Breaking News
Home / Featured / ಜನನ ನಕ್ಷತ್ರ ದೋಷ ವಿಚಾರ ಮತ್ತು ಪರಿಹಾರ

ಜನನ ನಕ್ಷತ್ರ ದೋಷ ವಿಚಾರ ಮತ್ತು ಪರಿಹಾರ

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಮಗು ಯಾವ ನಕ್ಷತ್ರದಲ್ಲಿ ಹುಟ್ಟಿದೆ ಎಂದು ಮೊದಲು ತಿಳಿದುಕೊಳ್ಳಬೇಕು ನಂತರ ಈ ಕೆಳಗಿನ ಕೆಲವು ದೋಷ ನಕ್ಷತ್ರಗಳನ್ನು ಕೊಟ್ಟಿದೆ ಆ ನಕ್ಷತ್ರಕ್ಕೆ ಯಾವ ದೋಷವಿರುತ್ತದೆ ಯಾರಿಗೆ ದೋಷವಿರುತ್ತದೆ ಮತ್ತು ಪರಿಹಾರವೇನು ಎಂಬುದು ತಿಳಿದುಕೊಳ್ಳಿ.

1.ಅಶ್ವಿನಿ: ಮಗುವು ಅಶ್ವಿನಿ ನಕ್ಷತ್ರದ 1ನೇ ಪಾದದಲ್ಲಿ ಜನನವಾದರೆ ತಂದೆಗೆ 3 ತಿಂಗಳು ಕೆಡಕುಗಳುಂಟಾಗುತ್ತವೆ.

ಪರಿಹಾರ: ಗೋ ಪ್ರತಿಮೆ ಅಥವಾ ಬಂಗಾರ ದಾನ ಮಾಡಬೇಕು.

2.ಭರಣಿ: ಮಗುವು ಭರಣಿ ನಕ್ಷತ್ರದ 3ನೇ ಪಾದದಲ್ಲಿ ಜನನವಾದರೆ ಮಗುವಿಗೆ ರೋಗ ಬಾಧೆಯುಂಟಾಗುತ್ತದೆ.

ಪರಿಹಾರ: ತಾಮ್ರದ ಪಾತ್ರೆ ದಾನಮಾಡಬೇಕು.

3.ರೋಹಿಣಿ: ಮಗುವು ರೋಹಿಣಿ ನಕ್ಷತ್ರದ 1ನೇ ಪಾದದಲ್ಲಿ ಜನನವಾದರೆ ಮಗುವಿನ ಸೋದರ ಮಾವನಿಗೆ ಶುಭವಲ್ಲ, ಮಗುವು ರೋಹಿಣಿ ನಕ್ಷತ್ರದ 2ನೇ ಪಾದದಲ್ಲಿ ಜನಿಸಿದರೆ ತಂದೆಗೆ ಶುಭವಲ್ಲ, ಮಗುವು ರೋಹಿಣಿ ನಕ್ಷತ್ರದ 3ನೇ ಪಾದದಲ್ಲಿ ಜನಿಸಿದರೆ ತಾಯಿಗೆ ಶುಭವಲ್ಲ.

ಪರಿಹಾರ: ಬೆಳ್ಳಿ ದಾನ ಮಾಡಬೇಕು

4.ಆರಿದ್ರ: ಮಗುವು ಆರಿದ್ರ ನಕ್ಷತ್ರದ 4ನೇ ಪಾದದಲ್ಲಿ ಜನನವಾದರೆ ಮಗುವಿನ ತಾಯಿಗೆ ಶುಭವಲ್ಲ.

ಪರಿಹಾರ: ಹಿತ್ತಾಳೆಯ ಪಾತ್ರೆ ಜೊತೆಗೆ ಹಳದಿ ವಸ್ತ್ರದಾನ ಮಾಡಬೇಕು.

5.ಪುಷ್ಯ: ಮಗುವು ಪುಷ್ಯ ನಕ್ಷತ್ರದ 1ನೇ ಪಾದದಲ್ಲಿ ಜನನವಾದರೆ ಮಗುವಿನ ಸೋದರ ಮಾವನಿಗೆ ಶುಭವಲ್ಲ. ಮಗುವು ಪುಷ್ಯ ನಕ್ಷತ್ರದ 2ನೇ ಪಾದದಲ್ಲಿ ಬೆಳಗ್ಗೆ ಜನನವಾದರೆ ಮಗುವಿನ ತಂದೆಗೆ ಶುಭವಲ್ಲ.

