನಿಧಾನವೇ ಆಗುವುದಿಲ್ಲ . ಕೆಲವರು ಹೆಚ್ಚು ಬೀಜಗಳಿರುವುದರಿಂದ ಇವುಗಳನ್ನು ತಿನ್ನುವುದಕ್ಕೆ ಹಿಂದೇಟು ಹಾಕುತ್ತಾರೆ.ಅದರೆ ಈ ಹಣ್ಣುನ್ನು ಸೇವನೆ ಮಾಡುವುದರಿಂದ ಏನೆಲ್ಲಾ ಉಪಯೋಗವಿದೆ ಎಂದು ತಿಳಿದರೆ ಎಲ್ಲರೂ ಇದನ್ನು ಬಯಸುತ್ತಾರೆ. ಆಗಾದರೆ ಆ ಉಪಯೋಗಗಳು ಏನು ಗೋತ್ತ.

ತಿನ್ನಲು ರುಚಿಕರವಾಗಿದ್ದು ಇದರ ಬೀಜ ಮತ್ತು ಎಲೆಗಳಿಂದ ಇಡಿದು ಹಣ್ಣಿನ ವರೆಗೂ ಔಷಧಕ್ಕೆ ಬೇಕಾದವುಗಳಾಗಿರುತ್ತವೆ.
ಪ್ರತಿದಿನ ಊಟದ ನಂತರ ಈ ಹಣ್ಣನ್ನು ಸೇವಿಸು =ವುದರಿಂದ ಜೀರ್ಣಶಕ್ತಿ ಹೆಚ್ಚುವುದು ಜತೆಗೆ ಸೀತಾಫಲಗಳಲ್ಲಿ ರಿಬೊಫ್ಲಾವಿನ್ ಮತ್ತು ವಿಟಮಿನ್ ‘ಸಿ’ ಅಂಶ ಹೇರಳವಾಗಿದೆ. ಇವುಗಳು ಕಣ್ಣಿಗೆ ಒಳ್ಳೆಯದು. ದೃಷ್ಟಿ ಸಾಮರ್ಥ್ಯ ಹೆಚ್ಚಿಸಲು ನೆರವಾಗುತ್ತವೆ.

ಪ್ರತಿದಿನ ಊಟದ ನಂತರ ಈ ಹಣ್ಣನ್ನು ಸೇವಿಸು ವುದರಿಂದ ಜೀರ್ಣಶಕ್ತಿ ಹೆಚ್ಚುವುದು.ಸೀತಾಫಲಗಳಲ್ಲಿ ರಿಬೊಫ್ಲಾವಿನ್ ಮತ್ತು ವಿಟಮಿನ್ ‘ಸಿ’ ಅಂಶ ಹೇರಳವಾಗಿದೆ. ಇವುಗಳು ಕಣ್ಣಿಗೆ ಒಳ್ಳೆಯದು. ದೃಷ್ಟಿ ಸಾಮರ್ಥ್ಯ ಹೆಚ್ಚಿಸಲು ನೆರವಾಗುತ್ತವೆ.

ಹಿಮೋಗ್ಲೋಬಿನ್ ಕಣಗಳು ರಕ್ತದಲ್ಲಿ ಕಮ್ಮಿ ಇದ್ದರೆ ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ. ಸೀತಾಫಲ ಹಣ್ಣನ್ನು ಸೇವಿ ಸುತ್ತಾ ಇದ್ದರೆ ಹಿಮೋಗ್ಲೋಬಿನ್‌ ಪ್ರಮಾಣ ಹೆಚ್ಚುತ್ತದೆ.ತಲೆ ತುಂಬಾ ಹೇನು, ಸೀರುಗಳಿವೆ? ಹಾಗಿದ್ದರೆ ತಲೆ ಸ್ನಾನ ಮಾಡುವ ಅರ್ಧ ಗಂಟೆ ಮೊದಲು ಸೀತಾಫಲ ಬೀಜದ ಪುಡಿಯನ್ನು ನೀರಿನಲ್ಲಿ ಕಲಸಿ ಕೂದಲ ಬುಡಕ್ಕೆ ಹಚ್ಚಿ ನೋಡಿ. ಒಣಗಿದ ಎಲೆಗಳ ಚೂರ್ಣ ಚರ್ಮರೋಗಕ್ಕೆ ದಿವ್ಯ ಔಷಧ.

