Breaking News
Home / Featured / ಗಂಟಲು ನೋವು,ಭೇದಿ,ರಕ್ತ ಭೇದಿ,ಬಿಳಿಸ್ರಾವ ಸಮಸ್ಯೆ ಹಾಗು ಹೇನು ನಿವಾರಣೆ ಮಾಡುತ್ತೆ ಈ ಮಾವಿನ ಹಣ್ಣು..

ಗಂಟಲು ನೋವು,ಭೇದಿ,ರಕ್ತ ಭೇದಿ,ಬಿಳಿಸ್ರಾವ ಸಮಸ್ಯೆ ಹಾಗು ಹೇನು ನಿವಾರಣೆ ಮಾಡುತ್ತೆ ಈ ಮಾವಿನ ಹಣ್ಣು..

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಮಾವಿನ ಹಣ್ಣು ತುಂಬಾನೇ ಉತ್ತಮ ಹಣ್ಣು ಇದನ್ನು ಸೇವಿಸುವುದರಿಂದ ಹಲವು ರೀತಿಯ ಲಾಭಗಳಿವೆ ಮತ್ತು ಈ ಮಾವಿನ ಹಣ್ಣಿನಿಂದ ಅನೇಕ ರೋಗಗಳನ್ನು ಹೋಗಲಾಡಿಸಬಹುದು ಹೇಗೆ ಅನ್ನೋದು ಇಲ್ಲಿದೆ ನೋಡಿ.

ಮಾವಿನ ಮರದ ತೊಗಟೆಯನ್ನು ನೀರಿನೊಡನೆ ಕಷಾಯ ಮಾಡಿ ಆ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ಶಮನವಾಗುತ್ತದೆ.

ಮಾವಿನ ಹೂವುಗಳನ್ನು ಒಣಗಿಸಿ ಪುಡಿ ಮಾಡಿ. ಆ ಪುಡಿಗೆ ಜೇನು ತುಪ್ಪ ಬೆರೆಸಿ ಸೇವಿಸಿದರೆ ಭೇದಿ ನಿಲ್ಲುತ್ತದೆ.

ಮಾವಿನ ಎಲೆಗಳನ್ನು ಸುಟ್ಟು ಬೂದಿ ಮಾಡಿ. ಆ ಬೂದಿಗೆ ಸ್ವಲ್ಪ ಸೈಂಧವ ಉಪ್ಪನ್ನು ಬೆರೆಸಿ ಹಲ್ಲು ಉಜ್ಜಿದರೆ ಹಲ್ಲು ನೋವು ನಿವಾರಣೆಯಾಗುತ್ತದೆ.

ಕೆಮ್ಮಿನಿಂದ ಧ್ವನಿ ಬದಲಾಗಿದ್ದರೆ ಮಾವಿನ ಎಲೆ ಕಷಾಯ ಮಾಡಿ ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ಧ್ವನಿ ಸರಿಯಾಗುತ್ತದೆ.

ರಕ್ತ ಭೇದಿಯಾಗುತ್ತಿದ್ದರೆ ಮಾವಿನ ಓಟೆಯೊಳಗಿನ ಸಣ್ಣ ಬೀಜವನ್ನು ಮಜ್ಜಿಗೆಗೆ ಹಾಕಿ ಕುಡಿದರೆ ರಕ್ತ ಭೇದಿ ಶಮನವಾಗುತ್ತದೆ.

ಮಾವಿನ ಮರದ ತೊಗಟೆ ಕಷಾಯವನ್ನು ಸೇವಿಸಿದರೆ ಮಹಿಳೆಯರ ಬಿಳಿಸ್ರಾವ ಸಮಸ್ಯೆ ಗುಣವಾಗುತ್ತದೆ.

ಮಾವಿನ ಬೀಜದ ಪುಡಿಗೆ ಅಳಲೆಕಾಯಿ ಪುಡಿ ಮತ್ತು ನೀರನ್ನು ಸೇರಿಸಿ ಪೇಸ್ಟ್‌ ಮಾಡಿ ತಲೆಗೆ ಪ್ಯಾಕ್‌ ಮಾಡಿದರೆ ಹೇನು ನಿವಾರಣೆಯಾಗುತ್ತದೆ.

ಹಿಮ್ಮಡಿ ಒಡೆದು ನೋವಿದ್ದರೆ ಮಾವಿನ ಅಂಟನ್ನು ಒಡೆದ ಜಾಗಕ್ಕೆ ಹಚ್ಚಿ ಬಿಸಿ ಕಾವು ಕೊಟ್ಟರೆ ನೋವು ಕಡಿಮೆಯಾಗುತ್ತದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮೈ ಕೊಬ್ಬು ಕರಗಿಸುವ ಕಬ್ಬಿನ ಹಾಲು ಹೇಗೆ ಬಳಕೆ ಮಾಡಬೇಕು ಗೊತ್ತಾ..!

ಬೊಜ್ಜು ಕರಗಿಸುವಲ್ಲಿ ಕಬ್ಬಿನ ಹಾಲು ಹೇಗೆ ಸಹಕಾರಿಯಾಗಿವೆ ಎಂಬುವುದರ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಒಂದು ಲೋಟ ಕಬ್ಬಿನ ಹಾಲು ಕುಡಿಯುವುದರಿಂದ …

Leave a Reply

Your email address will not be published. Required fields are marked *