ಪರಿಹಾರ: ಕರು ಸಹಿತ ಇರುವ ಗೋವನ್ನು ದಾನ ಮಾಡಬೇಕು.

6.ಆಶ್ಲೇಷ: ಮಗುವು ಆಶ್ಲೇಷ ನಕ್ಷತ್ರದ 2ನೇ ಪಾದದಲ್ಲಿ ಜನನವಾದರೆ ಮಗುವಿಗೆ ತೊಂದರೆ, ಆಶ್ಲೇಷ ನಕ್ಷತ್ರದ 3ನೇ ಪಾದದಲ್ಲಿ ಜನನವಾದರೆ ತಾಯಿಗೆ ಶುಭವಲ್ಲ, 4ನೇ ಪಾದದಲ್ಲಿ ಜನನವಾದರೆ ತಂದೆಗೆ ಶುಭವಲ್ಲ.

ಪರಿಹಾರ: ನವಗ್ರಹಶಾಂತಿ, ಗೋಮುಖ ಪ್ರಸವಶಾಂತಿ, ಅನ್ನದಾನವನ್ನು ಮಾಡಬೇಕು.

7.ಮಖಾ: ಮಗುವು ಮಖಾ ನಕ್ಷತ್ರದ 1ನೇ ಪಾದದಲ್ಲಿ ಜನನವಾದರೆ ಮಗುವಿನ ತಂದೆಗೆ ಐದು ತಿಂಗಳು ತೊಂದರೆಯು.

ಪರಿಹಾರ: 21ದಿನದಲ್ಲಿ ಕುದುರೆ ಪ್ರತಿಮೆ ದಾನ ಮಾಡಬೇಕು.

8.ಉತ್ತರ: ಮಗುವು ಉತ್ತರ ನಕ್ಷತ್ರದ 1ನೇ ಪಾದದಲ್ಲಿ ಜನನವಾದರೆ ಮಗುವಿನ ತಂದೆಗೆ ತೊಂದರೆಯು, ಉತ್ತರ ನಕ್ಷತ್ರದ 4ನೇ ಪಾದದಲ್ಲಿ ಜನನವಾದರೆ ಮಗುವಿನ ಸಹೋದರರಿಗೆ ತೊಂದರೆಯು.

ಪರಿಹಾರ: ಎಳ್ಳು ತುಂಬಿದ ಪಾತ್ರೆ ಅಥವಾ ಕೊಡವನ್ನು ಮನೆಯಲ್ಲಿ ಪೂಜೆ ಮಾಡಿ 9ದಿನದ ಒಳಗೆ ದಾನ ಕೊಡಬೇಕು.

9.ಚಿತ್ತ: ಮಗುವು ಚಿತ್ತ ನಕ್ಷತ್ರದಲ್ಲಿ ಜನನವಾದರೆ ತಂದೆ ತಾಯಿಗೆ ಸಹೋದರರಿಗೆ ಶುಭವಲ್ಲ.

ಪರಿಹಾರ: 5ಜನ ಪುರೋಹಿತರಿಗೆ ವಸ್ತ್ರದಾನವನ್ನು ಮತ್ತು ಮೇಕೆ ಪ್ರತಿಮೆ, ಕಂಬಳಿ ದಾನವನ್ನು ಮಾಡಬೇಕು ಜನನವಾದ ಒಂದು ತಿಂಗಳ ಒಳಗೆ.

10.ಜ್ಯೇಷ್ಠ: ಮಗುವು ಜ್ಯೇಷ್ಠ ನಕ್ಷತ್ರದ 1ನೇ ಪಾದದಲ್ಲಿ ಜನನವಾದರೆ ಮಗುವಿನ ಅಜ್ಜಿ ತಾಯಿಯ ತಾಯಿಗೆ ತೊಂದರೆ 2ನೇ ಪಾದದಲ್ಲಿ ಜನನವಾದರೆ ಮಗುವಿನ ತಾತನಿಗೆ ತಾಯಿಯ ತಂದೆಗೆ ತೊಂದರೆ 3ನೇ ಪಾದದಲ್ಲಿ ಜನನವಾದರೆ ಮಗುವಿನ ತಾಯಿಯ ಸಹೋದರರಿಗೆ ತೊಂದರೆ 4ನೇ ಪಾದದಲ್ಲಿ ಜನನವಾದರೆ ತಂದೆಗೆ 8 ತಿಂಗಳು ಅನೇಕ ಕಾದಾಟಗಳುಂಟಾಗುತ್ತದೆ.

