Breaking News
Home / Featured / ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ ಸರ್ಕಾರದಿಂದನೇ ಹಣ..!

ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ ಸರ್ಕಾರದಿಂದನೇ ಹಣ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಎಸ್ ಹಲವು ರೀತಿಯಲ್ಲಿ ಹೊಸ ಹೊಸ ಯೋಜನೆಗಳನ್ನು ನೀಡುತ್ತಿರುವ ಮೋದಿ ಸರ್ಕಾರ ಈ ಭಾರಿ ಒಂದು ವಿಶೇಷ ಯೋಜನೆಯನ್ನು ತಂದಿದೆ ಈ ಯೋಜನೆಯ ಲಾಭ ಹೇಗೆ ಮತ್ತು ಈ ಯೋಜನೆ ಹೇಗೆ ಪಡೆಯುವುದು ಅನ್ನೋದು ಇಲ್ಲಿದೆ ನೋಡಿ.

ಇತ್ತೀಚಿನ ದಿನಗಳಲ್ಲಿ ನೀವು ನೋಡಿರಬಹುದು ಎಲ್ಲಿ ನೋಡಿದರು ವಾಯು ಮಾಲಿನ್ಯ ಹಾಗು ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಭಾರಿ ಏರಿಕೆ ಕಾಣುತಿದ್ದು ಇದೆನ್ನೆಲ್ಲ ಹೋಗಲಾಡಿಸಲು ಮೋದಿ ಸರ್ಕಾರ ಒಂದು ವಿಭಿನ್ನ ಮತ್ತು ಹೊಸ ಯೋಜನೆಯನ್ನು ಜಾರಿ ಮಾಡಿದೆ.

ಯಾವ ಯೋಜನೆ ಮತ್ತು ಇದರ ಲಾಭ ಹೇಗೆ ಗೊತ್ತಾ:
ದೇಶದಲ್ಲಿ ಎಲೆಕ್ಟ್ರಿಕಲ್ ಕಾರುಗಳನ್ನು ಹೆಚ್ಚಿಸುವ ಕಾರಣದಿಂದಾಗಿ, ಗ್ರಾಹಕರನ್ನು ಪ್ರೋತಾಹಿಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ರೂಪಿಸಿದೆ. ಈ ಕಾರುಗಳನ್ನು ಖರೀದಿಸುವ ಪ್ರತಿ ಗ್ರಾಹಕರಿಗೆ 2.5 ಲಕ್ಷ ಪ್ರೋತ್ಸಹ ಧನ ನೀಡಲಾಗುತ್ತದೆ.

ಈಗಾಗಲೇ ಡೀಸೆಲ್ ಅಥವಾ ಪೆಟ್ರೋಲ್ ಕಾರುಗಳನ್ನು ಹೊಂದಿರುವ ಮಾಲೀಕರು ತಮ್ಮ ಹಳೆಯ ಬಿಎಸ್ 3 ಕಾರುಗಳನ್ನು ಬದಲಾಯಿಸಿ ಎಲೆಕ್ಟ್ರಿಕ್ ಕಾರನ್ನು ಖರೀದಿಸುವಂತಹ ಗ್ರಾಹಕರಿಗೆ ಮಾತ್ರ ಈ ಆಫರ್ ಅನ್ವಹಿಸಲಿದೆ.

ಪ್ರೊತ್ಸಾಹ ಧನ ಪಡೆಯುವುದು ಹೇಗೆ:
ನೀವು ಡೀಸೆಲ್ ಅಥವಾ ಪೆಟ್ರೋಲ್ ಹೊಂದಿದ್ದು, ಎಲೆಕ್ಟ್ರಿಕ್ ಕಾರ್‌ನೊಂದಿಗೆ ಬದಲಾವಣೆ ಮಾಡುವುದಾದರೇ ಮೊದಲು ನಿಮ್ಮ ಹಳೆಯ ಕಾರುಗಳನ್ನು ಅಧಿಕೃತ ಸ್ಕ್ರ್ಯಾಪಿಂಗ್ ಸೆಂಟರ್‌ನಲ್ಲಿ ಸ್ಕ್ರ್ಯಾಪ್ ಮಾಡಿಸುವುದು ಕೂಡಾ ಕಡ್ಡಾಯವಾಗಿರುತ್ತದೆ.

ನಿಮ್ಮ ಹಳೆಯ ಪೆಟ್ರೋಲ್ ಅಥವಾ ಡಿಸೇಲ್ ಕಾರುಗಳು ಗುಜುರಿಗೆ ಸೇರಿದ ನಂತರವೇ ಎಲೆಕ್ಟ್ರಿಕ್ ಕಾರಿನ ಎಕ್ಸ್‌ಚೆಂಜ್‌ ಮೇಲೆ ರೂ. 2.50ಲಕ್ಷ ಪ್ರೊತ್ಸಾಹ ಧನ ಸಿಗಲಿದೆ. ಮತ್ತೊಂದು ವಿಚಾರ ಅಂದ್ರೆ ನೀವು ಖರೀದಿಸುವ ಎಲೆಕ್ಟ್ರಿಕ್ ಕಾರುಗಳ ಬೆಲೆ ಆಧಾರ ಮೇಲೆ ಪ್ರೊತ್ಸಾಹ ಧನ ನಿಗದಿಯಾಗುತ್ತೆ.

ಕೇಂದ್ರ ಸರ್ಕಾರದ ಮತ್ವದ ನಿರ್ಧಾರವೆಂದರೆ ಮುಂದಿನ ಐದು ವರ್ಷಗಳಲ್ಲಿ ಶೇ.50 ರಷ್ಟು ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸುವ ಗುರಿಹೊಂದಿದೆ. ಹೀಗಾಗಿ ಹಳೆಯ ಮಾದರಿಯ ಕಾರುಗಳನ್ನು ಹೊಂದಿರುವ ಕಾರು ಮಾಲೀಕರಿಗೆ ಈ ಯೋಜನೆಯ ಲಾಭ ದೊರೆಯಲಿದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಭವಿಷ್ಯ ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ …

Leave a Reply

Your email address will not be published. Required fields are marked *