Breaking News
Home / ಆರೋಗ್ಯ / ಮಲಬದ್ಧತೆ ನಿವಾರಿಸುವ ಬೆಂಡೆಕಾಯಿ ಮಲಬದ್ಧತೆ ಜೊತೆಗೆ ಇನ್ನು ಹತ್ತು ರೋಗಗಳನ್ನು ಹೋಗಲಾಡಿಸುತ್ತೆ..!

ಮಲಬದ್ಧತೆ ನಿವಾರಿಸುವ ಬೆಂಡೆಕಾಯಿ ಮಲಬದ್ಧತೆ ಜೊತೆಗೆ ಇನ್ನು ಹತ್ತು ರೋಗಗಳನ್ನು ಹೋಗಲಾಡಿಸುತ್ತೆ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ದಿನಕ್ಕೆ 2 ಬಾರಿ ಹಸಿ ಬೆಂಡೆಕಾಯಿಯನ್ನು ಅಗಿದು ತಿಂದರೆ ದೇಹದ ತೂಕ ಕಡಿಮೆಯಾಗುತ್ತದೆ.ನಿಯಮಿತವಾಗಿ ಬೆಂಡೆಕಾಯಿಯನ್ನು ಗರ್ಭಿಣಿಯರು ಸೇವಿಸಿದರೆ ಮಗುವಿನ ನರಗಳಿಗೆ ಚೆನ್ನಾಗಿ ಪೋಷಣೆ ದೊರಕುತ್ತದೆ.ಬೆಂಡೆಕಾಯಿಗೆ ನೀರು ಸೇರಿಸಿ ಪೇಸ್ಟ್‌ ಮಾಡಿ ಮುಖಕ್ಕೆ ಲೇಪಿಸಿದರೆ ಚರ್ಮದ ಕಾಂತಿ ಹೆಚ್ಚುತ್ತದೆ.

ಬೆಂಡೆಕಾಯಿಯನ್ನು ಸಣ್ಣಗೆ ಹೆಚ್ಚಿ ನೀರಲ್ಲಿ ಕುದಿಸಿ ಆ ನೀರನ್ನು ದಿನಕ್ಕೆ 3 ಬಾರಿ ಸೇವಿಸಿದರೆ ವೈಟ್‌ಡಿಸ್ಚಾರ್ಜ್‌ ಅಥವಾ ಬಿಳಿಸ್ರಾವ ನಿವಾರಣೆಯಾಗುತ್ತದೆ.ಮಲಬದ್ಧತೆ ಸಮಸ್ಯೆ ಇದ್ದರೆ ಪ್ರತಿ ದಿನ ಬೆಂಡೆಕಾಯಿ ಸೇವಿಸಿದರೆ ಮಲವಿಸರ್ಜನೆ ಸುಲಭವಾಗುತ್ತದೆ.

20 ರಿಂದ 30 ಒಣಗಿದ ಬೆಂಡೆಕಾಯಿ ಬೀಜಗಳನ್ನು ಪುಡಿ ಮಾಡಿ ಎಳ್ಳೆಣ್ಣೆಯಲ್ಲಿ 1 ದಿನ ನೆನೆಸಿ. ಮರುದಿನ ನೆನೆಸಿದ್ದನ್ನು ಚೆನ್ನಾಗಿ ಕುದಿಸಿ ಎಣ್ಣೆ ತಯಾರಿಸಿ. ಈ ಎಣ್ಣೆಯನ್ನು ಪ್ರತಿ ದಿನ ತಲೆಗೆ ಹಚ್ಚಿದ್ದರೆ ತಲೆಹೊಟ್ಟು ಮತ್ತು ಹೇನುಗಳು ಶಮನವಾಗುತ್ತದೆ.

ಬೆಂಡೆಕಾಯಿ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಹಾಲು ಅಥವಾ ನೀರಿನ ಜತೆ ಸೇವಿಸಿದರೆ ದೇಹದ ತೂಕ ಹೆಚ್ಚಾಗುತ್ತದೆ. ನೀರಿಗೆ ಬೆಂಡೆಕಾಯಿ ಬೀಜದ ಪುಡಿ, ಏಲಕ್ಕಿ ಪುಡಿ, ಚಕ್ಕೆ ಪುಡಿ, ಕರಿಮೆಣಸಿನ ಪುಡಿ ಸೇರಿಸಿ ಸೇವಿಸಿದರೆ ಮಧುಮೇಹ ತೊಂದರೆ ಕಡಿಮೆಯಾಗುತ್ತದೆ.

ದೇಹದ ಚರ್ಮ ಮೃದುವಾಗಿಸಲು ಒಣಗಿಸಿದ ಬೆಂಡೆಕಾಯಿ ಪುಡಿಗೆ ಕಡಲೆಹಿಟ್ಟು , ಹೆಸರುಕಾಳಿನ ಹಿಟ್ಟು ಮತ್ತು ನಿಂಬೆ ಸಿಪ್ಪೆ ಪುಡಿ ಸೇರಿಸಿ ಪೇಸ್ಟ್‌ ಮಾಡಿ ದೇಹಕ್ಕೆ ಲೇಪಮಾಡಿ ಸ್ನಾನಮಾಡಬೇಕು.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ನಿಮ್ಮ ಮುಖದ ಎಲ್ಲ ಸಮಸ್ಯೆಗಳಿಗೆ ಹೊಕ್ಕಳಿನಲ್ಲೆ ಇದೆ ಪರಿಹಾರ ಇದೇನಪ್ಪ ಇಲ್ಲಿ ಗಮನಿಸಿ ಗೊತ್ತಾಗುತ್ತೆ..!

ಸೌಂದರ್ಯದ ಗುಟ್ಟು ನಮ್ಮ ಹೊಕ್ಕಳಲ್ಲೇ ಅಡಗಿದೆ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ನಾನಾ ರೀತಿಯ ಕೆಮಿಕಲ್ ಯುಕ್ತ ವಸ್ತುಗಳನ್ನು ಮುಖಕ್ಕೆ ಹಚ್ಚಿ …

Leave a Reply

Your email address will not be published. Required fields are marked *