Breaking News
Home / Featured / ಹಾವು ಕಚ್ಚಿದ ವ್ಯಕ್ತಿಯ ಪ್ರಾಣ ಉಳಿಸಬೇಕು ಅಂದ್ರೆ ಈ ಮಾಹಿತಿಯನ್ನು ತಿಳುಕೊಳ್ಳಬೇಕು..!

ಹಾವು ಕಚ್ಚಿದ ವ್ಯಕ್ತಿಯ ಪ್ರಾಣ ಉಳಿಸಬೇಕು ಅಂದ್ರೆ ಈ ಮಾಹಿತಿಯನ್ನು ತಿಳುಕೊಳ್ಳಬೇಕು..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹಾವು ಕಚ್ಚಿ ಅದೆಷ್ಟೋ ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಮತ್ತು ಹಾವು ಕಚ್ಚಿದ ತಕ್ಷಣ ಏನು ಮಾಡಬೇಕು ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ ಹಾಗಾಗಿ ಈ ಮಾಹಿತಿಯನ್ನು ಎಲ್ಲರೊಂದಿ ಹಂಚ್ಚಿಕೊಳ್ಳಿ.

ನಮ್ಮ ದೇಶದಲ್ಲಿ 250 ಜಾತಿಯ ಹಾವುಗಳಿವೆ. ಅದರಲ್ಲಿ ಸು.52 ಜಾತಿಯ ವಿಷ ಹಾವುಗಳು. ಐದು ಹಾವುಗಳು ಹೆಚ್ಚು ವಿಷ ಹೊಂದಿದ್ದು, ಹಾವು ಕಚ್ಚಿದ ಮೂರು ಗಂಟೆಗಳಲ್ಲಿ ವ್ಯಕ್ತಿ ಸಾವನ್ನಾಪ್ಪುತ್ತಾನೆ. ನಾವು ಯಾವುದೇ ಚಿಕಿತ್ಸೆ ನೀಡುವುದ್ದಿದ್ದರೆ ಆ ಮೂರು ಗಂಟೆಯೊಳಗೆ ನೀಡಬೇಕು.

ಕಚ್ಚಿದ ಹಾವು ವಿಷಪೂರಿತ ಹಾವೋ ಅಥವಾ ವಿಷವಿಲ್ಲದ ಹಾವೋ ಎಂದು ತಿಳಿದುಕೊಳ್ಳಲು ಅದು ಕಚ್ಚಿದ ಜಾಗದಲ್ಲಿ ಎಷ್ಟು ಕಚ್ಚಿದ ಗುರುತುಗಳಿವೆ ಎಂಬುದನ್ನು ನೋಡಬೇಕು. ಒಂದು ಅಥವಾ ಎರಡು ಗುರುತು ಇದ್ದರೆ ವಿಷಪೂರಿತ ಹಾವೇಂದು, ಮೂರಕ್ಕಿಂತ ಹೆಚ್ಚಿದ್ದರೆ ವಿಷರಹಿತ ಹಾವೇಂದು ತಿಳಿದುಕೊಳ್ಳಬಹುದು.

ವಿಷಪೂರಿತ ಹಾವು ಕಚ್ಚಿದರೆ ಕಚ್ಚಿದ ಜಾಗದಿಂದ ವಿಷ ಶರೀರಕ್ಕೆ ಹೋಗುತ್ತದೆ. ಅಲ್ಲಿಂದ ಹೃದಯ, ಹೃದಯದಿಂದ ಶರೀರದ ಎಲ್ಲಾ ಭಾಗಗಳಿಗೆ ಸೇರುತ್ತದೆ. ಹೀಗೆ ವಿಷ ಶರೀರದ ಎಲ್ಲಾ ಭಾಗಗಳಿಗೆ ಸೇರಲು ಮೂರು ಗಂಟೆ ಸಮಯ ತೆಗೆದುಕೊಳ್ಳಬಹುದು. ಅಷ್ಟರ ಒಳಗೆ ಆ ವ್ಯಕ್ತಿಗೆ ಚಿಕಿತ್ಸೆ ನೀಡದಿದ್ದರೆ ಬದುಕಲಾರ.

ಹಾವು ಕಚ್ಚಿದ ತಕ್ಷಣ ಕಚ್ಚಿದ ಜಾಗದ ಸ್ವಲ್ಪ ಮೇಲ್ಭಾಗದಲ್ಲಿ ದಾರದಿಂದ ಗಟ್ಟಿಯಾಗಿ ಕಟ್ಟಬೇಕು. ಸೂಜಿಯಿಲ್ಲದ ಸಿರಂಜಿಯಿಂದ ಹಾವು ಕಚ್ಚಿದ ಜಾಗದಲ್ಲಿ ಇಟ್ಟು ರಕ್ತವನ್ನು ಎಳೆಯಬೇಕು. ಮೊದಲು ರಕ್ತ ಕಪ್ಪು ಬಣ್ಣದಲ್ಲಿರುತ್ತದೆ. ಅದು ವಿಷಯುಕ್ತ ರಕ್ತವಾಗಿರುತ್ತದೆ. ಹೀಗೆ ಎರಡು ಮೂರು ಸಾರಿ ಎಳೆಯಬೇಕು. ಹೀಗೆ ಪ್ರಥಮ ಚಿಕಿತ್ಸೆ ನಂತರ ಆದಷ್ಟು ಬೇಗ ವೈದ್ಯರ ಬಳಿ ಕರೆದುಕೊಂಡು ಹೋಗಿ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಭವಿಷ್ಯ ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ …

Leave a Reply

Your email address will not be published. Required fields are marked *