Breaking News
Home / Featured / ಮೊಬೈಲ್ ಸಿಮ್ ಗೆ ಆಧಾರ್ ಕಡ್ಡಾಯವಲ್ಲ…!

ಮೊಬೈಲ್ ಸಿಮ್ ಗೆ ಆಧಾರ್ ಕಡ್ಡಾಯವಲ್ಲ…!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಕೇಂದ್ರ ದೂರಸಂಪರ್ಕ ವಿಭಾಗ ಎಲ್ಲ ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಿದೆ. ಹೊಸ ಮೊಬೈಲ್ ಸಿಮ್ ಖರೀದಿ ವೇಳೆ ಗುರುತಿನ ದಾಖಲೆಯಾಗಿ ಗ್ರಾಹಕರು ಆಧಾರ್ ಸಂಖ್ಯೆ ಹಾಗೂ ಬಯೋಮೆಟ್ರಿಕ್ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದು ಹೇಳಿದೆ.

ಸಾರ್ವಜನಿಕರ ಆಧಾರ್ ವೈಯಕ್ತಿಕ ಮಾಹಿತಿ ಸೋರಿಕೆ ಹಾಗೂ ಖಾಸಗಿತನ ಹಕ್ಕು ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ನೋ ಯುವರ್ ಕಸ್ಟಮರ್ (ಗ್ರಾಹಕರ ಪರಿಚಯ) ನಿಯಮಾವಳಿಯಲ್ಲಿ ಬದಲಾವಣೆ ತರುವಂತೆಯೂ ಟೆಲಿಕಾಂ ವಿಭಾಗ ಕಂಪನಿಗಳಿಗೆ ಸೂಚನೆ ನೀಡಿದೆ.

ವರ್ಚುವಲ್ ಐಡಿಗಳ ಮೂಲಕ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವ ವ್ಯವಸ್ಥೆ ಜಾರಿಗೆ ತರುವಂತೆಯೂ ನಿರ್ದೇಶನ ನೀಡಿದೆ. ಜೂನ್ 12ರಂದು ಎಲ್ಲ ಟೆಲಿಕಾಂ ಕಂಪನಿಗಳಿಗೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆಧಾರ್ ಪ್ರಾಧಿಕಾರ ಇತ್ತೀಚೆಗೆ ಹಲವು ಬದಲಾವಣೆಗಳನ್ನು ತಂದಿದ್ದು, ಇದಕ್ಕೆ ತಕ್ಕಂತೆ ಟೆಲಿಕಾಂ ಕಂಪನಿಗಳು ನಿಯಮಾವಳಿ ಬದಲಿಸಿಕೊಳ್ಳಬೇಕು. ವರ್ಚುವಲ್ ಐಡಿ ಮಾನ್ಯ ಮಾಡಬೇಕು, ಬಯೋಮೆಟ್ರಿಕ್ ಸಹಿತ ಗ್ರಾಹಕರ ಕುರಿತು ಹೆಚ್ಚಿನ ವೈಯಕ್ತಿಕ ಮಾಹಿತಿ ಸಂಗ್ರಹಿಸಬಾರದೆಂದು ತಿಳಿಸಿದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಫಲ ಹೇಗಿದೆ ನೋಡಿ ಶುಭ ಅಶುಭ ಫಲಗಳ ಲೆಕ್ಕಾಚಾರ ಪಂಡಿತ್ ಸುದರ್ಶನ್ ಭಟ್ ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ …

Leave a Reply

Your email address will not be published. Required fields are marked *