Breaking News
Home / Featured / ಪ್ರಧಾನ ಮಂತ್ರಿಯ ವಯ ವಂದನ ಯೋಜನೆಯಲ್ಲಿ ತಿಂಗಳಿಗೆ ಹತ್ತು ಸಾವಿರ ಪಡೆಯಿರಿ ಹೇಗೆ ಅನ್ನೋದು ಇಲ್ಲಿದೆ ನೋಡಿ..!

ಪ್ರಧಾನ ಮಂತ್ರಿಯ ವಯ ವಂದನ ಯೋಜನೆಯಲ್ಲಿ ತಿಂಗಳಿಗೆ ಹತ್ತು ಸಾವಿರ ಪಡೆಯಿರಿ ಹೇಗೆ ಅನ್ನೋದು ಇಲ್ಲಿದೆ ನೋಡಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಸಂಪುಟವು ಪ್ರಧಾನ ಮಂತ್ರಿ ವಯ ವಂದನ ಯೋಜನೆಯ ಹೂಡಿಕೆ ಮಿತಿಯನ್ನು ಹೆಚ್ಚು ಮಾಡಲಾಗಿದೆ.

ವಯಸ್ಸಾದ ಸಮಯದಲ್ಲಿ ಸಾಮಾಜಿಕ ಭದ್ರತೆಯನ್ನು ಒದಗಿಸಲು 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಾದ ವ್ಯಕ್ತಿಗಳಿಗಾಗಿ ಪಿಎಂವಿವಿವೈ ಯೋಜನೆಯನ್ನು ಲೈಫ್ ಇನ್ಶುರೆನ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ (ಎಲ್ಐಸಿ) ಮೂಲಕ ಜಾರಿಗೊಳಿಸಲಾಗಿದೆ.

ತಿಂಗಳಿಗೆ ರೂ. 10,000 ಪಿಂಚಣಿ ಪ್ರಸ್ತುತ ಇದ್ದ ಹೂಡಿಕೆ ಮಿತಿಯನ್ನು ರೂ. 7.5 ಲಕ್ಷದಿಂದ ರೂ. 15 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದು ಹಿರಿಯ ನಾಗರಿಕರು ತಿಂಗಳಿಗೆ ರೂ. 10,000 ಪಿಂಚಣಿ ಪಡೆಯಲು ನೆರವಾಗಲಿದೆ.

ಚಂದಾದಾರಿಕೆ ಅವಧಿ ವಿಸ್ತಾರ ಈ ಯೋಜನೆಯ ಚಂದಾದಾರಿಕೆಯ ಅವಧಿಯನ್ನು ಎರಡು ವರ್ಷಗಳವರೆಗೆ (ಮೇ 4, 2018 ರಿಂದ ಮಾರ್ಚ್ 31, 2020)ವಿಸ್ತರಿಸಲಾಗಿದೆ. ಈ ಹಿಂದೆ ಪ್ರಧಾನಮಂತ್ರಿ ವಯ ವಂದನ ಯೋಜನೆ(PMVVY)ಯನ್ನು ಮೇ 14 2017ರಿಂದ, ಮೇ 3 2018ರವರೆಗಿನ ಒಂದು ವರ್ಷದ ಅವಧಿ ಒಳಗಾಗಿ ಖರೀದಿಸಬೇಕಾಗಿತ್ತು.

ನಿಯಮಿತ ಆದಾಯ 2018ರ ಬಜೆಟ್ ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯ ಬಂಡವಾಳ ಮಿತಿಯನ್ನು ರೂ. 15 ಲಕ್ಷಕ್ಕೆ ಹೆಚ್ಚಿಸುವುದಾಗಿ ಹೇಳಿದ್ದರು. ಸ್ಥಿರ ಠೇವಣಿ (ಎಫ್ ಡಿ) ಮೇಲಿನ ಬಡ್ಡಿದರಗಳು ಆಕರ್ಷಕವಾಗಿರದ ಸಮಯದಲ್ಲಿ ನಿಯಮಿತ ಆದಾಯ ಗಳಿಸಲು ಈ ಯೋಜನೆ ಸಹಕಾರಿಯಾಗಲಿದೆ.

