Breaking News
Home / Featured / ಉರಿ, ತುರಿಕೆ,ತಲೆ ಹೊಟ್ಟು ನಿವಾರಣೆ, ಕಣ್ಣಿನ ತೊಂದರೆ ಹೀಗೆ ಹಲವು ರೋಗಗಳಿಗೆ ರಾಮಬಾಣ ಈ ಗರಿಕೆ..!

ಉರಿ, ತುರಿಕೆ,ತಲೆ ಹೊಟ್ಟು ನಿವಾರಣೆ, ಕಣ್ಣಿನ ತೊಂದರೆ ಹೀಗೆ ಹಲವು ರೋಗಗಳಿಗೆ ರಾಮಬಾಣ ಈ ಗರಿಕೆ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಗರಿಕೆ ಕೇವಲ ಪೂಜೆ ಮಾಡೋಕೆ ಅಥವಾ ಆಡು ತಿನ್ನಲು ಮಾತ್ರವಲ್ಲ ಅದರಿಂದ ಮಾನವನ ಹಲವು ರೋಗಗಳನ್ನು ಹೋಗಲಾಡಿಸಬಹುದು ಹೇಗೆ ಅನ್ನೋದು ಇಲ್ಲಿದೆ ನೋಡಿ.

ಎಳ್ಳೆಣ್ಣೆಗೆ ಗರಿಕೆ ರಸ ಹಾಕಿ ಕುದಿಸಿ ಎಣ್ಣೆ ತಯಾರಿಸಿ ಈ ಎಣ್ಣೆಯನ್ನು ಪ್ರತಿ ದಿನ ತಲೆಗೆ ಹಚ್ಚಿದರೆ ತಲೆ ಹೊಟ್ಟು ನಿವಾರಣೆಯಾಗುತ್ತದೆ.

ಗರಿಕೆ ರಸದಿಂದ ಬಾಯಿ ಮುಕ್ಕಳಿಸಿದರೆ ವಸಡಿನಿಂದ ರಕ್ತಸ್ರಾವ ಆಗುತ್ತಿದ್ದರೆ ನಿಲ್ಲುತ್ತದೆ ಮತ್ತು ಬಾಯಿವಾಸನೆ ನಿವಾರಣೆಯಾಗುತ್ತದೆ.

ಗರಿಕೆಯ ಇಡೀ ಗಿಡವನ್ನು ಪುಡಿ ಮಾಡಿ. ಒಂದು ಚಮಚÜ ಗರಿಕೆ ಪುಡಿಯನ್ನು 2 ಲೋಟ ನೀರಿಗೆ ಹಾಕಿ ಅರ್ಧ ಲೋಟ ಆಗುವ ತನಕ ಕುದಿಸಿ ಸೋಸಿ. ಈ ಕಷಾಯಕ್ಕೆ ಅರ್ಧ ಚಮಚ ಬೆಲ್ಲದ ಸೇರಿಸಿ ಕುಡಿದರೆ ತಲೆನೋವು, ಸುಸ್ತು ಕಡಿಮೆಯಾಗುತ್ತದೆ.

ಗರಿಕೆ ರಸವನ್ನು ಮಜ್ಜಿಗೆ ಜತೆ ಸೇರಿಸಿ ದಿನಕ್ಕೆ 2 ಬಾರಿ ಖಾಲಿ ಹೊಟ್ಟೆಗೆ ಕುಡಿದರೆ ಎದೆ ಉರಿ, ಅಸಿಡಿಟಿ ಶಮನವಾಗುತ್ತದೆ.

ಗರಿಕೆ ರಸಕ್ಕೆ ಅರಿಶಿನ ಬೆರೆಸಿ ಚರ್ಮಕ್ಕೆ ಲೇಪಿಸಿದರೆ ಚರ್ಮದ ರಾರ‍ಯಶಸ್‌, ಗಂದೆ, ಉರಿ, ತುರಿಕೆ ನಿವಾರಣೆಯಾಗುತ್ತದೆ.

ಕಣ್ಣುರಿ, ಕಡಿತ ಮತ್ತು ಕಣ್ಣು ಕೆಂಪಾಗಿದ್ದರೆ ಹತ್ತಿಯನ್ನು ಗರಿಕೆ ರಸದಲ್ಲಿ ಅದ್ದಿ ಕಣ್ಣುಗಳ ಮೇಲೆ ಇಟ್ಟರೆ ಕಣ್ಣಿನ ತೊಂದರೆ ಕಡಿಮೆಯಾಗುತ್ತದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ದಕ್ಷಿಣ ಭಾರತದ ಮೊದಲ ಯುದ್ಧವಿಮಾನ ಮಹಿಳಾ ಪೈಲಟ್ ನಮ್ಮ ಕನ್ನಡ ಕುವರಿ ಚಿಕ್ಕಮಗಳೂರ ಹುಡುಗಿ..!

ಘಮಘಮಿಸುವ ಕಾಫಿಗೆ ಹೆಸರಾಗಿರುವ ಚಿಕ್ಕಮಗಳೂರಿನ ಹೆಮ್ಮೆಯ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಚಿಕ್ಕಮಗಳೂರಿನವರಾದ ಮೇಘನಾ ಶಾನಭೋಗ್ ಯುದ್ಧ ವಿಮಾನದ …

Leave a Reply

Your email address will not be published. Required fields are marked *