Breaking News
Home / Featured / ಒಕ್ಕಲಿಗರನ್ನು ಕಡೆಗಣಿಸಿ ರಾಮನಗರಕ್ಕೆ ಸಂಬಂಧಪಡದ ವ್ಯಕ್ತಿಯನ್ನು ಬಿಜೆಪಿ ಜಿಲ್ಲಾದ್ಯಕ್ಷರನ್ನಾಗಿ ಆಯ್ಕೆ ಕಾರ್ಯಕರ್ತರಲ್ಲಿ ಅಸಮಾಧಾನ..!

ಒಕ್ಕಲಿಗರನ್ನು ಕಡೆಗಣಿಸಿ ರಾಮನಗರಕ್ಕೆ ಸಂಬಂಧಪಡದ ವ್ಯಕ್ತಿಯನ್ನು ಬಿಜೆಪಿ ಜಿಲ್ಲಾದ್ಯಕ್ಷರನ್ನಾಗಿ ಆಯ್ಕೆ ಕಾರ್ಯಕರ್ತರಲ್ಲಿ ಅಸಮಾಧಾನ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ರಾಮನಗರದ ಬಿಜೆಪಿ ಜಿಲ್ಲಾಧ್ಯಕ್ಷರ ವಿಚಾರವಾಗಿ ಸಾಕಷ್ಟು ಅಸಮಾಧಾನವನ್ನು ಕಾರ್ಯಕರ್ತರು ವ್ಯಕ್ತಪಡಿಸುತಿದ್ದರೆ. ಒಕ್ಕಲಿಗರೇ ಪ್ರಾಬಲ್ಯವಿರುವ ಜಿಲ್ಲೆಯಲ್ಲಿ ಅದೇ ಸಮುದಾಯದ ನಾಯಕನ್ನು ಜಿಲ್ಲಾದ್ಯಕ್ಷರನ್ನಾಗಿ ಆಯ್ಕೆ ಮಾಡಿದ್ರೆ ಪಕ್ಷದ ಸಂಘಟನೆಗೆ ಹೆಚ್ಚು ಶಕ್ತಿ ಸಿಗುತಿತ್ತು ಆದ್ರೆ ಒಕ್ಕಲಿಗ ನಾಯಕರನ್ನು ಕಡೆಗಣಿಸಿ ಯಡಿಯೂರಪ್ಪನವರ ಮಗ ರಾಘವೇಂದ್ರರವರಿಗೆ ಆಪ್ತರಾಗಿರುವ ರಾಮನಗರ ಜಿಲ್ಲೆಯ ಯಾವುದೇ ಸಂಪರ್ಕವಿಲ್ಲದ ಬೆಂಗಳೂರು ಮೂಲದ ಲಿಂಗಾಯಿತ ಸಮುದಾಯದ ಎಂ ರುದ್ರೇಶ್ ರವರನ್ನು ರಾಮನಗರ ಜಿಲ್ಲಾದ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ರಾಮನಗರದ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೆದಿದ್ದೆ.

ಒಕ್ಕಲಿಗರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಮತ್ತು ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಅವರ ವಿರುದ್ಧ ಒಬ್ಬ ಪ್ರಬಲ ನಾಯಕನ್ನು ಬೆಳಸಬೇಕು ಮತ್ತು ಅದೇ ಸಮುದಾಯದ ನಾಯಕನ್ನು ಬೆಳೆಸಬೇಕು ಮತ್ತು ಯೋಗೀಶ್ವರ್ ರವರು ಬಿಜೆಪಿ ಸೇರಿದ ಮೇಲೆ ಯಾವುದೇ ಸರಿಯಾದ ರೀತಿಯಲ್ಲಿ ಸ್ಥಾನಮಾನ ಸಿಗದಿರುವುದು ಹಾಗು ಒಕ್ಕಲಿಗರೇ ಹೆಚ್ಚಿರುವ ಕಡೆಗಳಲ್ಲಿ ಒಕ್ಕಲಿಗರನ್ನೇ ಕಡೆಗಣಿಸುವುದು ಬಿಜೆಪಿಗೆ ದೊಡ್ಡ ನಷ್ಟವಾಗಲಿದೆ.

ರಾಮನಗರದ ಕಾರ್ಯಕರ್ತರ ಅಭಿಪ್ರಾಯದಂತೆ ರಾಮನಗರ ಜಿಲ್ಲಾಧ್ಯಕ್ಷರ ವಿಚಾರದಲ್ಲಿ ಕೇಳಿ ಬಂದ ಎರಡು ಹೆಸರು ಒಂದು ಸಿಪಿ ಯೋಗೀಶ್ವರ್ ಮತ್ತು ಜಗದೀಶ್ ಗೌಡ ಇವರಿಬ್ಬರಲ್ಲಿ ಒಬ್ಬರಿಗೆ ರಾಮನಗರದ ಜಿಲ್ಲಾಧ್ಯಕ್ಷರ ಸ್ಥಾನ ನೀಡಿದ್ರೆ ಕಾರ್ಯಕರ್ತರಲ್ಲಿ ಒಂದು ಹೊಸ ಹುಮಸ್ಸು ಮೂಡುತಿತ್ತು ಮತ್ತು ಮುಂದೆ ಬರುವ ಉಪಚುನಾವಣೆಗೆ ಇದು ಸಹಾಯ ಆಗುತಿತ್ತು ಅನ್ನೋದು ಕಾರ್ಯಕರ್ತರ ಆಕ್ರೋಶ.


ಇವೆಲ್ಲ ವಿಚಾರಗಳು ಮುಂದಿನ ಉಪಚುನಾವಣೆಯಲ್ಲಿ ಹೇಗೆ ಕೆಲಸ ಮಾಡುತ್ತವೆ ಅನ್ನೋದು ಗೊತ್ತಿಲ್ಲ ಆದ್ರೆ ರಾಮನಗರದ ಕಾರ್ಯಕರ್ತರ ಬೆಂಬಲವಿದಿದ್ದು ಬಿಜೆಪಿ ಮುಖಂಡ ಜಗದೀಶ್ ಗೌಡ ರವರಿಗೆ ಕಾರಣ ಇಲ್ಲಿನ ದೊಡ್ಡ ಸಮುದಾಯ ಅಂದ್ರೆ ಅದು ಒಕ್ಕಲಿಗ ಸಮುದಾಯ ಹಾಗಾಗಿ ಇಲ್ಲಿ ಜಾತಿಯ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತವೆ ಅದರಿಂದ ಮತ್ತು ಮುಂದಿನ ಉಪಚುನಾಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಉದ್ದೇಶದಿಂದ ಅನ್ನೋದು ಕಾರ್ಯಕರ್ತರ ಮಾತು.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ವೈರಲ್ ಜ್ವರ ಹಾಗು ಪಿತ್ತ ಇನ್ನು ಅನೇಕ ರೋಗಗಳನ್ನು ಹೋಗಲಾಡಿಸುತ್ತೆ ಈ ಅಮೃತಬಳ್ಳಿ..!

ಪ್ರತಿ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ 5 ಮಿಲಿ ಅಮೃತಬಳ್ಳಿ ಬೇರು ಮತ್ತು ಹೂವಿನಿಂದ ತಯಾರಿಸಿದ ಜ್ಯೂಸ್‌ ಸೇವಿಸಿದರೆ ಬುದ್ಧಿ …

Leave a Reply

Your email address will not be published. Required fields are marked *