ಶೇ. 8 ಬಡ್ಡಿದರ ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯಡಿ ಶೇ. 8 ರಷ್ಟು ಬಡ್ಡಿದರವನ್ನು ನೀಡಲಾಗುವುದು. ಹಿರಿಯ ನಾಗರಿಕರು ಮಾಸಿಕ 10,000 ರೂ.ವರೆಗೂ ಪಿಂಚಣಿ ಪಡೆಯಬಹುದಾಗಿದೆ. ವಾರ್ಷಿಕ, ಅರ್ಧ-ವಾರ್ಷಿಕ, ತ್ರೈಮಾಸಿಕ, ಅಥವಾ ಮಾಸಿಕ ಆಧಾರದ ಮೇಲೆ ಪಿಂಚಣಿ ಆಯ್ಕೆ ಮಾಡುವ ಮೂಲಕ ವಾರ್ಷಿಕವಾಗಿ ಶೇ. 8ರಷ್ಟು ಬಡ್ಡಿದರ ನೀಡಲಿದೆ.

2.23 ಲಕ್ಷ ಹಿರಿಯ ನಾಗರಿಕರು ಲಾಭ ಮಾರ್ಚ್ 2018ರ ವೇಳೆಗೆ, ಒಟ್ಟು 2.23 ಲಕ್ಷ ಹಿರಿಯ ನಾಗರಿಕರು ಪ್ರಧಾನ ಮಂತ್ರಿ ವಯ ವಂದನ ಯೋಜನೆ(ಪಿಎಂವಿವಿವೈ) ಅಡಿಯಲ್ಲಿ ನಿಯಮಿತ ಪಿಂಚಣಿ ಪಡೆಯುತ್ತಿದ್ದಾರೆ. ಪಿಎಂವಿವಿವೈ ಅನ್ನು ಆಫ್ಲೈನ್ ನಲ್ಲಿ ಮತ್ತು ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ (ಎಲ್ಐಸಿ) ಮೂಲಕ ಆನ್ಲೈನ್ ನಲ್ಲಿ ಖರೀದಿಸಬಹುದು.

10 ವರ್ಷಗಳ ಪಾಲಿಸಿ ಅವಧಿ ನಂತರ? 10 ವರ್ಷಗಳ ಪಾಲಿಸಿ ಅವಧಿಯ ಕೊನೆಯಲ್ಲಿ, ಪಿಂಚಣಿದಾರರು ಅಂತಿಮ ಪಿಂಚಣಿ ಕಂತುಗಳೊಂದಿಗೆ ಖರೀದಿ ದರವನ್ನು (ಪಿಂಚಣಿಗಾಗಿ ಹೂಡಿಕೆ ಮಾಡಲಾದ ಹಣ) ಹಿಂಪಡೆಯುತ್ತಾರೆ. 10 ವರ್ಷಗಳ ಪಾಲಿಸಿಯ ಅವಧಿಯಲ್ಲಿ ಪಿಂಚಣಿದಾರನ ಮರಣದ ನಂತರ ಅವರ ಫಲಾನುಭವಿಗೆ ಮೊತ್ತವನ್ನು ಪಾವತಿಸಲಾಗುವುದು.

ಕೃಪೆ:ಒನ್ ಇಂಡಿಯಾ

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಫಲ ಹೇಗಿದೆ ನೋಡಿ ಶುಭ ಅಶುಭ ಫಲಗಳ ಲೆಕ್ಕಾಚಾರ ಪಂಡಿತ್ ಸುದರ್ಶನ್ ಭಟ್ ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ …

Leave a Reply

Your email address will not be published. Required fields are marked *