ತೂಕ ಹೆಚ್ಚಿಸಿಕೊಳ್ಳಲು ಪರದಾಡುವವರಿಗೆ ಈ ಹಣ್ಣು ಉತ್ತಮ ಮಾರ್ಗ. ಇದರ ತಿರುಳಿನ ಜೊತೆಗೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ ಪ್ರತಿನಿತ್ಯ ಸೇವಿಸುತ್ತಾ ಬಂದರೆ ತೂಕ ಕ್ರಮೇಣ ಹೆಚ್ಚುತ್ತದೆ.ಮ್ಯಾಗ್ನೀಷಿಯಂಗೆ ಹೃದ್ರೋಗಗಳು ಬಾರದಂತೆ ಕಾಪಾಡುವ ಶಕ್ತಿ ಇದೆ. ಇದು ಸೀತಾಫಲದಲ್ಲಿ ಹೆಚ್ಚಾಗಿದೆ. ಇವು ಒತ್ತಡಕ್ಕೆ ಒಳಗಾದಾಗ, ಸೋಂಕು ರೋಗಗಳಿಂದ ರಕ್ಷಣೆ ಪಡೆಯಲು ನೆರವಾಗುತ್ತವೆ.

ಕುರುವಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೀತಾಫಲ ಗಿಡದ ಎಲೆ ಹೇಳಿ ಮಾಡಿಸಿದ ಮದ್ದು. ಈ ಎಲೆಗಳನ್ನು ಜಜ್ಜಿ ಕುರುವಿನ ಮೇಲೆ ಕಟ್ಟಬೇಕು. ಇದರಿಂದ ಕುರು ಬೇಗ ಗುಣವಾಗುತ್ತದೆ. ಹಣ್ಣಿನ ತಿರುಳನ್ನು ಉಪ್ಪಿನ ಜತೆ ಬೆರೆಸಿ ಲೇಪಿಸಿದರೆ ಕುರುಗಳು ಹಣ್ಣಾಗಿ ಬೇಗ ಒಡೆಯುತ್ತವೆ.

ಗರ್ಭಪಾತದ ಅಪಾಯವನ್ನು ತಡೆಯುವ ಶಕ್ತಿ ಈ ಹಣ್ಣಿಗಿದೆ. ಗರ್ಭಿಣಿಯರು ಇದನ್ನು ಸೇವಿಸುವುದರಿಂದ ಗರ್ಭದಲ್ಲಿರುವ ಶಿಶುವಿನ ಮೆದುಳು ವಿಕಾಸವಾಗುತ್ತದೆ. ಅಷ್ಟೇ ಅಲ್ಲದೇ ಹೆರಿಗೆ ನಂತರ ಅಮ್ಮಂದಿರ ತೂಕ ಕಡಿಮೆಯಾಗುತ್ತದೆ. ಆದ್ದರಿಂದ ಆ ವೇಳೆಯಲ್ಲಿ ಇದರ ಸೇವನೆ ಒಳ್ಳೆಯದು.ಹೊಟ್ಟೆ ಉರಿ ಮತ್ತು ವಿಪರೀತ ದಾಹವಾಗುತ್ತಿದ್ದರೆ ಸೀತಾಫಲ ಹಣ್ಣಿನ ರಸಕ್ಕೆ ಸಕ್ಕರೆ ಸೇರಿಸಿ ಸೇವಿಸಬೇಕು. ಈ ರಸವನ್ನು ಹೊಟ್ಟೆ ಮೇಲೆ ಲೇಪನ ಮಾಡಿದರೂ ದಾಹ ನಿವಾರಣೆಯಾಗುತ್ತದೆ.