ಪರಿಹಾರ: ಗೋಮುಖ ಪ್ರಸವ ಶಾಂತಿ ಮಾಡಿಸಿ, ಗೋ ಪ್ರತಿಮೆ ದಾನ ಮಾಡಿ.

11.ಮೂಲ: ಮಗುವು ಮೂಲ ನಕ್ಷತ್ರದ 1ನೇ ಪಾದದಲ್ಲಿ ಜನನವಾದರೆ ಮಗುವಿನ ತಂದೆಗೆ ತೊಂದರೆ ಮಗುವು 2ನೇ ಪಾದದಲ್ಲಿ ಜನನವಾದರೆ ಮಗುವಿನ ತಾಯಿಗೆ ತೊಂದರೆ 3ನೇ ಪಾದದಲ್ಲಿ ಜನನವಾದರೆ ಮನೆಯ ಆರ್ಥಿಕ ತೊಂದರೆಯುಂಟಾಗುತ್ತದೆ.

ಪರಿಹಾರ: ಗೋಮುಖ ಪ್ರಸವ ಶಾಂತಿ ಮಾಡಿಸಿ ಎಮ್ಮೆಯ ಪ್ರತಿಮೆ ದಾನ ಮಾಡಿ.

12.ಪೂರ್ವಾಷಾಢ: ಮಗುವು ಪೂರ್ವಾಷಢ ನಕ್ಷತ್ರದ 1ನೇ ಪಾದದಲ್ಲಿ ಜನನವಾದರೆ ಮಗುವಿನ ತಂದೆಗೆ ತೊಂದರೆ 2ನೇ ಪಾದದಲ್ಲಿ ಜನನವಾದರೆ ಮಗುವಿನ ತಾಯಿಗೆ ತೊಂದರೆ 3ನೇ ಪಾದದಲ್ಲಿ ಜನನವಾದರೆ ಮಗುವಿಗೆ ತೊಂದರೆ 4ನೇ ಪಾದದಲ್ಲಿ ಜನನವಾದರೆ ಮಗುವಿನ ಸೋದರ ಮಾವನಿಗೆ ತೊಂದರೆ.

ಪರಿಹಾರ: ಕಂತಿನ ಪಾತ್ರೆಯಲ್ಲಿ ಅಕ್ಕಿಯನ್ನು ತುಂಬಿ ಶುಭ್ರವಾದ ಬಿಳಿ ವಸ್ತ್ರವನ್ನು ದಾನ ಮಾಡಬೇಕು.

13.ರೇವತಿ: ರೇವತಿ ನಕ್ಷತ್ರದಲ್ಲಿ ಮಗುವು ಜನನವಾದರೆ ಮಗುವಿನ ತಂದೆಗೆ ತೊಂದರೆಯು.

ಪರಿಹಾರ: ಚಿನ್ನ ಅಥವಾ ಬೆಳ್ಳಿಯನ್ನು ದಾನ ಮಾಡುವುದು ಅದನ್ನು ಮಾಡಲು ಆಗದಿದ್ದರೆ ಗೋಧಿ ಮತ್ತು ಅಕ್ಕಿಯನ್ನು ದಾನ ಮಾಡಬೇಕು.

ಶರತ್ ಶಾಸ್ತ್ರಿ
ಜ್ಯೋತಿಷ್ಯ ಪ್ರವೀಣ
9845371416

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ವೈರಲ್ ಜ್ವರ ಹಾಗು ಪಿತ್ತ ಇನ್ನು ಅನೇಕ ರೋಗಗಳನ್ನು ಹೋಗಲಾಡಿಸುತ್ತೆ ಈ ಅಮೃತಬಳ್ಳಿ..!

ಪ್ರತಿ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ 5 ಮಿಲಿ ಅಮೃತಬಳ್ಳಿ ಬೇರು ಮತ್ತು ಹೂವಿನಿಂದ ತಯಾರಿಸಿದ ಜ್ಯೂಸ್‌ ಸೇವಿಸಿದರೆ ಬುದ್ಧಿ …

Leave a Reply

Your email address will not be published. Required fields are marked *