Breaking News
Home / Featured / ಕಾಳ ಸರ್ಪದೋಷದ ವಿಧಗಳು…!

ಕಾಳ ಸರ್ಪದೋಷದ ವಿಧಗಳು…!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ರಾಹುಗ್ರಹದಿಂದ ಪ್ರಾರಂಭವಾಗಿ ಕೇತು ಗ್ರಹದ ಮಧ್ಯದಲ್ಲಿ ಮಿಕ್ಕ ಏಳು ಗ್ರಹಗಳಿದ್ದರೆ ಅದನ್ನು ಸವ್ಯ ಕಾಳಸರ್ಪ ದೋಷ ಎನ್ನುತ್ತೇವೆ.

ಕೇತುಗ್ರಹದಿಂದ ಪ್ರಾರಂಭವಾಗಿ ರಾಹುಗ್ರಹದ ಮಧ್ಯದಲ್ಲಿ ಏಳು ಗ್ರಹಗಳಿದ್ದರೆ
ಅಪಸವ್ಯ ಕಾಳಸರ್ಪ ದೋಷ ಎನ್ನುತ್ತೇವೆ.

ಈ ಕೆಳಗೆ 12 ಕಾಳ ಸರ್ಪದೋಷದ ಬಗ್ಗೆ ವಿವರವಾಗಿ ತಿಳಿಸಲಾಗಿದೆ.

1.ಅನಂತ ಕಾಳಸರ್ಪ ದೋಷ: ಜನ್ಮ ಲಗ್ನದಿಂದ ಏಳನೇ ಸ್ಥಾನದವರೆಗೆ ರಾಹುಕೇತುಗಳ ನಡುವೆ ರವಿ, ಚಂದ್ರ, ಕುಜ, ಬುಧ, ಗುರು, ಶುಕ್ರ, ಮತ್ತು ಶನಿ ಈ ಏಳು ಗ್ರಹಗಳು ಇದ್ದರೆ ಅದನ್ನು ಅನಂತ ಕಾಳಸರ್ಪ ದೋಷ ಎನ್ನುತ್ತೇವೆ.

ಪರಿಣಾಮ: ವೈವಾಹಿಕ ಜೀವನದಲ್ಲಿ ಆರೋಗ್ಯದಲ್ಲಿ ಸಮಸ್ಯೆಗಳುಂಟಾಗತ್ತದೆ.

2. ಗುಳಿಕ ಕಾಳಸರ್ಪ ದೋಷ: ಎರಡನೇ ಸ್ಥಾನದಿಂದ ಎಂಟನೇ ಸ್ಥಾನದವರೆಗೆ ರಾಹುಕೇತು ಗ್ರಹಗಳ ನಡುವೆ 7 ಗ್ರಹಗಳು ಇದ್ದರೆ ಅದನ್ನು ಗುಳಿಕ ಕಾಳ ಸರ್ಪದೋಷ ಎನ್ನುವರು.

ಪರಿಣಾಮ: ಆರ್ಥಿಕವಾಗಿ ಹಾಗೂ ಕೌಟುಂಬಿಕವಾಗಿ ಸಮಸ್ಯೆಗಳುಂಟಾಗುತ್ತದೆ.

3. ವಾಸುಕಿ ಕಾಳಸರ್ಪದೋಷ: ಮೂರನೇ ಸ್ಥಾನದಿಂದ ಒಂಭತ್ತನೇ ಸ್ಥಾನದವರೆಗೆ ರಾಹು ಕೇತುಗಳ ನಡುವೆ 7 ಗ್ರಹಗಳು ಇದ್ದರೆ ಅದನ್ನು ವಾಸುಕಿ ಕಾಳಸರ್ಪದೋಷ ಎನ್ನುತ್ತಾರೆ.

ಪರಿಣಾಮ ಅಣ್ಣ ತಮ್ಮಂದಿರು ದಾಯಾದಿಗಳು ಮತ್ತು ಸಂಬಂಧಿಗಳಿಂದ ಸಮಸ್ಯೆಗಳುಂಟಾಗುತ್ತದೆ.