ಸೀತಾಫಲ ಗಿಡದ ತೊಗಟೆಯ ಕಷಾಯವನ್ನು ನಿಯಮಿತ ವಾಗಿ ಸೇವಿಸಿದರೆ ಭೇದಿ, ಆಮಶಂಕೆ ಗುಣವಾಗುತ್ತದೆ. ಸೀತಾಫಲದಲ್ಲಿ ಅನ್ನಾಂಗ ಅಂಶ (ಸಿ, ಬಿ6, ಮ್ಯಾಗ್ನಿಷಿಯಂ, ಪೊಟಾಷಿಯಂ, ಅಲ್ಪ ಪ್ರಮಾಣದಲ್ಲಿ ಬಿ2, ಶರ್ಕರ ಪಿಷ್ಠ) ಹೇರಳವಾಗಿದೆ. ಇವು ದೇಹಕ್ಕೆ ಪುಷ್ಟಿ ನೀಡುತ್ತವೆ.

ಕ್ಯಾನ್ಸರ್ ಪ್ರತಿರೋಧಕ ಗುಣ ಸೀತಾಫಲಕ್ಕಿದೆ.
ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣಕ್ಕೆ ಬರಲು ಸೀತಾಫಲ ಒಳ್ಳೆಯ ಮದ್ದು. ಇದರಲ್ಲಿ ನಿಯಾಸಿನ್ ಮತ್ತು ಡಯಟೆರಿ ಫೈಬರ್ ಅಧಿಕ ಪ್ರಮಾಣದಲ್ಲಿ ಇರುವ ಕಾರಣ, ಇದು ಕೊಲೆಸ್ಟ್ರಾಲ್ ಮಟ್ಟ ತಗ್ಗಿಸಲು ನೆರವಾಗುತ್ತದೆ.ಸೀತಾಫಲವನ್ನು ಮಕ್ಕಳಿಗೆ ಜ್ಯೂಸ್‌ ಮಾಡಿ ಕುಡಿಸುವುದು ಬಲು ಉತ್ತಮ. ಹಾಲಿನ ಜೊತೆ ಜ್ಯೂಸ್‌ ಮಾಡುವ ಬದಲು, ಒಂದು ಕೋಳಿ ಮೊಟ್ಟೆ ಹಾಗೂ ಜೇನುತುಪ್ಪದ ಜೊತೆ ಕೊಟ್ಟರೆ ಮಕ್ಕಳಲ್ಲಿ ಶಕ್ತಿ ವೃದ್ಧಿಸುತ್ತದೆ.

ಸೀತಾಫಲದಲ್ಲಿನ ಬೀಜ ತೆಗೆದು ಮಿಕ್ಸಿಯಲ್ಲಿ ರುಬ್ಬಿ ಕೊಳ್ಳಬೇಕು. ಒಂದು ಪ್ಯಾನ್‌ನಲ್ಲಿ ಹಾಲು ಕಾಯಿಸಿ ಅದಕ್ಕೆ ಮೊಟ್ಟೆ ಹಾಕಿ ಕದಡಬೇಕು. ಇದಕ್ಕೆ ಜೇನು ತುಪ್ಪ ಹಾಗೂ ರುಬ್ಬಿಕೊಂಡ ಸೀತಾಫಲದ ತಿರುಳನ್ನು ಸೇರಿಸಿ ಚಿಕ್ಕ ಉರಿಯಲ್ಲಿ ಬಿಸಿ ಮಾಡಬೇಕು. ಈ ಸಮಯದಲ್ಲಿ ತಿರುವುತ್ತಾ ಇರಬೇಕು. ಅದನ್ನು ತಣ್ಣಗೆ ಮಾಡಿ ಮಕ್ಕಳಿಗೆ ಕೊಟ್ಟರೆ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಮೊಟ್ಟೆ ತಿನ್ನದವರು ಅದನ್ನು ಇಲ್ಲದೆಯೂ ಮಾಡಬಹುದು.

