Breaking News
Home / Featured / ಮೈಸೂರು ಮಹಾರಾಜರು ಸಹ ಇಲ್ಲಿ ಫಲ ಬೇಡಲು ಬಂದ ಇತಿಹಾಸವಿರುವ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರೆ ಸಂತಾನ ಭಾಗ್ಯ ಲಭಿಸಲಿದೆ ಈ ದೇವರ ವಿಶೇಷತೆ ಏನು ಗೊತ್ತಾ…?

ಮೈಸೂರು ಮಹಾರಾಜರು ಸಹ ಇಲ್ಲಿ ಫಲ ಬೇಡಲು ಬಂದ ಇತಿಹಾಸವಿರುವ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರೆ ಸಂತಾನ ಭಾಗ್ಯ ಲಭಿಸಲಿದೆ ಈ ದೇವರ ವಿಶೇಷತೆ ಏನು ಗೊತ್ತಾ…?

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಶ್ರೀ ಕ್ಷೇತ್ರ ರಾಮಾಯಣ ಕಾಲದಲ್ಲಿ ವಾಲ್ಮೀಕಿ ನಿರ್ಮಿಸಿದ ಇತಿಹಾಸ ಪ್ರಸಿದ್ಧ ಹಾಲುರಾಮೇಶ್ವರವಿದು. ಇಲ್ಲಿ ಉದ್ಬವ ಗಂಗೆ ಪವಾಡ .ಈ ಬಾವಿಯೊಳಗಿಂದ ನಿಮ್ಮ ಇಷ್ಟಾನುಸಾರ ಸಿದ್ಧಿ ಪ್ರಸಾದ ಮೇಲೆದ್ದು ಬರುವುದು, ಮೈಸೂರು ಮಹಾರಾಜರು ಸಹ ಇಲ್ಲಿ ಫಲ ಬೇಡಲು ಬಂದ ಇತಿಹಾಸವಿದೆ. ಇದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಿಂದ 11 ಕಿಲೋ ಮೀಟರ್ ದೂರದಲ್ಲಿದೆ .

ಶ್ರೀ ಕ್ಷೇತ್ರ ಹಾಲು ರಾಮೇಶ್ವರ ದಕ್ಷಿಣ ಕಾಶಿ ಎಂದೇ ಖ್ಯಾತವಾದ ಪವಿತ್ರ ಪುಣ್ಯಕ್ಷೇತ್ರ.ನೀರಗುಡ್ಡ, ಕೋಟೆಕಲ್ಲು ಗುಡ್ಡ, ದೊಡ್ಡರಸಿಗುಡ್ಡ, ತಿರುಮಲದೇವರ ಗುಡ್ಡ ಮತ್ತು ಹಾಲುರಾಮೇಶ್ವರ ಗುಡ್ಡಗಳನ್ನು ಹೊಂದಿರುವ ಹೊಸದುರ್ಗದ ಬೆಟ್ಟಶ್ರೇಣಿಗಳಲ್ಲಿ 1,181 ಮೀಟರ್ ಎತ್ತರವಿರುವ ಹಾಲುರಾಮೇಶ್ವರ.

ಇಲ್ಲಿ ಬಾಳೆಹಣ್ಣು, ತೆಂಗಿನಕಾಯಿ ಹೋಳು ಇತ್ಯಾದಿ ವಸ್ತುಗಳು ನೀರಿನ ಮೇಲೆ ತೇಲುವುದೇ ಒಂದು ಪವಾಡ. ತೇಲಲೇಬೇಕಾದ ಎಲೆ, ಕರಗುವ ಕುಂಕುಮ, ಹರಿಶಿನ ಕರಗದೆ ತೇಲುವುದು ಮತ್ತೊಂದು ವಿಶೇಷ. ಭಕ್ತರು ಪೂಜಿಸಿ ನೀಡುವ ಬಾಗಿನ ಮತ್ತೊಬ್ಬರಿಗೆ ಪ್ರಸಾದ ರೂಪದಲ್ಲಿ ದೊರಕುತ್ತದೆ. ಬರವಿರಲಿ, ಮಳೆಯಿರಲಿ ಎಲ್ಲ ಕಾಲದಲ್ಲೂ ಈ ಕೊಳದಲ್ಲಿ ನೀರು ಸದಾ ಇರುತ್ತದೆ. ಈ ಕೊಳದ ಆಳ, ಪವಾಡ ಎಲ್ಲವೂ ನಿಗೂಢ. ನೂರಾರು ವರ್ಷಗಳಿಂದ ಈ ಕೊಳ ಒಮ್ಮೆಯೂ ಬತ್ತಿಲ್ಲ, ಬರಿದಾಗಿಲ್ಲ.

ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ಇಲ್ಲಿ ಬಂದು ಗಂಗೆಯನ್ನು ಪೂಜಿಸಿ ಸಂತಾನ ಕರುಣಿಸುವಂತೆ ಕೋರಿದಾಗ ಅವರಿಗೆ ಬೆಳ್ಳಿ ತೊಟ್ಟಿಲು ಬಂತಂತೆ. ಆ ನಂತರವೇ ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಜನಿಸಿದರು ಎಂದು ಅಧಿಕೃತ ಉಲ್ಲೇಖವಿದೆ ಎಂದು ಸಂಜೀವಮೂರ್ತಿ ಹೇಳುತ್ತಾರೆ.

ಇಲ್ಲಿಗೆ ಬರುವ ಭಕ್ತರಿಗೆ ದೇವರನ್ನು ಮುಟ್ಟಿ ಪೂಜಿಸುವ ಅವಕಾಶವುಂಟು. ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಎಲ್ಲರೂ ಭಕ್ತಿಯಿಂದ ದೇವರನ್ನು ಪೂಜಿಸುತ್ತಾರೆ. ಕ್ಷೇತ್ರದಲ್ಲಿ ಹಾಲುರಾಮೇಶ್ವರ ದೇವಾಲಯ, ಗಂಗಾಮಾತೆ ದೇವಾಲಯ,ಶ್ರೀಸೀತಾರಾಮರ ಗುಡಿ, ಶ್ರೀಮೂಲ ಗಂಗಾ ಗುಡಿ, ಶ್ರೀ ಪಂಚಲಿಂಗೇಶ್ವರ ಗುಡಿ, ಬೇಡರ ಕಣ್ಣಪ್ಪ ದೇವಾಲಯ ಹಾಗೂ ಪುರಾತನ ಅಶ್ವತ್ಥಕಟ್ಟೆಯಿದೆ.

ಹುತ್ತವಿದ್ದ ಜಾಗದಲ್ಲಿ ಹಾಸುಗಲ್ಲು ಹಾಕಿ ಅದರ ಮೇಲೆ ನಂದಿಯ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಈ ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬರೂ ಮೊದಲು ಮೂಲಗಂಗಾದೇವಿ ದರ್ಶನ ಮಾಡಿ ನಂತರ ರಾಮೇಶ್ವರನ ದರ್ಶನ ಮಾಡುತ್ತಾರೆ. ಇಲ್ಲಿ ಕ್ಷೇತ್ರದಲ್ಲಿ ಪ್ರತೀತಿ ಕೂಡ.

ಇಲ್ಲಿಗೆ ಬರುವ ಭಕ್ತರಿಗೆ ದೇವರನ್ನು ಮುಟ್ಟಿ ಪೂಜಿಸುವ ಅವಕಾಶವುಂಟು. ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಎಲ್ಲರೂ ಭಕ್ತಿಯಿಂದ ದೇವರನ್ನು ಪೂಜಿಸುತ್ತಾರೆ. ಕ್ಷೇತ್ರದಲ್ಲಿ ಹಾಲುರಾಮೇಶ್ವರ ದೇವಾಲಯ, ಗಂಗಾಮಾತೆ ದೇವಾಲಯ,ಶ್ರೀಸೀತಾರಾಮರ ಗುಡಿ, ಶ್ರೀಮೂಲ ಗಂಗಾ ಗುಡಿ, ಶ್ರೀ ಪಂಚಲಿಂಗೇಶ್ವರ ಗುಡಿ, ಇದೆ.

ಸಂಗ್ರಹ ಮಾಹಿತಿ

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಭವಿಷ್ಯ ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ …

Leave a Reply

Your email address will not be published. Required fields are marked *