4. ಶಂಖಪಾಲ ಕಾಳಸರ್ಪದೋಷ: ನಾಲ್ಕನೇ ಸ್ಥಾನದಿಂದ ಹತ್ತನೇ ಸ್ಥಾನದವರೆಗೆ ರಾಹುಕೇತುಗಳ ನಡುವೆ 7 ಗ್ರಹಗಳು ಇದ್ದರೆ ಅದನ್ನು ಶಂಖಪಾಲ ಕಾಳಸರ್ಪ ದೋಷ ಎನ್ನುತ್ತೇವೆ.

ಪರಿಣಾಮ: ತಾಯಿ, ಮನೆ, ವಾಹನ ವಿಷಯಗಳಲ್ಲಿ ಸಮಸ್ಯೆಗಳುಂಟಾಗುತ್ತದೆ.

5. ಪದ್ಮ ಕಾಳಸರ್ಪದೋಷ: ಐದನೇ ಸ್ಥಾನದಿಂದ ಹನ್ನೊಂದನೇ ಸ್ಥಾನದವರೆಗೆ ರಾಹುಕೇತುಗಳ ನಡುವೆ 7 ಗ್ರಹಗಳು ಇದ್ದರೆ ಅದನ್ನು ಪದ್ಮಕಾಳಸರ್ಪ ದೋಷ ಎನ್ನುತ್ತೇವೆ.

ಪರಿಣಾಮ: ಜೀವನದಲ್ಲಿ ಮದುವೆ ಸಂತಾನ ಸಮಸ್ಯೆಗಳುಂಟಾಗುತ್ತದೆ.

6.ಮಹಾಪದ್ಮ ಕಾಳಸರ್ಪದೋಷ: ಆರನೇ ಸ್ಥಾನದಿಂದ ಹನ್ನೆರಡನೇ ಸ್ಥಾನದವರೆಗೆ ರಾಹುಕೇತುಗಳ ನಡುವೆ 7 ಗ್ರಹಗಳು ಇದ್ದರೆ ಅದನ್ನು ಮಹಾಪದ್ಮಕಾಳಸರ್ಪ ದೋಷ ಎನ್ನುತ್ತೇವೆ.

ಪರಿಣಾಮ: ಅನಾರೋಗ್ಯ ಶತ್ರುಭಾದೆ, ಸಾಲದ ಸಮಸ್ಯೆಗಳುಂಟಾಗುತ್ತದೆ.

7. ತಕ್ಷಕ ಕಾಳಸರ್ಪದೋಷ: ಏಳನೇ ಸ್ಥಾನದಿಂದ ಒಂದನೇ ಸ್ಥಾನದವರೆಗೆ ರಾಹುಕೇತುಗಳ ನಡುವೆ 7 ಗ್ರಹಗಳು ಇದ್ದರೆ ಅದನ್ನು ತಕ್ಷಕ ಕಾಳಸರ್ಪ ದೋಷ ಎನ್ನುತ್ತೇವೆ.

ಪರಿಣಾಮ: ವ್ಯಾಪಾರದಲ್ಲಿ ಮತ್ತು ಜೀವನದಲ್ಲಿ ಸಂಗಾತಿಯೊಂದಿಗೆ ಸಮಸ್ಯೆಗಳುಂಟಾಗುತ್ತದೆ.

8. ಕರ್ಕೋಟಕ ಕಾಳಸರ್ಪದೋಷ: ಎಂಟನೇ ಸ್ಥಾನದಿಂದ ಎರಡನೇ ಸ್ಥಾನದವರೆಗೆ ರಾಹುಕೇತುಗಳ ನಡುವೆ 7 ಗ್ರಹಗಳು ಇದ್ದರೆ ಅದನ್ನು ಕರ್ಕೋಟಕ ಕಾಳಸರ್ಪ ದೋಷ ಎನ್ನುತ್ತೇವೆ.

ಪರಿಣಾಮ: ವೈವಾಹಿಕ ಜೀವನದಲ್ಲಿ ಹೆಂಡತಿಯಿಂದ ಆರೋಗ್ಯ ವಿಷಯದಲ್ಲಿ ತೊಂದರೆ ಮತ್ತು ಅಪಘಾತಗಳಿಂದ ಸಮಸ್ಯೆಗಳು ಉಂಟಾಗುತ್ತದೆ.