ಸೀತಾಫಲವು ಬಾಯಿಯ ಆರೋಗ್ಯಕ್ಕೂ ಒಳ್ಳೆಯದು. ಈ ಹಣ್ಣಿನ ತಿರುಳು ಹಲ್ಲು ಮತ್ತು ದವಡೆ ನೋವಿನ ವಿರುದ್ಧ ಸಮರ್ಥವಾಗಿ ಹೋರಾಡುತ್ತದೆ.ಇದನ್ನು ಸೆವನೆಯಿಂದಾಗಿ ಪಿತ ಮತ್ತು ವಾಂತಿಯು ಕಡಿಮೆಯಾಗುತ್ತದೆ. ಸೀತಾಫಲ ಹಣ್ಣಿನಿನ ಬೀಜವನ್ನು ತಣ್ಣಿರನ್ನು ಹಾಕಿ ಚೆನ್ನಾಗಿ ಹೆರೆದು ದೇಹದ ಗಾಯವಾದ ಜಾಗಕ್ಕೆ ಕಟ್ಟುವುದರಿಂದಾಗಿ ಬೇಗಾನೆ ಗಾಯ ವಾಸಿಯಾಗುತ್ತದೆ.

ಅಕ್ಕಿ ತೊಳೆದ ನೀರಿಗೆ ಈ ಸೀತಾಫಲ ಹಣ್ಣಿನಿನ ತೊಗಟೆಯನ್ನು ಹಾಕಿ ಬೇಯಿಸಿ ಕುಡಿದರೆ ಮಲಬದ್ದತೆ ನಿವಾರಣೆ ಆಗುವುದು.
ಇದರ ಬೀಜದ ಪುಡಿಯನ್ನು ಮೇಕೆ ಹಾಲಿಗೆ ಹಾಕಿಕೊಂಡು ತಲೆ ಮಸಾಜ್ ಮಾಡಿಕೊಂಡರೆ ಕೂದಲು ಉದುರುವುದು ನಿಲ್ಲುತ್ತದೆ.
ದೇಹದ ತೂಕವನ್ನು ಹೆಚ್ಚಾಗ ಬೇಕು ಎಂದರೆ ಸೀತಾಫಲ ಹಣ್ಣನ್ನು ದಿನನಿತ್ಯ ತಿನ್ನಬೇಕು.

ನಿಯಮಿತವಾಗಿ ಈ ಹಣ್ಣನ್ನು ಸೇವಿಸುವುದರಿಂದ ಹೃದಯದ ರಕ್ತ ಸಂಚಲನ ಸರಿಯಾಗಿ ಆಗುತ್ತದೆ ಮತ್ತು ಆರೋಗ್ಯ ದಿಂದ ಇರುತ್ತದೆ.ಮುಟ್ಟಿನ ಸಮಸ್ಯೆಗಳು ಕಂಡುಬಂದಲ್ಲಿ ಇದರ ಎಲೆಯ ಕಷಾಯವನ್ನು ಸೇವಿಸಿದರೆ ಇಂತ ಸಮಯದಲ್ಲಿ ಮುಟ್ಟು ಸರಿಯಾಗಿ ಆಗುತ್ತದೆ.ಹೀಗೆ ಸೀತಾಫಲ ಹಣ್ಣಿನಿಂದ ಹಲವು ಉಪಯೋಗಗಳನ್ನು ನಾವು ಕಾಣಬಹುದು.

ಶಶಿಕಲಾ
ಚಿತ್ರದುರ್ಗ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಫಲ ಹೇಗಿದೆ ನೋಡಿ ಶುಭ ಅಶುಭ ಫಲಗಳ ಲೆಕ್ಕಾಚಾರ ಪಂಡಿತ್ ಸುದರ್ಶನ್ ಭಟ್ ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ …

Leave a Reply

Your email address will not be published. Required fields are marked *