Breaking News
Home / Featured / ರೈತರ ಸಾಲಮನ್ನಾಕ್ಕೆ ಎಳ್ಳು ನೀರು ಬಿಡಲು ಮುಂದಾದ ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ..!

ರೈತರ ಸಾಲಮನ್ನಾಕ್ಕೆ ಎಳ್ಳು ನೀರು ಬಿಡಲು ಮುಂದಾದ ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ರೈತರ ಸಾಲಮನ್ನಾ ಕುರಿತು ಭಾವಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಗೊಂದಲದ ಹೇಳಿಕೆಯನ್ನು ಕೊಟ್ಟಿದ್ದಾರೆ.

ಸಾಲಮನ್ನಾ ಕುರಿತು ಹೆಚ್​ಡಿಕೆ ಗೊಂದಲದ ಹೇಳಿಕೆ ಪೂರ್ಣ ಬಹುಮತ ಬಂದ್ರೆ ರೈತರ ಸಾಲಮನ್ನಾ ಎಂದಿದ್ದೆ ಆದರೆ ರಾಜ್ಯದ ಜನತೆ ಸಂಪೂರ್ಣ ಬಹುಮತ ಕೊಟ್ಟಿಲ್ಲ ಧರ್ಮಸ್ಥಳದಲ್ಲಿ ನಿಯೋಜಿತ ಸಿಎಂ ಹೆಚ್​​ಡಿಕೆ ಹೇಳಿಕೆ. ಆದರೆ ರೈತರಿಗೆ ಅನುಕೂಲ ಆಗುವ ಹಾಗೆ ಮಾಡುತ್ತೇನೆ ರೈತರು ಉಳಿಯುವ ನಿಟ್ಟಿನಲ್ಲಿ ಯೋಜನೆ ಜಾರಿಮಾಡ್ತೇನೆ ಬಹುಮತ ಸಾಬೀತಾದ ಬಳಿಕ ಯೋಜನೆಯ ಜಾರಿ ಧರ್ಮಸ್ಥಳದಲ್ಲಿ ನಿಯೋಜಿತ ಸಿಎಂ ಹೆಚ್​​ಡಿಕೆ ಹೇಳಿಕೆ.

ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೂರ್ಣ ಬಹುಮತ ಬಂದ್ರೆ ರೈತರ ಸಾಲಮನ್ನಾ ಎಂದಿದ್ದೆ. ಆದರೆ ರಾಜ್ಯದ ಜನತೆ ಸಂಪೂರ್ಣ ಬಹುಮತ ಕೊಟ್ಟಿಲ್ಲ. ಆದರೆ ರೈರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡುತ್ತೇನೆ ಅಂತ ಹೇಳಿದ್ದಾರೆ.

ರಾಜ್ಯದ ರೈತರಿಗೆ ಸಂಪೂರ್ಣವಾದ ಸಹಕಾರ ಕೊಟ್ಟಾಗ ಸಾಲಮನ್ನಾ ಮಾಡುತ್ತೇನೆ ಅನ್ನೋ ಘೋಷಣೆ ಮಾಡಿದ್ದೆ. ಆದ್ರೆ ನನಗೆ ಸಂಪೂರ್ಣ ಸಹಕಾರ ಕೊಡದೇ ಇದ್ದರೂ, ಈ ಸಮ್ಮಿಶ್ರ ಸರ್ಕಾರದಲ್ಲಿ ನನ್ನ ರೈತ ಉಳಿಯಬೇಕು. ಹೀಗಾಗಿ ನನ್ನ ರೈತ ಉಳಿಯಲು ನಾನು ಏನ್ ಕಾರ್ಯಕ್ರಮ ಕೊಡುತ್ತೇನೆ ಹಾಗೂ ಘೋಷಣೆ ಮಾಡಿರುವುದೆಲ್ಲವನ್ನು ವಿಶ್ವಾಸ ಮತ ಸಾಬೀತು ಮಾಡಿದ ಬಳಿಕ ಹೇಳುತ್ತೇನೆ ಎಂದರು.

ಪ್ರಚಾರದ ಸಂದರ್ಭದಲ್ಲಿ ನನ್ನ ಪಕ್ಷ ಅಧಿಕಾರಕ್ಕೆ ಬಂದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರು.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಭವಿಷ್ಯ ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ …

Leave a Reply

Your email address will not be published. Required fields are marked *