Breaking News
Home / Featured / ಜಿಯೋ ಮತ್ತೊಂದು ಹೊಸ ಫೋನ್ ಬಿಡುಗಡೆ 501 ರೂ ಇದರ ವಿಶೇಷತೆ ಏನು..!

ಜಿಯೋ ಮತ್ತೊಂದು ಹೊಸ ಫೋನ್ ಬಿಡುಗಡೆ 501 ರೂ ಇದರ ವಿಶೇಷತೆ ಏನು..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಈ ಬಾರಿ ಜಿಯೋ ಫೋನ್- 2 ನಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಫೇಸ್ಬುಕ್, ವಾಟ್ಸಪ್ ಮತ್ತು ಯೂಟ್ಯೂಬ್ ನಂತಹ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಗಳನ್ನು ಒಳಗೊಂಡಿದೆ.

ಆಗಸ್ಟ್ 15 ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಇದರ ಪ್ರಾರಂಭಿಕ ಬೆಲೆ 2,999 ರೂಪಾಯಿಗಳಾಗಿದೆ. ಇದಲ್ಲದೆ ಕಂಪನಿಯು ತನ್ನ ಹಳೆಯ ಜಿಯೋ ಫೋನ್ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಅವರಿಗಾಗಿಯೇ ನೂತನ ಕೊಡುಗೆಯನ್ನು ನೀಡಿದೆ. ಈ ಕೊಡುಗೆಯಲ್ಲಿ ಗ್ರಾಹಕರು ತಮ್ಮ ಬಳಿ ಇರುವ ಹಳೆಯ ಜಿಯೋ ಫೋನನ್ನು ಕಂಪೆನಿಗೆ ಹಿಂದುರಿಗಿಸಿ 501 ರೂಪಾಯಿಯನ್ನು ಮಾತ್ರ ನೀಡಿ ಹೊಸ ಜಿಯೋ ಫೋನ್-2 ಖರೀದಿಸಬಹುದಾಗಿದೆ.

ಜಿಯೋ ಫೋನ್-2ರ ವಿಶೇಷತೆ
ಕ್ವರ್ಟಿ ಕೀ ಪ್ಯಾಡ್ ನ 2.4 ಇಂಚ್ ಸ್ಕೀನ್ ಡಿಸ್ಪ್ಲೇ (240X340 ಪಿಕ್ಸೆಲ್)
ವಾಯ್ಸ್ ಕಮ್ಯಾಂಡ್,ಫೇಸ್ಬುಕ್, ವಾಟ್ಸಪ್, ಯುಟ್ಯೂಬ್, ವೈ-ಫೈ ಮತ್ತು ಜಿಪಿಎಸ್ ಸೌಲಭ್ಯ.

512 MB RAM 4 ಜಿಬಿ ಆಂತರಿಕ ಮೆಮೊರಿ ಹೊಂದಿದೆ. ಮೆಮೊರಿ ಕಾರ್ಡ್ ಮೂಲಕ 128 ಜಿಬಿವರೆಗೆ ವಿಸ್ತರಿಸಬಹುದು.
ಹಿಂದುಗಡೆ 2 ಮೆಗಾಪಿಕ್ಸೆಲ್ ಕ್ಯಾಮೆರಾ ಮುಂದುಗಡೆ 0.3 ಮೆಗಾಪಿಕ್ಸೆಲ್(ವಿಜಿಎ) ಕ್ಯಾಮೆರಾ.
ಫೋನ್ ಡ್ಯೂಯಲ್ ಸಿಮ್ ವೈಶಿಷ್ಟ್ಯವನ್ನು ಹಾಗೂ ಲೌಡ್ ಮೆನೋ ಸ್ಪೀಕರ್
2000 ಎಂಎಎಚ್ ಬ್ಯಾಟರಿ ಸಾಮರ್ಥ್ಯ.

1.2 GHz ಡ್ಯುಯಲ್ ಕೋರ್ ಎಸ್‍ಪಿಆರ್ಡಿ ಪ್ರೋಸೆಸರ್ ಹೊಂದಿರುವ ಈ ಫೋನ್ ಮಲಿ 400 ಗ್ರಾಫಿಕ್ಸ್ ಪ್ರೋಸೆಸರ್ ಇದೆ. 2000 ಎಂಎಎಚ್ ಲಿಪೋ ಬ್ಯಾಟರಿ ಹೊಂದಿರುವ ಈ ಫೋನ್ 4ಜಿಬಿ ಆಂತರಿಕ ಮೆಮೊರಿ, 128 ಜಿಬಿವರೆಗೆ ಮೆಮೊರಿ ವಿಸ್ತರಿಸುವ ಸಾಮರ್ಥ್ಯ, ಹಿಂದುಗಡೆ 2 ಎಂಪಿ ಕ್ಯಾಮೆರಾ, ಮುಂದುಗಡೆ ವಿಜಿಎ ಕ್ಯಾಮೆರಾ ಇದ್ದು, ವಿಡಿಯೋ ರೆಕಾರ್ಡಿಂಗ್ ನೀಡಿತ್ತು.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಅಪಾರ ಸಂಪತ್ತು ಹೊಂದಿರುವ ಹೊಸದುರ್ಗದ ‘ದಶರಥ ರಾಮೇಶ್ವರ ವಜ್ರ’ ದೇವಸ್ಥಾನ ಮಕ್ಕಳು ಆಗದೆ ಇರುವ ದಂಪತಿಗೆ ಇದು ವಿಶೇಷ ದೇವಸ್ಥಾನ..!

ಹೊಸದುರ್ಗ ಪಟ್ಟಣದಿಂದ ಸುಮಾರು 30ಕಿ.ಮೀ ದೂರದಲ್ಲಿರುವ ಗುಡ್ಡದ ನೇರಲಕೆರೆಯ ‘ದಶರಥ ರಾಮೇಶ್ವರ ವಜ್ರ’ ಅತ್ಯಂತ ಪ್ರಾಚೀನ ಕ್ಷೇತ್ರ. ವೃದ್ಧ ತಂದೆತಾಯಿಗಳನ್ನು …

Leave a Reply

Your email address will not be published. Required fields are marked *