9. ಶಂಖಚೂಡ ಕಾಳಸರ್ಪದೋಷ: ಒಂಭತ್ತನೇ ಸ್ಥಾನದಿಂದ ಮೂರನೇ ಸ್ಥಾನದವರೆಗೆ ರಾಹುಕೇತುಗಳ ನಡುವೆ 7 ಗ್ರಹಗಳು ಇದ್ದರೆ ಅದನ್ನು ಶಂಖಚೂಡ ಕಾಳಸರ್ಪ ದೋಷ ಎನ್ನುತ್ತೇವೆ.

ಪರಿಣಾಮ: ದುರಾದೃಷ್ಟ ನಾಸ್ತಿಕತ್ವ ಉಂಟಾಗುತ್ತದೆ ಹಾಗೂ ತಂದೆ ಗುರುಗಳ ವಿಷಯದಲ್ಲಿ ಸಮಸ್ಯೆಗಳುಂಟಾಗುತ್ತದೆ.

10. ಘಟಕ ಕಾಳಸರ್ಪದೋಷ: ಹತ್ತನೇ ಸ್ಥಾನದಿಂದ ನಾಲ್ಕನೇ ಸ್ಥಾನದವರೆಗೆ ರಾಹುಕೇತುಗಳ ನಡುವೆ 7 ಗ್ರಹಗಳು ಇದ್ದರೆ ಅದನ್ನು ಘಟಕಕಾಳಸರ್ಪ ದೋಷ ಎನ್ನುತ್ತೇವೆ.

ಪರಿಣಾಮ: ಉದ್ಯೋಗ, ವ್ಯಾಪಾರದಲ್ಲಿ ಸಮಸ್ಯೆಗಳು ಉಂಟಾಗುತ್ತದೆ.

11. ವಿಶಕ್ತ ಕಾಳಸರ್ಪದೋಷ: ಹನ್ನೊಂಗನೇ ಸ್ಥಾನದಿಂದ ಐದನೇ ಸ್ಥಾನದವರೆಗೆ ರಾಹುಕೇತುಗಳ ನಡುವೆ 7 ಗ್ರಹಗಳು ಇದ್ದರೆ ಅದನ್ನು ವಿಶಕ್ತಕಾಳಸರ್ಪ ದೋಷ ಎನ್ನುತ್ತೇವೆ.

ಪರಿಣಾಮ: ಜೀವನದಲ್ಲಿ ಲಾಭನಷ್ಟ ವಿಷಯದಲ್ಲಿ ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆಗಳು ಉಂಟಾಗುತ್ತದೆ.

12. ಶೇಷನಾಗ ಕಾಳಸರ್ಪದೋಷ: ಹನ್ನೆರಡನೇ ಸ್ಥಾನದಿಂದ ಆರನೇ ಸ್ಥಾನದವರೆಗೆ ರಾಹುಕೇತುಗಳ ನಡುವೆ 7 ಗ್ರಹಗಳು ಇದ್ದರೆ ಅದನ್ನು ಶೇಷನಾಗ ಕಾಳಸರ್ಪ ದೋಷ ಎನ್ನುತ್ತೇವೆ.

ಪರಿಣಾಮ: ಜೀವನದಲ್ಲಿ ಅಧಿಕ ಖರ್ಚು, ಶತ್ರು ಸಮಸ್ಯೆಗಳು ಉಂಟಾಗುತ್ತದೆ.

ಶರತ್ ಶಾಸ್ತ್ರಿ
ಜ್ಯೋತಿಷ್ಯ ಪ್ರವೀಣ
9845371416

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ದಕ್ಷಿಣ ಭಾರತದ ಮೊದಲ ಯುದ್ಧವಿಮಾನ ಮಹಿಳಾ ಪೈಲಟ್ ನಮ್ಮ ಕನ್ನಡ ಕುವರಿ ಚಿಕ್ಕಮಗಳೂರ ಹುಡುಗಿ..!

ಘಮಘಮಿಸುವ ಕಾಫಿಗೆ ಹೆಸರಾಗಿರುವ ಚಿಕ್ಕಮಗಳೂರಿನ ಹೆಮ್ಮೆಯ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಚಿಕ್ಕಮಗಳೂರಿನವರಾದ ಮೇಘನಾ ಶಾನಭೋಗ್ ಯುದ್ಧ ವಿಮಾನದ …

Leave a Reply

Your email address will not be published. Required fields are marked *