Breaking News
Home / Featured / ಶಿವನಿಗೆ ಇಷ್ಟವಾದ ಬಿಲ್ವ ಪತ್ರೆಯಿಂದ ಪಡೆಯಿರಿ ಹತ್ತಾರು ಆರೋಗ್ಯ ಲಾಭಗಳು..!

ಶಿವನಿಗೆ ಇಷ್ಟವಾದ ಬಿಲ್ವ ಪತ್ರೆಯಿಂದ ಪಡೆಯಿರಿ ಹತ್ತಾರು ಆರೋಗ್ಯ ಲಾಭಗಳು..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಬೇರು ಮತ್ತು ತೊಗಟೆಯ ಕಷಾಯವನ್ನು ತಯಾರಿಸಿಕೊಂಡು ಕುಡಿಯುವುದರಿಂದ ಮನಸ್ಸಿನ ಉದ್ವೇಗ ಕಡಿಮೆಯಾಗುವುದಲ್ಲದೆ ಹೃದಯಕ್ಕೆ ಹಿತವೆನ್ನಿಸುವುದು.

ಎಲೆಯನ್ನು ಅರೆದು ನೋವುವಿರುವ ಜಾಗಕ್ಕೆ ಕಟ್ಟಿದರೆ ನೋವು ಶಮನವಾಗುವುದು. ಎಲೆಯ ರಸಕ್ಕೆ ಕರಿಮೆಣಸು ಸೇರಿಸಿ ಕಮಾಲೆ ರೋಗದಲ್ಲಿ ಕೊಡುವರು.

ಬಿಲ್ವ ಪತ್ರೆಯ ರಸವನ್ನು ಖಾಲಿ ಹೊಟ್ಟೆಗೆ ದಿನಕ್ಕೆರಡು ಬಾರಿ ಸೇವಿಸುವುದರಿಂದ ಬೊಜ್ಜು ಕಡಿಮೆಯಾಗುವುದು.

ಬಿಲ್ವದ ಉತ್ತಮ ಔಷಧಿಗುಣಗಳನ್ನು ಅರಿತ ಆಧುನಿಕ ವೈಧ್ಯಕೀಯ ವಿಜ್ಞಾನ ಅದರ ಒಳಹೊಕ್ಕು ವಿಜ್ಞಾನದ ಅಳೆತೆಗೋಲಲ್ಲಿ ಔಷಧಿ ಕರ್ಮಗಳನ್ನು ವಿಸ್ತಾರವಾಗಿ ಅರಿತುಕೊಳ್ಳಲು ಬಿಲ್ವದ ಬಗ್ಗೆ ಪ್ರಯೋಗಿಕ ಸಂಶೋಧನೆಗಳನ್ನು ನಡೆಸಿದೆ. ಈ ಕೆಳಗಂಡ ವಿಚಾರಗಳು ಸಂಶೋಧನೆಗಳಿಂದ ದೃಢಪಟ್ಟಿವೆ.

ಬಿಲ್ವದ ಎಲೆ ಮತ್ತು ಹಣ್ಣಿನ ತಿರುಳು ಮತ್ತು ಬೀಜ ಯಕೃತ್ತನ್ನು ರಕ್ಷಿಸುತ್ತವೆ.

ಎಲೆಗಳಲ್ಲಿ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮತ್ತು ಹಣ್ಣಿನ ತಿರುಳಿನಲ್ಲಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಗುಣವಿದೆ.

ಎಲೆಗಳಲ್ಲಿ ನೋವು ನಿವಾರಕ, ನಂಜು ನಿವಾರಕ, ಮತ್ತು ಜ್ವರಹರ ಮತ್ತು ಕ್ಯಾನ್ಸರ್‌ ಗುಣಪಡಿಸುವ ಗುಣಗಳಿವೆ. ಎಲೆ ಹೈಪರ್‌ಥೈರಾಡಿಸಮ್‌ನಲ್ಲಿ ಪರಿಣಾಮಕಾರಿಯಾದ ಔಷಧಿಯಾಗಿದೆ.

ಕ್ಯಾನ್ಸರ್‌ಗೆ ರೇಡಿಯೇಷನ್‌ನಿಂದ ಚಿಕಿತ್ಸೆ ನೀಡುವಾಗ ಹಲವಾರು ದುಷ್ಪಾರಿಣಾಗಳು ಉಂಟಾಗುತ್ತವೆ. ಇದರಿಂದ ಆರೋಗ್ಯವಂತ ಜೀವಕೋಶಗಳೂ ನಾಶವಾಗುತ್ತವೆ. ಬಿಲ್ವ ರೇಡಿಯೋ ಪ್ರೋಟೆಕ್ಟೀವ್‌ ಆಗಿ ಕೆಲಸ ಮಾಡುವುದು. ರೇಡಿಯೇಷನ್‌ ನಂತರದ ಅಡ್ಡಪರಿಣಾಮಗಳಿಗೆ ಬಿಲ್ವ ಆಶಾಕಿರಣವಾಗಿದೆ.

ಬಿಲ್ವಪತ್ರೆಯಕಾಯಿ ಮತ್ತು ಅದರ ಬೀಜವನ್ನು ಬಳಸುವುದರಿಂದ ಹೊಟ್ಟೆಯಲ್ಲಿ ಅಲ್ಸರ್‌ ಗುಣವಾಗುತ್ತದೆ.

ಶಿವನಿಗೆ ಇಷ್ಟವಾದ ಬಿಲ್ವ ಮಾನವ ಆರೋಗ್ಯ ರಕ್ಷಿಸುವ ಬಹು ಉಪಯೋಗಿ ವೃಕ್ಷ ವಾಗಿದೆ. ಬನ್ನಿ ಈ ಶಿವರಾತ್ರಿಯಂದು ಬಿಲ್ವವನ್ನು ಪೂಜಿಸಿ ಅದನ್ನು ಶಿವನಿಗೆ ಅರ್ಪಿಸಿ ದೇಹಾರೋಗ್ಯದೊಂದಿಗೆ ಮಾನಸಿಕ ನೆಮ್ಮದಿ ಪಡೆಯುವ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಶತ್ರುಭಾದೆ ನಿವಾರಣೆಗೆ ಭಾನುವಾರ ಸೂರ್ಯ ದೇವನ ನೆನೆದು ಹೀಗೆ ಮಾಡಿ..!

ವ್ಯವಹಾರಿಕ ಜೀವನದಲ್ಲಿ ಮನುಷ್ಯನಿಗೆ ಶತ್ರುಗಳು ಇರುವುದು ಸರ್ವೇ ಸಾಮಾನ್ಯ ನಿಮ್ಮ ಏಳಿಗೆಯನ್ನ ಅವರು ಸಹಿಸುವುದಿಲ್ಲ ನಿಮ್ಮ ಯಲ್ಲ ಚಲನ ವಲನಗಳನ್ನ …

Leave a Reply

Your email address will not be published. Required fields are marked *